ಸುದ್ದಿ9 ಮೂಡುಬಿದರೆ: ಮೂಡುಬಿದರೆ ವಲಯದ ಯೋಗ ಸಂಘಟಕ ಶಂಕರ ನಾಯ್ಕ್ ಅವರಿಗೆ ಯೋಗ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಬೆಂಗಳೂರಲ್ಲಿ ಭಾನುವಾರ ಯೋಗಾಚಾರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನೀಡಲ್ಪಡುವ ಪ್ರಶಸ್ತಿಯ ಪ್ರದಾನ ಸಮಾರಂಭವನ್ನು ಬೆಂಗಳೂರಿನ ಯೋಗ ಫೌಂಡೇಶನ್ ಮತ್ತು ಶಿವಜ್ಯೋತಿ ಯೋಗ ಕೇಂದ್ರ ಜಂಟಿಯಾಗಿ ಆಯೋಜಿಸಿತ್ತು.
ಶಂಕರ ನಾಯ್ಕ್, ಇಂಡಿಯಾನ್ ಸ್ಕೂಲ್ ಆಫ್ ಯೋಗ ಇವರು ನಡೆಸಿರುವ ಡಿಪ್ಲೊಮ ಇನ್ ಯೋಗ ಥೆರಪಿ ಮತ್ತು ವೇದವ್ಯಾಸ ಯೋಗ ಯುನಿವರ್ಸಿಟಿ ಬೆಂಗಳೂರು ಇವರು ನಡೆಸಿದ ಯೋಗ ಭೂಷಣ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. 2015ರ ಜುಲೈನಲ್ಲಿ ಏಷ್ಯಾದ ವಿಯೆಟ್ನಾಂನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯ ತೀರ್ಪುಗಾರರಾಗಿ ಇವರು ಆಯ್ಕೆಯಾಗಿದ್ದಾರೆ. ಕಲ್ಲಮುಂಡ್ಕೂರು ಸರ್ವೋದಯ ಪ್ರೌಢಶಾಲೆ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
