ಬಜ್ಪೆ: ಬಜ್ಪೆ ತೊಟ್ಟಿಲ ಗುರಿ ದುರಂತದ ನಿರಾಶ್ರಿತರಿಗೆ ಪೊರ್ಕೊಡಿ ಪ್ರದೇಶದಲ್ಲಿ ಪುನರ್ವಸತಿ ನೆಲೆಯನ್ನು ಆರಂಭಿಸಲಾಗಿದೆ. ಆದರೆ ಈ ಕೇಂದ್ರದಿಂದ ಮನೆ ನಿರ್ಮಿಸಲು ಉಪಯೋಗಿಸುವ ಸಾಮಗ್ರಿಗಳು ಕಳವಾದ ಘಟನೆ ಫೆ.6ರಿಂದ ಫೆ.9ರ ಮಧ್ಯೆ ನಡೆದಿದೆ.
ತೊಟ್ಟಿಲ ಗುರಿ ಪುನರ್ವಸತಿ ಕಾಲನಿಯಲ್ಲಿ ಪುನರ್ವಸತಿ ಕಾಮಗಾರಿ ನಡೆಸುತ್ತಿದ್ದ ಸ್ಥಳದಿಂದ ಕಾಮಗಾರಿಗೆ ಬೇಕಾದ ಸಾಮಗ್ರಿಗಳಾದ ಕಾಂಕ್ರಿಟ್ ಹ್ಯಾಂಡ್ ಮಶಿನ್ -1, ಕಾಂಕ್ರಿಟ್ ಐರನ್ ಶಿಟ್ -1, ಸ್ಕೇಫ್ ಪೊಲ್ಡಿಂಗ್ ಹೀಗೆ ಸುಮಾರು 35000 ರೂ. ಬೆಲೆ ಬಾಳುವ ಸೊತ್ತುಗಳು ಕಳವಿಗೀಡಾಗಿದೆ. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

By suddi9

Leave a Reply

Your email address will not be published. Required fields are marked *