ಬಜ್ಪೆ: ಬಜ್ಪೆ ಸಮೀಪದ ಮಳವೂರು ಸೇತುವೆ ಬಳಿ ರೈಲು ಹೋಗುವ ದಾರಿಯಲ್ಲಿ ನಿರ್ಮಿಸಲಾಗಿದ್ದ ರೈಲು ಹಳಿಯ ಕಮಾನಿಗೆ ರೈಲಿನ ಮೇಲ್ಬಾಗದಲ್ಲಿ ಇರಿಸಲಾಗಿದ್ದ ಕಂಬ ಡಿಕ್ಕಿ ಹೊಡೆದು ಕಮಾನು ತುಂಡಾಗಿ ಬಿದ್ದ ಘಟನೆ ಇಂದು ಮಧ್ಯಾಹ್ನ 10 ಸುಮಾರಿಗೆ ಸಂಭವಿಸಿದೆ.
ಕಮಾನಿನ ಕಂಬ ತುಂಡಾಗಿ ಬಿದ್ದ ಕಾರಣ ರಸ್ತೆ ಸಂಚಾರದಲ್ಲಿ ಸ್ವಲ್ಪ ಹೊತ್ತು ಅಸ್ತವ್ಯಸ್ತ ಉಂಟಾಗಿತ್ತು. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಬಜ್ಪೆಪೊಲೀಸರು ತಿಳಿಸಿದ್ದಾರೆ.
ಆದರೆ ಕಂಬ ಸಂಪೂರ್ಣವಾಗಿ ಧರಶಾಹಿಯಾಗಿದ್ದು ತುಂಡಾಗಿದೆ. ಗೂಡ್ಸ್ ರೈಲಿ ಡಿಕ್ಕಿ ಹೊಡೆದಿದ್ದು, ಯಾರಿಗೂ ಯಾವುದೇ ಅಪಾಯ ಸಂಭವಿಸಲಿಲ್ಲ. ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದ ಪುಡಿಯಾದ ಸೊತ್ತುಗಳನ್ನು ವಿಲೇವಾರಿಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.



