ನವದೆಹಲಿ: 194 ಪ್ರಯಾಣಿಕರು ಹಾಗೂ ಏಳು ಸಿಬ್ಬಂದಿಯನ್ನು ಹೊತ್ತು ಮಂಗಳೂರಿನಿಂದ ಮುಂಬೈ ಮಾರ್ಗವಾಗಿ ನವದೆಹಲಿಗೆ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನ ಮುಂಬೈ ಏರ್‌ಪೋರ್ಟ್‌ನಲ್ಲಿ ಸ್ವಲ್ಪದರಲ್ಲೇ ಭಾರಿ ಅನಾಹುತವೊಂದರಿಂದ ಪಾರಾಗಿರುವ ಘಟನೆ ನಡೆದಿದೆ.

AirIndia-18-2

ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿರುವಾಗ ಏರ್‌ ಇಂಡಿಯಾ ವಿಮಾನದ ಹಿಂಭಾಗ (ಬಾಲ) ನೆಲಕ್ಕೆ ಉಜ್ಜಿಕೊಂಡು ಹೋಗಿದೆ. ಆದರೆ ಈ ವೇಳೆ ಯಾವುದೇ ಅಪಾಯವಾಗಿಲ್ಲ. ಕಳೆದ ಭಾನುವಾರ ನಡೆದ ಈ ಘಟನೆಯನ್ನು ಏರ್‌ ಇಂಡಿಯಾ ವಕ್ತಾರರು ಕೂಡ ಖಚಿತಪಡಿಸಿದ್ದಾರೆ.

ಅಂದು ವಿಮಾನದಲ್ಲಿದ್ದ ಸಿಬ್ಬಂದಿಯನ್ನು ರಜೆ ಮೇಲೆ ಕಳುಹಿಸಲಾಗಿದೆ. ಅವಘಡಕ್ಕೀಡಾದ ಏರ್‌ಬಸ್‌ 321 ವಿಮಾನವನ್ನು ಈಗ ಸೇವೆಯಿಂದ ಹಿಂಪಡೆಯಲಾಗಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಈ ಘಟನೆ ಕುರಿತು ತನಿಖೆ ಆರಂಭಿಸಿದೆ. ಏರ್‌ ಇಂಡಿಯಾ ಕೂಡ ಆಂತರಿಕ ತನಿಖೆ ನಡೆಸುತ್ತಿದೆ ಎಂದು ವಕ್ತಾರರು ಹೇಳಿದ್ದಾರೆ.

By suddi9

Leave a Reply

Your email address will not be published. Required fields are marked *