ಭುವನೇಶ್ವರ: ಅಣ್ವಸ್ತ್ರ ಕ್ಷಿಪಣಿ ‘ಪೃಥ್ವಿ– 2’ರ ಪ್ರಯೋಗಾರ್ಥ ಪರೀಕ್ಷೆ ಗುರುವಾರ ಯಶಸ್ವಿಯಾಗಿ ನಡೆದಿದೆ.

ಬಾಲಸೋರ್ ಜಿಲ್ಲೆಯ ಚಾಂದಿಪುರ ಉಡಾವಣಾ ಕೇಂದ್ರದಲ್ಲಿ ಗುರುವಾರ ನಡೆದ ಪ್ರಯೋಗಾರ್ಥ ಪರೀಕ್ಷೆಯಲ್ಲಿ ನಿಗದಿತ ದೂರ ಕ್ರಮಿಸುವಲ್ಲಿ ಕ್ಷಿಪಣಿ ಯಶಸ್ವಿಯಾಯಿತು.ಗರಿಷ್ಠ 350 ಕಿ.ಮೀ ದೂರಕ್ಕೆ ಚಿಮ್ಮುವ ಸಾಮರ್ಥ್ಯದ ಕ್ಷಿಪಣಿ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಪ್ರಯೋಗಾತ್ಮಕ ಪರೀಕ್ಷೆಯಲ್ಲಿ ಕ್ಷಿಪಣಿ ಸಂಪೂರ್ಣ ಯಶಸ್ವಿಯಾಗಿದೆ’ ಎಂದು ಸಮಗ್ರ ಕ್ಷಿಪಣಿ ಪರೀಕ್ಷಾರ್ಥ ಉಡಾವಣಾ ಕೇಂದ್ರದ (ಐಟಿಆರ್) ನಿರ್ದೇಶಕ ಎಂ.ವಿ.ಕೆ.ವಿ.ಪ್ರಸಾದ್ ಅವರು ಹೇಳಿದ್ದಾರೆ.