ಬಂಟ್ವಾಳ: ಬಾಲಕನೋರ್ವ ಸಾವಿರಾರು ರೂ ನಗದು ಸಹಿತ ಕಾಣೆಯಾದ ಪ್ರಕರಣ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಣೆಯಾದ ಬಾಲಕನನ್ನು 12 ವರ್ಷ ಪ್ರಾಯದ ಅನಿಲ್ ಎನ್ನಲಾಗಿದೆ. ಬಂಟ್ವಾಲ ತಾಲೂಕಿನ ಸಜೀಪ ಮೂಡ ಗ್ರಾಮದ ಕೊಳಕೆ ನಿವಾಸಿ ಸೋಮಪ್ಪ ಅವರ ಮಗ ಅನಿಲ್ ವಿನಾ ಕಾರಣ ನೀಡಿ ಶಾಲೆಗೆ ಹೋಗದೆ ಮನೆಯಲ್ಲಿ ಕುಳಿತುಕೊಂಡಿದ್ದ.
DSC_2257
ತಂದೆ ಮತ್ತು ತಾಯಿ ಕೆಲಸಕ್ಕೆ ಹೋದ ಸಂದರ್ಭ ಅನಿಲ್ ಮನೆಯ ಕಪಾಟಿನಲ್ಲಿ ಇಟ್ಟಿದ್ದ ರೂ 18 ಸಾವಿರ ಹಿಡಿದುಕೊಂಡು ಮನೆಯಿಂದ ಹೋದವನು ವಾಪಾಸು ಬರದೆ ಕಾಣೆಯಾಗಿದ್ದಾನೆ ಎಮದು ಬಾಲಕನ ತಂದೆ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕನ್ನಡ ಭಾಷೆ ಮಾತನಾಡುವ ಈತ ಕಪ್ಪು ಶಟರ್ು ನೀಲಿ ಚಡ್ಡಿ ಧರಿಸಿದ್ದ. ಕಪ್ಪು ಕೂದಲು ಗೋದಿ ಮೈ ಬಣ್ಣದ ಈತನ ಗುರುತು ಸಿಕ್ಕಿದವರು ನಗರ ಠಾಣೆಯ ಪೋಲಿಸ್ ಉಪನಿರೀಕ್ಷಕರಿಗೆ ದೂರವಾಣಿ ಸಂಖ್ಯೆ 08255232111 ಗೆ ತಿಳಿಸುವಂತೆ ಕೋರಿದ್ದಾರೆ.

By suddi9

Leave a Reply

Your email address will not be published. Required fields are marked *