ಬಂಟ್ವಾಳ:ತಾಲ್ಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿನಲ್ಲಿ ಸೋಮವಾರ ಸಂಜೆ ನಡೆದ ನರಿಕೊಂಬು ಮತ್ತು ಶಂಭೂರು ಗ್ರಾಮ ಭೇಟಿ ಕಾರ್ಯಕ್ರಮದಲ್ಲಿ ಒಟ್ಟು ರೂ 75.5ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಚಾಲನೆ ನೀಡಿ ಅರ್ಹ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಿದರು.
ಎಎಂಆರ್ ಪವರ್ ಪ್ರಾಜೆಕ್ಟ್ ವತಿಯಿಂದ ರೂ 40 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಬಿಕ್ರೋಡಿ- ಕಲ್ಲಗುಡ್ಡೆ ಕಾಂಕ್ರಿಟ್ ರಸ್ತೆ, ಸಣ್ಣಕುಕ್ಕು -ಮುಗೇರಪಡ್ಪು ರಸ್ತೆ ಡಾಂಬರೀಕರಣ, ಶ್ರೀಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ರಸ್ತೆ ಡಾಂಬರೀಕರಣ, ಅಡೆಪಿಲ ಕ್ರಾಸ್ ರೋಡ್ ಕಾಂಕ್ರಿಟೀಕರಣ, ಏಲಬೆ -ಪಂಜುರ್ಲಿ ಗುಡ್ಡೆ ರಸ್ತೆ ಕಾಂಕ್ರಿಟೀಕರಣ, ಬಸ್ರ-ನರಿಕೊಂಬು ಕಾಂಕ್ರಿಟ್ ರಸ್ತೆ ಉದ್ಘಾಟಿಸಿದರು.
ಇದೇ ವೇಳೆ ರೂ 17 ಲಕ್ಷ ವೆಚ್ಚದಲ್ಲಿ ನರಿಕೊಂಬು ಗ್ರಾಮದ ಬುಡಾಡಿ- ಕಾಂಕ್ರಿಟ್ ರಸ್ತೆ, ಅಂತರ-ನಿನ್ನಿಪಡ್ಪು ರಸ್ತೆ ಡಾಂಬರೀಕರಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು.
10btl-narikombu
ನಾಟಿ ಬೀದಿ ಶ್ರೀ ಕೋದಂಡರಾಮಚಂದ್ರ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿ, ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ, ಶಂಭೂರು ಅರಣ್ಯ ಇಲಾಖೆ ನರ್ಸರಿಗೆ ಸಚಿವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ವೀಕ್ಷಿಸಿದರು.
ಜಿ.ಪಂ.ಸದಸ್ಯೆ ಮಮತಾ ಡಿ.ಎಸ್ ಗಟ್ಟಿ ಅವರ ಅನುದಾನದಿಂದ ಶಂಭೂರು ಗ್ರಾಮ ಕಕ್ಕೆಮಜಲು ಎಂಬಲ್ಲಿ ರೂ 8ಲಕ್ಷ ವೆಚ್ಚದಲ್ಲಿ ನಿರ್ಮಾ ಮಣ ಗೊಂಡ ಕುಡಿಯುವ ನೀರಿನ ಟ್ಯಾಂಕ್, ರೂ.2.5ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ, ಶಂಭೂರು ಗ್ರಾಮದಲ್ಲಿ ರೂ 8ಲಕ್ಷ ವೆಚ್ಚದ ಕುಡಿಯುವ ನೀರಿನ ಪೈಪ್ಲೈನ್ ವಿಸ್ತರಣೆ ಕಾಮಗಾರಿ ಉದ್ಘಾಟಿಸಲಾಯಿತು.
ತಾ.ಪಂ. ಸದಸ್ಯ ಆನಂದ ಎ. ಶಂಭೂರು , ಜನಜಾಗೃತಿ ಸಮಿತಿ ಅಧ್ಯಕ್ಷ ಎನ್.ಪ್ರಕಾಶ್ ಕಾರಂತ, ಕಾರ್ಯದರ್ಶಿ  ಮಂಜುನಾಥ ಭಟ್, ನರಿಕೊಂಬು ಗ್ರಾ.ಪಂ. ಅಧ್ಯಕ್ಷೆ ಸುಮತಿ ಸದಾನಂದ, ನಿಕಟಪೂರ್ವ ಅಧ್ಯಕ್ಷ ಆನಂದ ಸಾಲ್ಯಾನ್, ಗ್ರಾ.ಪಂ. ಸದಸ್ಯರಾದ ರವೀಂದ್ರ ಸಪಲ್ಯ, ಕೃಷ್ಣಪ್ಪ ಪೂಜಾರಿ, ವಿಶ್ವನಾಥ ಪೂಜಾರಿ, ಲಿಂಗಪ್ಪ ಕೊಟ್ಟಾರಿ, ಜಯರಾಜ್ ಕಾಂಚನ್, ಗ್ರೆಗೋರಿ ಬ್ಯಾಪ್ಟಿಸ್ಟ್, ಯಶೋದರ ಕರ್ಬೆಟ್ಟು, ಶೇಖರ ಪೂಜಾರಿ, ಬೇಬಿ, ಜಾನಕಿ. ಕೆಡಿಪಿ ಸದಸ್ಯ ಉಮೇಶ ಬೋಳಂತೂರು, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ಬಾಸ್ ಅಲಿ, ಚಂದ್ರಶೇಖರ ಪಾತೂರು, ಪ್ರಮುಖರಾದ ಅಲೋನ್ಸ್ ಮಿನೇಜಸ್, ಅಲ್ಬಟರ್್ ಮಿನೇಜಸ್, ಎಎಂಆರ್ ಸಂಸ್ಥೆಯ ಸಂಕಪ್ಪ ಶೆಟ್ಟಿ, ಪ್ರೇಮನಾಥ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ, ಉಪತಹಶೀಲ್ದಾರ್ ರೋಹಿನಾಥ್, ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿ, ಕಂದಾಯ ಅಧಿಕಾರಿ ಎ.ಪಿ. ಭಟ್ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *