ಬಂಟ್ವಾಳ : ನರಿಕೊಂಬು ಗ್ರಾ.ಪಂ.ವ್ಯಾಪ್ತಿಯಲ್ಲಿ ಎ.ಎಮ್.ಆರ್ ವತಿಯಿಂದ ರೂ.5ಲಕ್ಷ ವೆಚ್ಚದಲ್ಲಿ ಬಿಕ್ರುಕೋಡಿ-ಕಲ್ಲಗುಡ್ಡೆ ರಸ್ತೆ ಕಾಂಕ್ರೀಟಿಕರಣದ ಉದ್ಘಾಟನೆಯನ್ನು ಜಿ.ಪಂ.ಸದಸ್ಯೆ ಮಮತಾ ಗಟ್ಟಿ ನೆರವೇರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ , ಎ.ಎಮ್.ಆರ್ ನ ಸಂಕಪ್ಪ ಶೆಟ್ಟಿ , ಪ್ರೇಮ್ ನಾಥ್ ಟಿ. , ನಾಗರಿಕ ಜಾಗೃತಿ ಸಮಿತಿ ಅಧ್ಯಕ್ಷ ಪ್ರಕಾಶ್ ಕಾರಂತ್ , ಮಂಜುನಾಥ್ ಭಟ್ , ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ, ಗ್ರಾ.ಪಂ.ಅಧ್ಯಕ್ಷೆ ಸುಮತಿ ಸದಾನಂದ , ಕೆ.ಡಿ.ಪಿ.ಸದಸ್ಯ ಉಮೇಶ್ ಬೋಳಂತೂರು , ಪ್ರಮುಖರಾದ ಅಲ್ಫೋನ್ಸ್ ಮೆನೆಜಸ್ , ಅಲ್ಬರ್ಟ್ ಮೆನೆಜಸ್ , ವಿಶ್ವನಾಥ ಕೊಡಂಗೆಕೋಡಿ , ರವೀಂದ್ರ ಸಪಲ್ಯ , ದಿವಾಕರ ಕರೆಬೆಟ್ಟು , ಸುಲೈಮಾನ್ ಮತ್ತಿತರರು ಉಪಸ್ಥಿತರಿದ್ದರು .