ಬಂಟ್ವಾಳ : ಸಜಿಪ-ಮೂಡ ಗ್ರಾ.ಪಂ.ವ್ಯಾಪ್ತಿಯ ರೂ.1ಲಕ್ಷ ವೆಚ್ಚದಲ್ಲಿ ಬೊಳ್ಳಾಯಿ ಮುಖ್ಯ ರಸ್ತೆ ಚರಂಡಿ ರಚನೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುದ್ದಲಿ ಪೂಜೆ ನೆರವೇರಿಸಿದರು.

ಜಿಲ್ಲಾ ಪಂ.ಸದಸ್ಯೆ ಮಮತಾ ಗಟ್ಟಿ , ಭೂ ಬ್ಯಾಂಕ್ ಉಪಾಧ್ಯಕ್ಷ ಸಂಜೀವ ಪೂಜಾರಿ , ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ , ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ನರೇಂದ್ರ ಬಾಬು , ಇಂಜಿನಿಯರ್ ಅಜಿತ್ ಕುಮಾರ್ , ಗುತ್ತಿಗೆದಾರ ಇಕ್ಬಾಲ್ , ಪ್ರಮುಖರಾದ ಎಸ್.ಅಬ್ಬಾಸ್ , ವಿಶ್ವನಾಥ ಬೆಳ್ಚಡ , ಕೆರೀಂ, ಅಝೀಝ್ ಬೊಳ್ಳಾಯಿ, ರೆಮಾಂಡ್ ಅಂದ್ರಾದೆ ಮತ್ತಿತರರು ಉಪಸ್ಥಿತರಿದ್ದರು .