ಬಂಟ್ವಾಳ ತಾಲ್ಲೂಕಿನ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿ.ಸಿ.ರೋಡ್ನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಉದಯ ಕುಮಾರ್ ಮತ್ತಿತರರು ಇದ್ದಾರೆ.
ಬಂಟ್ವಾಳ: ರಾಜ್ಯದಲ್ಲಿ ಬಿಸಿಯೂಟ ನೌಕರರಿಗೆ ಕಡಿಮೆ ಮೊತ್ತದ ಮಾಸಿಕ ಗೌರವಧನ ನೀಡಿ ದುಡಿಸುವ ಮೂಲಕ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಸಿಐಟಿಯು ತಾಲ್ಲೂಕು ಕಾರ್ಯದಶರ್ಿ ರಾಮಣ್ಣ ವಿಟ್ಲ ಆರೋಪಿಸಿದ್ದಾರೆ.
ತಾಲ್ಲೂಕಿನ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿ.ಸಿ.ರೋಡ್ನಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಇವರಿಗೆ ರೂ 3ಸಾವಿರ ಮಾಸಿಕ ಗೌರವವೇತನ ನೀಡುವುದರ ಜೊತೆಗೆ ಕೇಂದ್ರ ಸರ್ಕಾರವು ರೂ ಒಂದು ಸಾವಿರ ಹೆಚ್ಚಿಸಬೇಕು. ಉದ್ಯೋಗ ಖಾತ್ರಿ ಜೊತೆಗೆ ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಶಾಲಾ ಮಕ್ಕಳ ಬಿಸಿಯೂಟಕ್ಕೆ ಗುತ್ತಿಗೆ ವಹಿಸಿಕೊಂಡಿರುವ ಇಸ್ಕಾನ್ ಸಂಸ್ಥೆ ವಿದೇಶದಲ್ಲಿ ಚಂದಾ ಸಂಗ್ರಹಿಸುತ್ತಿದೆ ಎಂದು ಅವರು ಟೀಕಿಸಿದರು.
ಸಿಐಟಿಯು ಮುಖಂಡ ಉದಯ ಕುಮಾರ್ ಬಂಟ್ವಾಳ, ಪುಷ್ಪಾ ಬಿ. ಕೆ, ಲಲಿತಾಂಬಿಕೆ, ಯಶೋಧಾ, ಸುಂದರಿ ಮಲ್ಲಡ್ಕ, ತುಳಸೀದಾಸ್ ಮತ್ತಿತರರು ಇದ್ದರು.