ಬಂಟ್ವಾಳ: ಇಲ್ಲಿಗೆ ಸುಸಜ್ಜಿತ ಆಸ್ಪತ್ರೆ ಯೊಂದು ಬೇಕು ಎನ್ನುವ ಕೂಗು ಹಲವು ವರ್ಷಗಳ ಹಿಂದಿನದು. ಅದಕ್ಕೆ ಮಂಜೂರಾತಿ ಸಿಕ್ಕಿ ಹಲವು ವರ್ಷ ಕಳೆದರೂ ಬಂಟ್ವಾಳದ ಜನತೆಗೆ ಮಾತ್ರ 100 ಹಾಸಿಗೆಯ ಆಸ್ಪತ್ರೆಯ ಬಾಗ್ಯ ಇನ್ನು ಕೂಡಾ ಸಿಗದೆ ಕಾಮಗಾರಿಯಲ್ಲಿ ಮೀನಮೇಷ ಎಣಿಸುತ್ತಿರುವುದರ ವಿರುದ್ದ ಇಲ್ಲಿನ ಸಾರ್ವಜನಿಕರು ಸಿಡಿದೆದ್ದಿದ್ದಾರೆ. ಸಾರ್ವಜನಿಕರಿಗೆ ಬಹು ಉಪಯೋಗವುಳ್ಳ 100 ಹಾಸಿಗೆಯ ಸರಕಾರಿ ಆಸ್ಪತ್ರೆಯನ್ನು ನಿರ್ಮಾಣ ಮಾಡುತ್ತಾರೆ ಎಂದು ಕಾದು ಕೈಕಟ್ಟಿ ಕಾದು ಕುಳಿತ ಜನರು ಖಾಸಗಿ ಆಸ್ಪತ್ರೆಯ ಬಾಗಿಲು ಬಡಿಯುತ್ತಿದ್ದಾರೆ. ಸರಿಯಾಗಿ ನೀರಿನ ವ್ಯವಸ್ಥೆ ಇಲ್ಲದೆ, ಮಲಗಲು ಬೆಡ್ ಸಿಗದೆ, ಜಾಗ ಇಲ್ಲದ ನರಕ ಸದೃಸ ಆಸ್ಪತ್ರೆಯಿಂದ ನಮಗೆ ಮುಕ್ತಿ ನೀಡಯ್ಯ ಎಂದು ಹೇಳುತ್ತಿದ್ದಾರೆ ಬಂಟ್ವಾಳ ಜನತೆ.

DSC_3120

DSC_3118
ಬಂಟ್ವಾಳ ಸರ್ಕಾರಿ ಆಸ್ಪತ್ರೆಯನ್ನು 30 ಹಾಸಿಗೆಯಿಂದ 100 ಹಾಸಿಗೆಯ ಕಟ್ಟಡಕ್ಕೆ ಮೇಲ್ದಜೇಗೇರಿಸುವ ಕಾಮಗಾರಿ ನಿರೀಕ್ಷಿತ ವೇಗ ಪಡದುಕೊಳ್ಳದ ಹಿನ್ನಲೆಯಲ್ಲಿ ಬಡರೋಗಿಗಳು ತೊಂದರೆ ಪಡುತ್ತಿದ್ದಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು ಸದ್ಯಕ್ಕೆ ಪೂರ್ಣಗೊಳ್ಳುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಇದರಿಂದಾಗಿ ಸರ್ಕಾರಕ್ಕೆ  ಬಿಸಿಮುಟ್ಟಿಸುವ ನಿಟ್ಟಿನಲ್ಲಿ ಆಸ್ಪತ್ರೆಯ ಮುಂಭಾಗ ಧರಣಿ ನಡಸಲು ಬಿಜೆಪಿ ನಿರ್ಧರಿಸಿದೆ.
2012ರಲ್ಲಿ  ಕಟ್ಟಡ ನಿರ್ಮಾಣಕ್ಕೆ  ಮಂಜೂರಾತಿ ಸಿಕ್ಕಿತ್ತು. 2007ರ ಅಗೋಸ್ಟ್ 27ರಂದು ಆಗಿನ ರಾಜ್ಯ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಆಸ್ಪತ್ರೆ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಉಪಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸುವಾರಿ ಸಚಿವ ಬಿ.ನಾಗರಾಜ ಶೆಟ್ಟಿ ಮತ್ತಿತರರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

2012ರಲ್ಲಿ ಆಸ್ಪತ್ರೆ ಮೇಲ್ದಜೇಗೇರಿಸುವ ಪ್ರಕ್ರಿಯೆಗೆ ಆಡಳಿತ ಮಂಜೂರಾತಿ ದೊರಕಿದ್ದು 100 ಹಾಸಿಗೆ ಸಾಮಥ್ರ್ಯದ ಕಟ್ಟಡವನ್ನು ರು. 5.87 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಸಲು ಕ್ರಿಯಾಯೋಜನೆ ಸಿದ್ದ ಪಡಿಸಲಾಯಿತು. ಈಗಿನ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈಯವರ ಮುತುವರ್ಜಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆಯನ್ನು ನೀಡಿಲಾಯಿತು. ಇದೀಗ ಎರಡೂ ವರ್ಷ ಕಳೆದರೂ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿಲ್ಲದೆ ಇರುವುದು ಸಹಜವಾಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರತಿಭಟನೆಗೆ ಸಿದ್ದತೆ:
ಆಸ್ಪತ್ರೆ ಕಟ್ಟಡದ ವಿಳಂಬ ಕಾಮಗಾರಿಯನ್ನು ವಿರೋಧಿ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಎಂ. ತುಂಗಪ್ಪ ಬಂಗೇರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ಬೆಳಿಗ್ಗೆ 10 ಗಂಟೆಗೆ ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ. 9 ವರ್ಷಗಳ ಹಿಂದೆಯೇ ಆಸ್ಪತ್ರೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದ್ದರೂ ಕಟ್ಟಡ ನಿರ್ಮಾಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ರಾಜ್ಯ ಆರೋಗ್ಯ ಸಚಿವರು ಈ ಜಿಲ್ಲೆಯವರೇ ಆಗಿದ್ದು, ಜಿಲ್ಲೆಯ ಉಸ್ತುವಾರಿ ಸಚಿವರು ಬಂಟ್ವಾಳ ತಾಲೂಕಿನವರೇ ಆಗಿದ್ದರೂ ತಾಲೂಕಿನಲ್ಲಿರುವ ಸರ್ಕಾರಿ ಆಸ್ಪತ್ರೆ ಕಟ್ಟಡ ವಿಳಂಬಗೊಳ್ಳುತ್ತಿರುವ ಬಗ್ಗೆ ಯಾಕೆ ಕಾಳಜಿ ವಹಿಸುತ್ತಿಲ್ಲ ಎಂದು ತುಂಗಪ್ಪ ಬಂಗೇರಾ ಪ್ರಶ್ನಿಸಿದ್ದಾರೆ.

By suddi9

Leave a Reply

Your email address will not be published. Required fields are marked *