ನವದೆಹಲಿ: ನಿಗೂಢವಾಗಿ ಸಾವನ್ನಪ್ಪಿರುವ ಡಿ.ಕೆ.ರವಿ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸ್ಪಷ್ಟ ಸೂಚನೆ ನೀಡಿರುವುದಾಗಿ ಹೇಳಲಾಗಿದೆ.

ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಹಾಗೂ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ದಿಗ್ವಿಜಯ್ ಸಿಂಗ್ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ದೂರವಾಣಿಯಲ್ಲಿ ಈ ಸೂಚನೆ ನೀಡಿದ್ದರೆನ್ನಲಾಗಿದೆ.

download

ರಾಜ್ಯದ ಜನ ಸಿಬಿಐ ತನಿಖೆ ಬಯಸುತ್ತಿರುವಾಗ ಸಿಐಡಿಯೇ ಸಾಕು ಎನ್ನುವ ಹಠ ಯಾಕೆ ಎಂದು ದಿಗ್ವಿಜಯ್ ಸಿಂಗ್ ಪ್ರಶ್ನೆ ಮಾಡಿದ್ದು ಅದಕ್ಕೆ ಸಿದ್ಧರಾಮಯ್ಯ ಅವರೂ ಸಮಜಾಯಿಷಿ ನೀಡದರೆನ್ನಲಗಿದೆ.

ಏನೇ ಆದರೂ ಈ ಪ್ರಕರಣವನ್ನು ಸಿಬಿಐಗೆ ವಹಿಸಿ, ಇಲ್ಲದಿದ್ದರೆ ನಿರ್ಭಯ ಪ್ರಕರಣದಿಂದಾಗಿ ದೆಹಲಿಯಲ್ಲಿ ಆಡಳಿತ ಕಳೆದುಕೊಂಡಿರುವಂತೆ ಇಲ್ಲೂ ಅದರ ಪರಿಣಾಮ ಉಂಟಾಗಬಹುದು ಎನ್ನುವ ಎಚ್ಚರಿಕೆ ಕೊಟ್ಟರೆಂದು ಮೂಲಗಳು ಹೇಳಿವೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ವಿಧಾನ ಮಂಡಲದ ಕಲಾಪದ ವೇಳೆ ಈಗ ಆಗಿರುವ ತನಿಖೆಯ ಮಾಹಿತಿ ನೀಡಿ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸುವುದಾಗಿ ಪ್ರಕಟಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

By suddi9

Leave a Reply

Your email address will not be published. Required fields are marked *