ಮುಂಬೈ: ಪಾನಮತ್ತನಾಗಿದ್ದ ಯುವಕನೊಬ್ಬ ರೈಲು ನಿಲ್ದಾಣದಲ್ಲಿ ಹಾಡಹಗಲೇ ಯುವತಿಯನ್ನು ಅಶ್ಲೀಲವಾಗಿ ಚುಡಾಯಿಸಿದ್ದು, ಸಹಾಯಕ್ಕಾಗಿ ಯಾಚಿದರೂ ಯಾರೂ ಬಾರದೇ ಇದ್ದಾಗ ಧೃತಿಗೆಡದ ಯುವತಿ ಆತನಿಗೆ ಗೂಸಾ ಕೊಟ್ಟು ಪೊಲೀಸರಿಗೊಪ್ಪಿಸಿದ್ದಾಳೆ.
mandre
ಮುಂಬೈನ ಖಾಂಡಿವಲಿ ರೈಲು ನಿಲ್ದಾಣದಲ್ಲಿ ಪ್ರಾಧನ್ಯಾ ಮಂದಾರೆ ಎಂಬ ಯುವತಿ ಗುರುವಾರ ಮಧ್ಯಾಹ್ನ 2-30 ರ ಸಮಯದಲ್ಲಿ ರೈಲಿಗಾಗಿ ಕಾಯುತ್ತಾ ನಿಂತಿದ್ದರು. ಈ ವೇಳೆ ಪೂರ್ಣ ಪಾನಮತ್ತನಾಗಿದ್ದ ಯುವಕ ಮಂದಾರೆಯವರನ್ನು ಅಶ್ಲೀಲ ಭಾಷೆಯಲ್ಲಿ ಚುಡಾಯಿಸತೊಡಗಿದ.

ರೈಲು ನಿಲ್ದಾಣದಲ್ಲಿ ನಿಂತಿದ್ದ ಎಲ್ಲರೂ ಇದನ್ನು ನೋಡುತ್ತಾ ನಿಂತಿದ್ದರೇ ಹೊರತು ಮಂದಾರೆ ನೆರವಿಗೆ ಯಾಚಿಸಿದರೂ ಯಾರೂ ಸಹಾಯಕ್ಕೆ ಮುಂದಾಗಲಿಲ್ಲವೆನ್ನಲಾಗಿದೆ. ಆದರೂ ಧೃತಿಗೆಡದ ಮಂದಾರೆ, ತಮ್ಮಲ್ಲಿದ್ದ ಬ್ಯಾಗಿನಿಂದ ಆತನ ಕೈಗಳನ್ನು ಕಟ್ಟಿ ಭರ್ತಿ ಗೂಸಾ ಕೊಟ್ಟಿದ್ದಾರೆ. ಬಳಿಕ ಠಾಣೆಗೆ ಎಳೆದೊಯ್ದು ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

By suddi9

Leave a Reply

Your email address will not be published. Required fields are marked *