ಸಮಾಜದಲ್ಲಿ ನಡೆಯುವ ಕೃತ್ಯಗಳಿಗೆ ಎದ್ದು ನಿಲ್ಲುವ ಸಾಮಥ್ರ್ಯ ಮಹಿಳೆ ಬೆಳೆಸಿಕೊಳ್ಳಬೇಕು ಎಂದು ವಕೀಲೆ ಆಶಾ ಪ್ರಸಾದ್ ರೈ ಹೇಳಿದರು.
ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮಿ ಪದವಿ ಕಾಲೇಜು, ಕೊೈಲ ಆದರ್ಶ ವನಿತಾ ಸಮಾಜದ ಸಯೋಗದಲ್ಲಿ ಕೊೈಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಿಳೆ ಮತ್ತು ಉದ್ಯೋಗಾವಕಾಶ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.
ಮಹಿಳೆಗೆ ಸಮಾಜದಲ್ಲಿ ಅನೇಕ ಅವಕಾಶಗಳು ಇದ್ದರು ಮಾಹಿತಿ ಕೊರತೆಯಿಂದ ಹಿಂದುಳಿದಿರುತ್ತಾರೆ. ಇದಕ್ಕೆ ಸೂಕ್ತ ಮಾರ್ಗದರ್ಶನದ ಅಗತ್ಯತೆ ಇದೆ ಎಂದರು.
BANTWAL 29
ಹಣ ಯಾವತ್ತು ಶಾಶ್ವತ ಅಲ್ಲ. ಮಹಿಳೆಯರು ಪ್ರೀತಿ ವಿಶ್ವಾಸ ಗಳಿಸುವ ಮನೋಭಾವ ಬೇಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಅಧ್ಯಕ್ಷತೆ ವಹಿಸಿದರು. ಸಂಯೋಜಕ ಸಕೀನಾ ನಾಸಿರ್, ಕೊೈಲ ಆದರ್ಶ ವನಿತಾ ಸಮಾಜದ ಗೌರವಾಧ್ಯಕ್ಷೆ ಪಾವನಾದೇವಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜು ಉಪನ್ಯಾಸಕರಾದ ಪ್ರೊ. ತುಕಾರಂ ಪೂಜಾರಿ, ಪ್ರೊ. ಪ್ರೇಮಲತಾ ಪೈ, ಡಾ. ಸುಜಾತ ಎಚ್. ಆರ್., ಡಾ. ಓ.ಕೆ. ರವೀಂದ್ರನ್, ಪ್ರೊ. ನಾರಾಯಣ ಭಂಡಾರಿ, ಲಕ್ಷ್ಮಿ ಭಟ್, ಪ್ರದೀಪ್ ಪೂಜಾರಿ ಮತ್ತಿತರಾರು ಸಹಕರಿಸಿದರು.
ಕೊೈಲ ಆದರ್ಶ ವನಿತಾ ಸಮಾಜದ ಕಾರ್ಯದರ್ಶಿ ಸುಮಾ ನಾಗರಾಜ್ ಸ್ವಾಗತಿಸಿದರು. ವಿದ್ಯಾರ್ಥಿನಿ ಲವಿನಾ ಮರಿಟಾ ಪಿಂಟೋ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕಿ ಭಾರತಿ ಪಿ. ವಂದಿಸಿದರು.

By suddi9

Leave a Reply

Your email address will not be published. Required fields are marked *