ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ಸತ್ಯದೇವತಾ ಕ್ರಿಕೆಟರ್ಸ್ ತಂಡವು ಮಂಗಳೂರಿನ ಅತ್ತಾವರ ಕೆಎಂಸಿ ಮೈದಾನದಲ್ಲಿ ಇನೋಳಿ ಗಾಣಿಗರ ಯುವ ವೇದಿಕೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ‘ಗಾಣಿಗ ಫ್ರೆಂಡ್ಸ್ ಟ್ರೋಫಿ’ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗೆದ್ದುಕೊಂಡಿತು. ಮನಪಾ ಕಾರ್ಪೋರೇಟರ್ ಕೇಶವ ಮರೋಳಿ, ಮಹೇಶ ತುಪ್ಪೆಕಲ್ಲು, ಜನಾರ್ದನ ಅರ್ಕುಳ, ಜಯರಾಮ ಅಡ್ಯಾರು, ಪ್ರಸಾದ್ ಕಣ್ಣೂರು ಮತ್ತಿತರರು ಇದ್ದರು.
