ಸುದ್ದಿ9ಕೈಕಂಬ: ವಿಶ್ವ ಹಿಂದೂ ಪರಿಷತ್ ಭಜರಂಗದಳ ವೀರಾಂಜನೇಯ ಶಾಖೆ ಮಳಲಿ-ಕಾಜಿಲ ಇದರ ಆಶ್ರಯದಲ್ಲಿ
ಎ.19 ರಂದು ಭಾನುವಾರ ಸಂಜೆ ಗಂಟೆ 6.30ರಿಂದ ಉಳಿಪಾಡಿ ಗುತ್ತಿನ ಗದ್ದೆಯಲ್ಲಿ ಭಜರಂಗಿ ಉತ್ಸವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7ರಿಂದ ಡ್ಯಾನ್ಸ್ ಅಕಾಡಮಿ, ಎಡಪದವು ಇವರಿಂದ ವೈವಿದ್ಯಮಯ ನೃತ್ಯ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ 8.00ರಿಂದ ಸಭಾಕಾರ್ಯಕ್ರಮ ನಡೆಯಲಿರುವುದು. ರಾತ್ರಿ ಗಂಟೆ 10.00ರಿಂದ ನಮ್ಮ ಕಲಾವಿದೆರ್ ಬೆದ್ರ ಇವರಿಂದ ತುಳು ಹಾಸ್ಯಮಯ ನಾಟಕ ”ನೆಟ್ ವರ್ಕ್ ತಿಕ್ಕುಜಿ” ಎಂಬ ತುಳು ನಾಟಕ ನಡೆಯಲಿದೆ.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳಿಪಾಡಿಗುತ್ತಿನ ಪ್ರಗತಿಪರ ಕೃಷಿಕ ರಾಜೇಶ್ ನ್ಯಾಕ್ ವಹಿಸಲಿದ್ದಾರೆ. ಗೌರವಧ್ಯಕ್ಷ ಅರುಣುಕುಮಾರ್ ಆಳ್ವ ಉಳಿಪಾಡಿಗುತ್ತು . ಆಶೀರ್ವಚನವನ್ನು ಸ್ವಾಮಿ ವಿವೇಕಚೈತನ್ಯಾನಂದ ನೀಡಲಿದ್ದಾರೆ.
ಪ್ರಧಾನ ಭಾಷಣಕಾರರಾಗಿ ದಯನಂದ ಜಿ. ಕತ್ತಲ್ಸಾರ್ ಮುಖ್ಯ ಅಥಿತಿಗಳಾಗಿ ವಿ.ಹಿ.ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಸೇಣಾವ, ಭಜರಂಗಧಳ ಪ್ರಾಂತ ಸಂಚಾಲಕ ಶರಣ್ ಪಂಪ್ ವೆಲ್, ಜಿಲ್ಲಾ ಸಂಚಾಲಕ ಭಜರಂಗದಳ ಭುಜಂಗ ಕುಲಾಲ್, ಭಜರಂಗದಳ ಗುರುಪುರ ಪ್ರಖಂಡ ಸಂಚಾಲಕ ಕೃಷ್ಣ ಕಜೆಪದವು, ವಿ.ಹಿ.ಪ.ಅಧ್ಯಕ್ಷ ಗುರುಪುರ ಪ್ರಖಂಡ ವಿಷ್ಣುಕಾಮತ್,ಮಂಗಳೂರು ಮಾಜಿ ತಾಲೂಕು ಪಂ.ಅಧ್ಯಕ್ಷ ಹರೀಶ್ ಮೂಡುಶೆಡ್ಡೆ ,ಕಾಜಿಲ ಕೋರ್ದಬ್ಬು ಸೇವಾ ಸಮಿತಿ ಗೌರವಧ್ಯಕ್ಷ ರಾಮ ಪೂಜಾರಿ ನಟ್ಟಿಲು, ಕಾಜಿಲ ಕೋರ್ದಬ್ಬು ಸೇವಾ ಸಮಿತಿ ಅಧ್ಯಕ್ಷ ಸದಾಶಿವ ಕರ್ಕೇರಾ, ವಿಠಲ ಸಪಲಿಗ ಎಂಬದೋಟ ಮಳಲಿ, ಸುಧಾಕರ ಟ್ಯಲರ್ ಮಳಲಿ, ಚಂದ್ರಹಾಸ ಶೆಟ್ಟಿ ನಾರಳ ಭಾಗವಹಿಸಲಿದ್ದಾರೆ ಎಂದು ವಿ.ಹಿಂ. ಪ. ಮಳಲಿ ಕಾಜಿಲ ಅಧ್ಯಕ್ಷ ಹರೀಶ್ ಕಾಜಿಲ ಭಜರಂಗದಳ ಸಂಚಾಲಕ ಶ್ರೀನಿಧಿ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.