ಬಂಟ್ವಾಳ: ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣ ಉದ್ದೇಶಕ್ಕೆ ತಾಲೂಕು ಕಛೇರಿಯನ್ನು ಪ್ರತ್ಯೇಕ ಕಟ್ಟಡಕ್ಕೆ ಸ್ಥಳಾಂತರಿಸುವ ಉದ್ದೇಶಕ್ಕೆ ಎ.13ರಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು.
ಬಿ.ಸಿ.ರೋಡ್ ನೋಂದಣಿ ಕಛೇರಿ ಸನಿಹ ನಿರ್ಮಿಸಲಾಗಿದ್ದ ನೂತನ ಕಟ್ಟಡವನ್ನು ಸಚಿವರು ಟೇಪ್ ಕತ್ತರಿಸಿ ಉದ್ಘಾಟಿಸಿದರು.
1 (2)
ತಾಲೂಕು ಕಛೇರಿಯ ಕಡತಗಳನ್ನು ಶೀಘ್ರ ಸ್ಥಳಾಂತರಿಸಿ ಕಂದಾಯ ಇಲಾಖೆ ಹಳೆ ಕಛೇರಿ ಕಟ್ಟಡವನ್ನು ಕೆಡವಿ ನೂತನ ಕಟ್ಟಡ ನಿರ್ಮಾಣಕ್ಕೆ ಹದಿನೈದು ದಿನದಲ್ಲಿ ಚಾಲನೆ ನೀಡಬೇಕು ಎಂದು ಸೂಚನೆ ನೀಡಿದರು.
ಕಂದಾಯ ಇಲಾಖೆಯ ಪ್ರಮುಖ ಕಡತಗಳನ್ನು ನೂತನ ಕಟ್ಟಡಕ್ಕೆ, ಉಳಿದವುಗಳನ್ನು ರೆಖಾರ್ಡ್ ರೂಮಿಗೆ, ಇನ್ನು ಕೆಲವು ಕಡತಗಳನ್ನು ಸಾರ್ವಜನಿಕ ರಂಗಮಂದಿರದ ಭದ್ರತಾ ಕೊಠಡಿಗೆ ಸ್ತಳಾಂತರಿಸುವ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ತಾಲೂಕು ಕಛೇರಿಯನ್ನು ತಾತ್ಕಾಲಿಕ ಸ್ಥಳಾಂತರ ಕಟ್ಟಡ ನಿರ್ಮಾಣಕ್ಕೆ ಜಿಲ್ಕಾಧಿಕಾರಿಗಳು 1 ಲಕ್ಷ ನೀಡಿದು ಸುಮಾರು 8 ಲಕ್ಷ ಅಂದಾಜು ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಆಗಿದೆ. ಲೋಕೋಪಯೋಗಿ ಇಲಾಖೆಯಿಂದ ಕಟ್ಟಡವನ್ನು ನಿರ್ಮಿಸಲಾಗಿದೆ.
ಕಟ್ಟಡ ಉದ್ಘಾಟನೆ ಸಂದರ್ಭ ಬಂಟ್ವಾಳ ಪುರಸಭೆ ಅಧ್ಯಕ್ಷ ವಸಂತಿ ಚಂದಪ್ಪ, ಜಿ. ಪಂ. ಸದಸ್ಯ ಚಂದ್ರಪ್ರಕಾಶ ಶೆಟ್ಟಿ , ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಸಹಾಯಕ ಕಮಿಷನರ್ ಡಾ| ಅಶೋಕ್, ತಹಶೀಲ್ದಾರ್ ಪುರಂದರ ಹೆಗ್ಡೆ, ಲೋಕೋಪಯೋಗಿ ಇಲಾಖೆ ಮಂಗಳೂರು ವಿಭಾಗ ಕಾ.ನಿ. ಇಂಜಿನಿಯರ್ ಧರ್ಮರಾಜ್, ಬಂಟ್ವಾಳ ಉಪ ವಿಭಾಗ ಸ.ಕಾ.ನಿ. ಇಂಜಿನಿಯರ್ ಉಮೇಶ್ ಭಟ್, ಸ. ಇಂ. ಅರುಣ್ ಪ್ರಕಾಶ್ ಡಿ’ಸೋಜ, ಪ್ರೀತಂ, ಉಪತಹಶೀಲ್ದಾರ್ ರೋಹಿನಾಥ್, ಪರಮೇಶ್ವರ ನಾಯಕ್, ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿ,ಗುತ್ತಿಗೆದಾರ ಆಶಿಪ್ ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *