ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿನಿಂದ ಜನಸಂಖ್ಯೆ ಆಧಾರದಲ್ಲಿ ಪ್ರತ್ಯೇಕ ಪಂಚಾಯಿತಿಯಾಗಿ ಪ್ರಥಮ ಚುನಾವಣೆ ಎದುರಿಸುತ್ತಿರುವ ಅರಳ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ ಎಲ್ಲಿರಬೇಕು ಎಂಬ ಬಗ್ಗೆ ನಾಗರಿಕರಲ್ಲಿ ಭಾರೀ ಗೊಂದಲಕ್ಕೆ ಉಂಟು ಮಾಡಿದೆ.
ಸುಮಾರು 8,970 ಮಂದಿ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಹೊಸ ಪಂಚಾಯತಿ ರೂಪುಗೊಂಡಿರುವ ಬಗ್ಗೆ ಗ್ರಾಮಸ್ಥರಲ್ಲಿ ಸಂತಸ ಮತ್ತು ಹೊಸ ಹುರುಪು ಮೂಡಿಸಿದ್ದು, ಪಂಚಾಯಿತಿ ಕೇಂದ್ರ ಸ್ಥಾನದ ಬಗ್ಗೆ ಮಾತ್ರ ಭಾರೀ ಗೊಂದಲ ಉಂಟಾಗಿರುವುದು ಕಂಡು ಬಂದಿದೆ.
ಇಲ್ಲಿನ ಎಮರ್ಾಳ್ ಪ್ರಮುಖ ರಸ್ತೆ ಬಳಿ ಪಂಚಾಯಿತಿ ಕಾಯರ್ಾಲಯ ಆರಂಭಗೊಂಡರೆ ಗ್ರಾಮಸ್ಥರಿಗೆ ಸಂಚರಿಸಲು ಸೂಕ್ತ ಬಸ್ ಮತ್ತಿತರ ಸೌಲಭ್ಯ ಇದೆ ಎಂಬ ವಾದ ಒಂದೆಡೆಯಾದರೆ, ಇನ್ನೊಂದೆಡೆ ಅರಳ ಗ್ರಾಮದ ಕೇಂದ್ರ ಸ್ಥಾನ ಕಲ್ಲೇರಿಯಲ್ಲಿ ಪಂಚಾಯಿತಿ ಕಾಯರ್ಾಲಯ ಸೂಕ್ತ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಈ ಹಿಂದೆ ರಾಯಿ, ಕೊಯಿಲ, ಅರಳ ಗ್ರಾಮಗಳಿಗೆ ರಾಯಿ ಕೇಂದ್ರ ಸ್ಥಾನವಾಗಿದ್ದು, ರಾಯಿ ಪಂಚಾಯಿತಿ ಕಾಯರ್ಾಲಯ ಅರಳ ಗ್ರಾಮಸ್ಥರಿಗೆ ದೂರದಲ್ಲಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಅರಳ ಹೊಸ ಪಂಚಾಯಿತಿಗೆ ಒಟ್ಟು ನಾಲ್ಕು ವಾಡರ್ಿನಿಂದ ಒಟ್ಟು 10 ಮಂದಿ ಸದಸ್ಯರು ಆಯ್ಕೆಗೊಳ್ಳಲಿದ್ದು, ಅಂತಿಮವಾಗಿ ಸೂಕ್ತ ಸಕರ್ಾರಿ ಜಮೀನು ಹೊಂದಿದ್ದರೆ ಮಾತ್ರ ಪಂಚಾಯಿತಿ ಕಾಯರ್ಾಲಯ ಆರಂಭಿಸಲು ಸಾಧ್ಯ ಎಂಬ ಅಭಿಪ್ರಾಯವೂ ನಾಗರಿಕರಿಂದ ವ್ಯಕ್ತವಾಗಿದೆ.
ಹಿನ್ನೆಲೆ:
ಫಲ್ಗುಣಿ ಹೊಳೆ ಹರಿಯುತ್ತಿರುವ ಅರಳ ಗ್ರಾಮವು ಮೂಲತಃ ಕೃಷಿ ಪ್ರಧಾನ ಗ್ರಾಮವಾಗಿ ಗುರುತಿಸಿಕೊಂಡು ಭತ್ತ, ಕಂಗು, ತೆಂಗು, ಬಾಳೆ, ಕಾಳು ಮೆಣಸು, ರಬ್ಬರ್ ಮತ್ತಿತರ ಕೃಷಿ ಚಟುವಟಿಕೆ ಭರದಿಂದ ನಡೆಯುತ್ತಿದೆ. ಭೌಗೋಳಿಕವಾಗಿ ಸುಮಾರು 10.65 ಚದರ ಕಿ.ಮೀ. ವಿಸ್ತೀರ್ಣ ಹೊಂದಿರುವ ಅರಳ ಗ್ರಾಮದಲ್ಲಿ ಬಹುತೇಕ ಹಿಂದೂ ಮತ್ತು ಮುಸ್ಲಿಂ ಬಾಹುಳ್ಯ ಹೊಂದಿದ್ದರೂ ಪರಸ್ಪರ ಸೌಹಾರ್ದತೆ ಇದೆ.
ಇಲ್ಲಿನ ಪ್ರಸಿದ್ಧ ಶ್ರೀ ಗರುಡ ಮಹಾಕಾಳಿ ದೇವಿ ಈ ಹಿಂದೆ ರಾಕ್ಷಸ ಧೂಮ್ರಾಕ್ಷನನ್ನುಕೊಂದು, ಗರುಡನನ್ನು ಏರಿ ಆಕಾಶ ಮಾರ್ಗದಲ್ಲಿ ಸಂಚರಿಸುತ್ತಿದ್ದ ವೇಳೆ ಅರಳದ ದೇವರಗುಡ್ಡೆ ಎಂಬಲ್ಲಿ ಇಳಿದ್ದಾರೆ. ಇಲ್ಲಿ ಕೆಲಹೊತ್ತು ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಬಳ್ಳಿಗಳಿಂದ ರಚನೆಗೊಂಡಿದ್ದ ಉಯ್ಯಾಲೆಯಲ್ಲಿ ದೇವಿಯು ಕುಳಿತು ತೂಗುತ್ತಿರುವಾಗ ಅರಳಿ ಮರದ ಹೂವು ಪರಿಮಳ ಬೀರಿ ಕೆಳಗೆ ಉದುರಿದ ಪರಿಣಾಮ ಕ್ರಮೇಣ ಈ ಪ್ರದೇಶ ‘ಅರಳ’ ವಾಗಿದೆ ಎಂಬುದು ಇಲ್ಲಿನ ಪ್ರತೀತಿ.
ಇಲ್ಲಿನ ಈರೆಂದೀಲು ಜೈನ ಮನೆತನದವರು ಬ್ರಿಟೀಷರ ಆಡಳಿತಾವಧಿಯಲ್ಲಿ ಅರಳ ‘ಛತ್ರ’ ಮತ್ತು ಕಲ್ಲೇರಿ ಶ್ರೀ ಚಂದ್ರನಾಥ ಸ್ವಾಮಿ ಪ್ರಾಥಮಿಕ ಶಾಲೆ ತೆರೆದು ಉಚಿತ ಶಿಕ್ಷಣ ಮತ್ತು ಬಿಸಿಯೂಟ ನೀಡುವ ಮೂಲಕ ಗಮನ ಸೆಳೆದಿದ್ದರು. ಜಾನುವಾರುಗಳಿಗೆ ರಸ್ತೆ ಬದಿಯಲ್ಲಿ ನೀರಿನ ತೊಟ್ಟಿ ರಚಿಸಿದ ಕುರುಹು ಈಗಲೂ ಇದೆ. ಇಲ್ಲಿನ ಮುಲ್ಲಾರಪಟ್ನ ಜುಮ್ಮಾ ಮಸೀದಿ ಪಕ್ಕದಲ್ಲೇ ಕಾರಣಿಕದ ಗ್ರಾಮ ದೈವವೂ ನೆಲೆಸಿದ್ದು, ಇದರ ಜೀಣರ್ೋದ್ಧಾರ ಕಾರ್ಯದಲ್ಲಿ ಹಿಂದೂ-ಮುಸ್ಲಿಮರು ಪರಸ್ಪರ ಕೈ ಜೋಡಿಸಿದ್ದಾರೆ.
ಈ ಹಿಂದೆ ಮಂಡಲ ಪಂಚಾಯಿತಿ ವ್ಯವಸ್ಥೆಯಡಿ ಒಟ್ಟು 6 ಸದಸ್ಯ ಬಲ ಹೊಂದಿದ್ದ ಅರಳ ಗ್ರಾಮವು ಕರಿಯಂಗಳ ಮಂಡಲ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿತ್ತು. ಆ ಬಳಿಕ ಅಸ್ತಿತ್ವಗೊಂಡ ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆ ಜಾರಿಗೊಂಡಾಗ ಒಟ್ಟು 8 ಸದಸ್ಯ ಬಲದಿಂದ ರಾಯಿ ಗ್ರಾಮ ಪಂಚಾಯಿತಿಗೆ ಸೇರಿಕೊಂಡಿದೆ. ಅಂದು ಸದಸ್ಯರಾಗಿ ಲಕ್ಷ್ಮೀಧರ ಶೆಟ್ಟಿ ಮಧ್ಯಾಳ ( 4ಅವಧಿಗೆ ಸದಸ್ಯರು, ಒಂದು ಅವಧಿಗೆ ಅಧ್ಯಕ್ಷರು) ಡೊಂಬಯ ಬಿ. ( 3ಅವಧಿಗೆ ಸದಸ್ಯರು, ಒಂದು ಅವಧಿಗೆ ಉಪಾಧ್ಯಕ್ಷರು) ಎಂ.ಬಿ. ಅಶ್ರಫ್ ( 3ಅವಧಿಗೆ ಸದಸ್ಯರು) ಗಿರಿಜಾ ( 2ಅವಧಿಗೆ ಸದಸ್ಯರು, ಒಂದು ಅವಧಿಗೆ ಉಪಾಧ್ಯಕ್ಷರು) ತುಂಗಮ್ಮ, ಮಹಮ್ಮದ್ ಹನೀಫ್, ಇದಾಯಿತುಲ್ಲಾ ( ತಲಾ ಒಂದು ಅವಧಿಗೆ ಸದಸ್ಯರಾಗಿದ್ದರು.