ಬಂಟ್ವಾಳ: ಮುದೆಲ್ ಮುಟ್ಟಿ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಸಜಿಪ ಮುನ್ನೂರು ಇದರ ಜೀರ್ಣೋದ್ಧಾರ ಕಾರ್ಯಕ್ಕೆ ಮಾರ್ಗದರ್ಶನ ಮಾಡಲು ವಾಸ್ತುಶಾಸ್ತ್ರಜ್ಞ ಬೆದ್ರಡ್ಕ ರಮೇಶ್ ಕಾರಂತ ಮಾ.15 ಶುಕ್ರವಾರ ರಂದು ದೈವಸ್ಥಾನಕ್ಕೆ ಭೇಟಿ ನೀಡಿ ನೂತನವಾಗಿ ನಿರ್ಮಾಣ ಮಾಡಲು ವಾಸ್ತು ಪ್ರಕಾರ ನೀಲಿ ನಕಾಶೆ ತಯಾರಿಸಿಕೊಟ್ಟರು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ , ಪದಾಧಿಕಾರಿಗಳಾದ ಸಚ್ಚಿದಾನಂದ ಖಂಡೇರಿ , ಮಹಾಬಲ ಕೊಟ್ಟಾರಿ , ಎನ್.ಕೆ.ಶಿವ , ಮನೋಜ್ ಆಳ್ವ , ಎಂ.ಸುಬ್ರಹ್ಮಣ್ಯ ಭಟ್ , ಪರಮೇಶ್ವರ ಎಂ. , ಸೂರ್ಯನಾರಾಯಣ ಭಟ್ , ಶಿವರಾಮ ಬ್ರಾಸಿತ್ತಾಯ , ಮಾರಪ್ಪ ಕೊಟ್ಟಾರಿ , ಧನಂಜಯ ಶೆಟ್ಟಿ , ಪ್ರಸಾದ್ ಶೇಟ್ಟಿ , ಧೀರಜ್ ಶೆಟ್ಟಿ ಉಪಸ್ಥಿತರಿದ್ದರು.21

By suddi9

Leave a Reply

Your email address will not be published. Required fields are marked *