ಬಂಟ್ವಾಳ: ಅಲ್ ಮಿಸ್ಬಾಹ್ ಫೌಂಡೇಶನ್ ಫರಂಗಿಪೇಟೆ ಇದರ 2ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮವು ಭಾನುವಾರ ಬೋಳಂತೂರು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಿತು. ಜಿಲ್ಲೆಯ 10 ಜೋಡಿ ಧಾರ್ಮಿಕ, ಸಾಮಾಜಿಕ ಗಣ್ಯರ ಉಪಸ್ಥಿತಿಯಲ್ಲಿ ದಾಂಪತ್ಯಜೀವನಕ್ಕೆ ಕಾಲಿರಿಸಿದರು. ಕಾಞಕ್ಕಾಡ್ ಖಾಝಿ ಜಿಫ್ರಿ ಮುತ್ತೂಕೋಯಾ ತಂಙಳ್ ದುವಾ ನೆರವೇರಿಸಿದರು. ಪಾಣಕ್ಕಾಡ್ ಅಬ್ಬಾಸ್ ಆಲಿ ಶಿಹಾಬ್ ತಂಙಳ್ ಹಾಗೂ ಮಂಗಳೂರು ಖಾಝಿ ಅಲ್ ಹಾಜ್ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ವಿವಾಹದ ನಿಖಾಹ್ ನೆರವೇರಿಸಿದರು

vivaha
vivaha.1
ಬೋಳಂತೂರು ಬದ್ರಿಯಾ ಜುಮ್ಮಾ ಮಸೀದಿಯ ಕಾರ್ಯದರ್ಶಿ ಮುಹಮ್ಮದ್ ಎನ್ ಅಧ್ಯಕ್ಷತೆ ವಹಿಸಿದ್ದರು. ತಾಐಲಂಗಡಿ ಎಂ.ಎ.ಕಾಸಿಂ ಉಸ್ತಾದ್, ಕಲ್ಲಡ್ಕ ಜುಮ್ಮಾ ಮಸ್ಜಿದ್ ಮುದರ್ರಿಸ್ ಗಳಾದ ಕೆ.ಎಸ್.ಹೈದರ್ ದಾರಿಮಿ, ಅಬ್ದುಲ್ ಅಝೀಝ್ ಅಶ್ರಫಿ ಪಾನತ್ತೂರು, ಪೂಕುಂಞÂ ತಂಙಳ್ ಉದ್ಯಾವರ, ಉಸೈನ್ ಬಾಖವಿ, ಕೆ.ಯು ಅಬ್ದುಲ್ ಜಲೀಲ್ ಫೈಝಿ, ಕೆ.ಐ. ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಮುಹಮ್ಮದ್ ಬಶೀರ್ ಸಖಾಫಿ, ಅಲ್ ಮಿಸ್ಬಾಹ್ ಫೌಂಡೇಶನ್ ಸಲಹೆಗಾರ ಮಾಹಿನ್ ದಾರಿಮಿ ಪಾತೂರು, ಹನೀಫ್ ಮುಪದ್ದಿಸ್ ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಸ್ವಾಗತ ಸಮಿತಿ ಗೌರವಾಧ್ಯಕ್ಷ ಸುಲೈಮಾನ್ ಹಾಜಿ ಕಲ್ಲಡ್ಕ, ಕ್ರಿಯೆಟಿವ್ ಫೌಂಡೇಶನ್ ನಿಕಟಪೂರ್ವ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್, ಎಂ.ಎಸ್.ಮಹಮ್ಮದ್, ಬೋಳಂತೂರು ಜುಮ್ಮಾ ಮಸೀದಿ ಅಧ್ಯಕ್ಷ ಅಶ್ರಫ್, ಸುರಿಬೈಲು ಜುಮ್ಮಾ ಮಸೀದಿ ಅಧ್ಯಕ್ಷ ಮಹಮ್ಮದ್ ರಫೀಕ್ ಹಾಜಿ, ಪ್ರಮುಖರಾದ ಇಸ್ಹಾಕ್ ನಾಟೆಕಲ್, ಅಬ್ದುಲ್ ಸತ್ತಾರ್, ರಹಿಮಾನ್ ಹಾಜಿ ಮೂಡಬಿದ್ರೆ, ಮಹಮ್ಮದ್ ರಫೀಕ್ ಕಣ್ಣೂರು, ಹಕೀಂ ಪರ್ತಿಪ್ಪಾಡಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಬ್ಬಾಸ್ ಆಲಿ, ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಮಂಜೇಶ್ವರ ಶಾಸಕ ಕೆ.ಪಿ.ಅಬ್ದುಲ್ ರಝಾಕ್, ಹನೀಫ್ ಹಾಜಿ ಗೋಳ್ತಮಜಲು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೂರಲ್ಪಾಡಿ ಸಂಸ್ಥೆಯ ಅಧ್ಯಕ್ಷ ಎಫ್ ಹಬೀಬ್, ಪದಾಧಿಕಾರಿಗಳಾದ ಸಲೀಮ್ ಡಿ.ಕೆ, ಮೊಹಮ್ಮದ್ ನಝೀರ್ ಮೊದಲಾದವರಿದ್ದರು. ಸಂಸ್ಥೆಯ ಗೌರವ ಸಲಹೆಗಾರ ನೌಷಾದ್ ಹಾಜಿಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶರೀಫ್ ವಂದಿಸಿದರು. ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರ್ವಹಿಸಿದರು.
ಹಾಸನದ ಮೊಹಮ್ಮದ್ ನದೀಮ್ – ಪುತ್ತೂರಿನ ಸೌದತ್, ಬಂಟ್ವಾಳದ ಇಮ್ರಾನ್-ಬಂಟ್ವಾಳದ ರಮೀಝಾಬಾನು, ಬಂಟ್ವಾಳದ ಹಸೈನಾರ್-ಆಯಿಷಾ, ಬೆಳ್ತಂಗಡಿಯ ಹುಸೈನಾರ್-ತಾಯಿರ, ಬೆಳ್ತಂಗಡಿಯ ಹಸೈನಾರ್- ಸಾಕಿರ, ಪುತ್ತೂರಿನ ಯಯ್ಯ-ಕೆ.ಸಕೀನಾ, ಬಂಟ್ವಾಳದ ಸಲೀಂ-ಆಯಿಷಾ, ಪುತ್ತೂರಿನ ಅಶ್ರಫ್- ಬಂಟ್ವಾಳದ ಬೀಪಾತುಮ್ಮ, ಮೂಡಬಿದ್ರೆಯತಯ್ಯೂಬ್- ಶಂಬ್ರೀನ್, ಬಂಟ್ವಾಳದ ಎನ್.ಮಹಮ್ಮದ್ ಅಶ್ರಫ್- ಶೆರೀಫಾ ರವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಸಾಮೂಹಿಕ ವಿವಾಹವನ್ನು ಸಂಘಟಿಸಿದ ಫರಂಗಿಪೇಟೆಯ ಅಲ್ ಮಿಸ್ಬಾಹ್ ಫೌಂಡೇಶನ್ ಪರವಾಗಿ ವಧೂವರರಿಗೆ ಚಿನ್ನಾಭರಣ, ವಸ್ತ್ರ, ವಾಚ್ ಅನ್ನು ಉಡುಗೊರೆಯಾಗಿ ನೀಡಲಾಯಿತು.

 

By suddi9

Leave a Reply

Your email address will not be published. Required fields are marked *