ಬಂಟ್ವಾಳ: ಸರಕಾರದ ಇಲಾಖೆಯಿಂದ ಕೃಷಿಕನಿಗೆ ಅನ್ಯಾಯ, ಕಲುಷಿತ ನೀರು, ಕೃಷಿ ನಾಶ, ಪರಿಹಾರಕ್ಕಾಗಿ ವರ್ಷದಿಂದ ಅಲೆದಾಟ, ಬ್ಯಾಂಕ್ನ ಸಾಲದ ಬಡ್ಡಿ ಕಟ್ಟಲಾಗದೆ ರೈತನ ಬಾಳು ಕಂಗಾಲು, ರೈತರ ಪರ ವೇದಿಕೆಯಲ್ಲಿ ಮಾತ್ರ ಕಾರ್ಯದಲ್ಲಿ ಶೂನ್ಯ, ಸರಕಾರದ ಮೊರೆ, ಯಾಕಾಗಿ ಜೀವನ ಎನ್ನುವ ಅಳಲು, ಕೊನೆಗೂ ಎಚ್ಚೆತ್ತ ರೈತ ಸಂಘ, ಸೋಮವಾರ ಬೇಟಿ ನೀಡಿ ಪರಿಹಾರ ದೊರಕಿಸಿಕೊಡುವ ಭರವಸೆ. ಇದು ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವಳವೂರು ನಿವಾಸಿ ದಿಲೀಪ್ ರೈ ಅವರ ಕರುಳ ಕೂಗಿನ ಕಥೆ| ಇವರ ಅಡಿಕೆ ಮತು ತೆಂಗು ಕೃಷಿ ನಾಶವಾದ ಬಳಿಕದ ನೋವಿನ ಸಂಗತಿಯನ್ನು ಕೇಳುವವರಿಲ್ಲದೆ ಅಲೆದಾಡಿ ಅವರು ಮಾಧ್ಯಮದ ಮುಂದೆ ಹೇಳಿಕೊಂಡರು. ಇಪ್ಪತ್ತು ವರ್ಷಕ್ಕಿಂತಲೂ ಅಧಿಕ ಕಾಲ ಸಾಕಿ ಬೆಳೆಸಿದ ಅಡಿಕೆ ಹಾಗೂ ತೆಂಗಿನ ಮರಗಳನ್ನು ಇಲ್ಲಿನ ನೀರು ಶುದ್ದೀಕರಣ ಘಟಕ ಕಲ್ಮಶ ನೀರು ಹೊರಗೆ ಬಿಟ್ಟು ನಾಶ ಮಾಡಿದೆ, ಕಳೆದ ಎರಡು ವರ್ಷಗಳಿಂದ ತೋಟದಲ್ಲಿ ನೀರು ತುಂಬಿಕೊಂಡು ಉತ್ತಮ ಫಲ ನೀಡುತ್ತಿದ್ದ ಮರಗಳು ಸತ್ತು ಹೋಗಿದ್ದು, ವಾರ್ಷಿಕ 15ಲಕ್ಷಕ್ಕಿಂತಲೂ ಅಧಿಕ ಆದಾಯವನ್ನು ಕಳೆದುಕೊಂಡು ದಿಕ್ಕುದೆಶೆಯಿಲ್ಲದಂತಾಗಿದ್ದಾರೆ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಹಿಡಿದು ಎಲ್ಲಾ ಇಲಾಖೆಗಳಿಗೆ ನೀಡಿದ ಮನವಿಗೆ ಲೆಕ್ಕವಿಲ್ಲ, ಬೆಲೆಯೂ ಇಲ್ಲ. ಈ ಕೃಷಿಕನ ನೆರವಿಗೆ ಬರುವವರ್ಯಾರು ಎನ್ನುವ ಪ್ರಶ್ನೆ |
ಮಂಗಳೂರು ಮಹಾನಗರ ಪಾಲಿಕೆಗೆ ಕುಡಿಯುವ ನೀರು ಸರಬರಾಜು ಮಾಡುವ ತುಂಬೆಯ ನೀರು ಶುದ್ದೀಕರಣ ಘಟಕದಿಂದ ಹೊರ ಬಿಡಲ್ಪಟ್ಟ ಕಲ್ಮಶ ನೀರು ಎರಡು ಎಕರೆ ಜಮೀನಿನಲ್ಲಿ ನೆಟ್ಟು ಬೆಳೆಸಿದ ಅಡಿಕೆ ಹಾಗೂ ತೆಂಗು ಬೆಳೆಯನ್ನು ಕಳೆದುಕೊಳ್ಳುವಂತೆ ಮಾಡಿದೆ. ತೋಟದಲ್ಲಿ ನೀರು ತುಂಬಿಕೊಂಡ ಪರಿಣಾಮ ಒಂದೆರಡಲ್ಲ, ಫಲ ನೀಡುತ್ತಿದ್ದ ಬರೋಬ್ಬರಿ 1 ಸಾವಿರಕ್ಕಿಂತಲೂ ಅಧಿಕ ಅಡಕೆ ಮರಗಳು ಹಾಗೂ 150ಕ್ಕಿಂತಲೂ ಅಧಿಕ ತೆಂಗಿನ ಮರಗಳು ಸತ್ತು ಹೋಗಿದೆ. ಲೆಕ್ಕವಿಲ್ಲದಷ್ಟು ಬಾಳೆಗಿಡಗಳು ಸರ್ವನಾಶವಗಿದೆ. ಈ ಮೂಲಕ ಸರ್ಕಾರದ ಇಲಾಖೆಯೇ ಕೃಷಿಕನೋರ್ವನನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡುವಂತಹ ಸನ್ನಿವೇಶ ನಿರ್ಮಿಸಿಕೊಟ್ಟಿದೆ.
ಇಪ್ಪತ್ತು ವರ್ಷಕ್ಕಿಂತಲೂ ಅಧಿಕ ಕಾಲ ಸಾಕಿ ಬೆಳೆಸಿದ ಅಡಿಕೆ ಹಾಗೂ ತೆಂಗಿನ ಮರಗಳನ್ನು ಕಳೆದುಕೊಂಡವರು. ಕಳೆದ ಎರಡು ವರ್ಷಗಳಿಂದ ತೋಟದಲ್ಲಿ ನೀರು ತುಂಬಿಕೊಂಡು ಉತ್ತಮ ಫಲ ನೀಡುತ್ತಿದ್ದ ಮರಗಳು ಸತ್ತು ಹೋಗಿದ್ದು, ವಾರ್ಷಿಕ 15ಲಕ್ಷಕ್ಕಿಂತಲೂ ಅಧಿಕ ಆದಾಯವನ್ನು ದಿಲೀಪ್ ರೈ ಕಳೆದು ಕೊಳ್ಳುವಂತಾಗಿದೆ. ಇಷ್ಟಾದರೂ ಇದು ತನಗೆ ಸಂಬಂಧಪಟ್ಟಿದ್ದೇ ಅಲ್ಲ ಎನ್ನುವಂತೆ ವತರ್ಿಸುತ್ತಿರುವ ಮಂಗಳೂರು ಮಹಾನಗರ ಪಾಲಿಕೆ ಈಗಲೂ ಕಲ್ಮಶ ನೀರನ್ನು ಬಿಡುತ್ತಿರುವುದರಿಂದ ವರ್ಷ ಪೂತರ್ಿ ತೋಟದೊಳಗೆ ಮೊಣಕಾಲೆತ್ತರಕ್ಕೆ ನೀರು ಕಂಡು ಬರುತ್ತಿದೆ. ತೋಟಕ್ಕೆ ನೀರುಣಿಸುತ್ತಿದ್ದ ಕೆರೆ ಹೂಳಿನಿಂದ ಮುಚ್ಚಿ ಹೋಗಿದೆ. ಪಂಪ್ಹೌಸ್ ನಾಶವಾಗಿದೆ. ತೋಟದೊಳಗೆ ನಿತ್ಯ ನೀರು ತುಂಬಿ ಕೊಂಡಿರುವುದರಿಂದ ತನ್ನ ತೋಟದೊಳಗೆ ತಾನೇ ಪ್ರವೇಶಿಸಲಾಗದಂತಹ ಸ್ಥಿತಿ ನಿಮರ್ಾಣವಾಗಿದೆ.
ಮಂಗಳೂರು ಜನತೆಗೆ ಕುಡಿಯುವ ನೀರು ತುಂಬೆಯಿಂದ ಪೂರೈಕೆಯಾಗುತ್ತದೆ. ತುಂಬೆ ವೆಂಟೆಡ್ ಡ್ಯಾಂನಲ್ಲಿ ಸಂಗ್ರಹಗೊಂಡ ನೀರನ್ನು ದೊಡ್ಡ ಗಾತ್ರದ ಪೈಪ್ಗಳ ಮೂಲಕ ರಾಮಲ್ಕಟ್ಟೆಯಲ್ಲಿರುವ ಶುದ್ದೀಕರಣ ಘಟಕಕ್ಕೆ ಕಳುಹಿಸಿ ಕೊಡಲಾಗುತ್ತದೆ. ಅಲ್ಲಿ ನೀರಿಗೆ ಆಲಂ ಮತ್ತಿತರ ವಸ್ತುಗಳನ್ನು ಬೆರೆಸಿ ನೀರನ್ನು ಶುದ್ದೀಕರಣ ಗೊಳಿಸಲಾಗುತ್ತದೆ. ಬಳಿಕ ಅದನ್ನು ಪೈಪ್ಗಳ ಮೂಲಕ ಮಂಗಳೂರಿಗೆ ಕಳುಹಿಸಿ ಕೊಡಲಾಗುತ್ತದೆ. ಹೀಗೆ ಶುದ್ದೀಕರಣಗೊಂಡ ಸಂದರ್ಭದಲ್ಲಿ ಅಡೀ ಭಾಗದಲ್ಲಿ ಕೆಸರು ಮಿಶ್ರಿತ ಕಲ್ಮಶ ನೀರು ಪ್ರತ್ಯೇಕವಾಗಿ ಸಂಗ್ರಹಗೊಳ್ಳುತ್ತದೆ. ಈ ನೀರನ್ನು ಪಕ್ಕದಲ್ಲಿರುವ ತೋಡಿನ ಮೂಲಕ ವಾಪಸು ನದಿಗೆ ಬಿಡಲಾಗುತ್ತದೆ. ಹಲವಾರು ವರ್ಷಗಳಿಂದ ಇದೇ ರೀತಿ ಕೆಸರು ಮಿಶ್ರಿತ ಕಲ್ಮಶ ನೀರಿನಿಂದಾಗಿ ತೋಡಿನಲ್ಲಿ ಹೂಳು ತುಂಬಿಕೊಂಡು ನೀರು ಹರಿದು ಹೋಗಲು ಸಾಧ್ಯವಾಗದೆ ದಿಲೀಪ್ ರೈ ಅವರ ತೋಟಕ್ಕೆ ಹರಿದು ಬರುತ್ತಿದ್ದು ಎರಡು ಎಕರೆ ವಿಸ್ತೀರ್ಣದ ತೋಟವನ್ನು ವ್ಯಾಪಿಸಿಕೊಂಡಿದೆ. ನೀರು ಹಾಗೂ ಹೂಳಿನಿಂದಾಗಿ ತೋಟದಲ್ಲಿ ಬೆಳೆದು ನಿಂತಿದ್ದ ಮರ ಬುಡದಿಂದಲೇ ಕೊಳೆಯಲಾರಂಭಿಸಿ ಸತ್ತು ಹೋಗಿದೆ. ಅಲಲ್ಲಿ ಕಂಬ ನೆಟ್ಟಂತೆ ಭಾಸವಾಗುತ್ತಿರುವ ಮರಗಳನ್ನು ನೋಡಿ ಕೃಷಿಕ ದಿಲೀಪ್ ರೈ ಕಣ್ಣೀರಿಡುತ್ತಿದ್ದಾರೆ.
ಮನವಿಗಳಿಗೆ ಬೆಲೆ ಇಲ್ಲ:
ಮಹಾನಗರ ಪಾಲಿಕೆ ಕಶ್ಮಲ ನೀರನ್ನು ಬಿಡುವುದರಿಂದ ತಾನು ಬೆಳೆಸಿದ ಮರಗಳು ತನ್ನ ಕಣ್ಣೆದುರೆ ನಾಶವಾಗುತ್ತಿರುವ ಬಗ್ಗೆ ಕೃಷಿಕ ದಿಲೀಪ್ ರೈ ಆರಂಭದಲ್ಲೇ ಮಹಾನಗರ ಪಾಲಿಕೆಯ ಗಮನಕ್ಕೆ ತಂದಿದ್ದಾರೆ. ಆದರೆ ಅಧಿಕಾರಿಗಳು ಯಾವುದೇ ಸ್ಪಂದನೆ ನೀಡಿರಲಿಲ್ಲ. ಬಳಿಕ ತಹಶೀಲ್ದಾರ್, ಜಿಲ್ಲಾಧಿಕಾರಿಗಳಿಗೂ ಈ ಬಗ್ಗೆ ದೂರು ನೀಡಿದ್ದರೂ ಯಾರೂ ಕ್ಯಾರೇ ಎಂದಿರಲಿಲ್ಲ. ಸ್ಥಳೀಯ ಪಂಚಾಯತ್, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ. ಫಲಕೊಡುವ ಕಾಲಕ್ಕೆ ಮರಗಳನ್ನು ಕಳೆದುಕೊಂಡ ಕೃಷಿಕನ ನೋವು ಯಾವುದೇ ಅಧಿಕಾರಿಯ ಅಥವಾ ಜನಪ್ರತಿನಿಧಿಯ ಮನಸ್ಸಿಗೆ ತಟ್ಟಲೇ ಇಲ್ಲ.
ಸಾಯುವ ಹಂತದಲ್ಲಿ ಇನ್ನಷ್ಟು ಮರಗಳು:
ಈಗಾಗಲೆ ಸಾವಿರಾರು ಮರಗಳನ್ನು ಕಳೆದುಕೊಂಡಿರುವ ದಿಲೀಪ್ ರೈ ಫಲ ನೀಡುತ್ತಿರುವ ಇನ್ನಷ್ಟು ಮರಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಸುಮಾರು ಎರಡು ಎಕರೆ ತೋಟವನ್ನು ಸಂಪೂರ್ಣ ಆಹುತಿ ತೆಗೆದುಕೊಂಡಿರುವ ಮನಾಪ ನೀರು ಶುದ್ದೀಕರಣ ಘಟಕದ ಕಲ್ಮಶ ನೀರು ಇನ್ನೊಂದು ತೋಟದತ್ತ ನುಗ್ಗುತ್ತಿದೆ. ಅಲ್ಲಿ ಕೂಡ ನೀರು ನಿಲ್ಲಲಾರಂಭಿಸಿದ್ದು ಮರಗಳು ಸಾಯುವ ಸ್ಥಿತಿಗೆ ಬಂದಿದೆ. ಕೃಷಿಯನ್ನೆ ನಂಬಿ ಬದುಕುತ್ತಿರುವ ದಿಲೀಪ್ ರೈ ಇರುವ ಕೃಷಿಯೂ ನಶಿಸಿ ಹೋಗುವ ಆತಂಕದಲ್ಲಿದ್ದಾರೆ. ಈಗಾಗಲೇ ಕೃಷಿಗಾಗಿ ಎರಡು ಲಕ್ಷ ರುಪಾಯಿ ಬ್ಯಾಂಕ್ ಸಾಲ ಮಾಡಿದ್ದು ಫಲ ನೀಡುವ ಬದಲು ಮರಗಳೇ ನಾಶವಾಗುತ್ತಿರುವುದನ್ನು ಕಂಡು ದಿಕ್ಕು ತೋಚದಂತಾಗಿದ್ದಾರೆ.

By suddi9

Leave a Reply

Your email address will not be published. Required fields are marked *