ಬಂಟ್ವಾಳ : ತಾಲೂಕಿನ ಪಾಣೆಮಂಗಳೂರು ಸಮೀಪದ ಆಲಡ್ಕ ಬದ್ರಿಯಾ ಜುಮಾ ಮಸೀದಿಯ ಆಡಳಿತ ಕಮಿಟಿಯ ದುರ್ವರ್ತನೆ ಹಾಗೂ ಲೆಡರ್‍ಹೆಡ್ ದುರುಪಯೋಗದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ನೊಂದವರಿಗೆ ನ್ಯಾಯ ದೊರಕಿಸಿಕೊಡುವಂತೆ ಮಸೀದಿಯ ಉಪಾಧ್ಯಕ್ಷ ಹಾಗೂ ಸದಸ್ಯರೇ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಿಗೆ ಲಿಖಿತ ದೂರು ನೀಡಿದ್ದಾರೆ.
ಮಸೀದಿ ಉಪಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಹಾಗೂ ಸದಸ್ಯ ಮುಹಮ್ಮದ್ ಶಫೀಕ್ ಎಂಬವರು ವಕ್ಫ್ ಸಮಿತಿಗೆ ಈ ದೂರು ನೀಡಿದ್ದಾರೆ. ಬದ್ರಿಯಾ ಮಸೀದಿಯ ಆಡಳಿತ ಸಮಿತಿಯ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸುತಿರುವುಂತೆಯೇ ನಮ್ಮ ವಿರುದ್ದ ಇಲ್ಲಸಲ್ಲದ ಸುಳ್ಳು ಕತೆ ಕಟ್ಟಿ ಮಸೀದಿ ಲೆಟರ್‍ಹೆಡ್ ಬಳಸಿ ಪೊಲೀಸ್ ಠಾಣೆಗೆ ದೂರು ನೀಡಿರುವ ಮಸೀದಿ ಕಾರ್ಯದರ್ಶಿ ಅಬ್ದುಲ್ ಮಜೀದ್ ಎಂಬಾತನ ವಿರುದ್ದ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷ ಡಾ ಎಂ ಎಂ ಶರೀಫ್ ಅವರಿಗೆ ಲಿಖಿತವಾಗಿ ಕೋರಿಕೊಳ್ಳಲಾಗಿತ್ತು. ಆದರೆ ಅಧ್ಯಕ್ಷ ಶರೀಫ್ ನಮ್ಮ ಮನವಿಯನ್ನು ನಿರ್ಲಕ್ಷಿಸಿದ್ದಲ್ಲದೆ ಆರೋಪಿ ಕಾರ್ಯದರ್ಶಿಯನ್ನು ರಕ್ಷಿಸುವ ಭರದಲ್ಲಿ ನಮ್ಮನ್ನೇ ಬೆದರಿಸಿ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮಸೀದಿಯ ಸಾಮಾನ್ಯ ಸಭೆಯಲ್ಲಿ ಹೀನ ಭಾಷೆಯಲ್ಲಿ ನಿಂದಿಸುವುದಲ್ಲದೆ, ಕೋರಂ ಭರ್ತಿಯಾಗದೆ ಸಭೆ ನಡೆಸುವುದು, ಇತರ ಸದಸ್ಯರ ಮಾತಿಗೆ ಬೆಲೆ ನೀಡದೆ ನಿರಂಕುಶವಾಗಿ ವರ್ತಿಸುವುದು, ಸಭೆಯಲ್ಲಿ ಆಗಿರುವ ನಿರ್ಣಯಕ್ಕೆ ವಿರುದ್ದವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುವುದು, ಜಮಾಅತ್ ಸದಸ್ಯರಿಗೆ ಲಿಖಿತ ನೋಟೀಸ್ ನೀಡದೆ ಏಕಾಏಕಿ ಮಹಾಸಭೆ ನಡೆಸಿ ತಮಗೆ ತೋಚಿದ ರೀತಿಯಲ್ಲಿ ಸಮಿತಿ ರಚನೆ ಮಾಡುವುದು ಮೊದಲಾದ ರೀತಿಯಲ್ಲಿ ಮಸೀದಿಯ ಅಧ್ಯಕ್ಷರು ನಿರಂಕುಶ ಪ್ರಭುತ್ವ ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ವಿವರಿಸಿರುವ ಅಬ್ದುಲ್ ಖಾದರ್ ಹಾಜಿ ಹಾಗೂ ಶಫೀಕ್ ಇವರು ಈ ಎಲ್ಲ ಪ್ರಕರಣಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ಮಸೀದಿ ಪಾವಿತ್ರ್ಯತೆ ಕಾಪಾಡುವಂತೆ ವಕ್ಫ್ ಇಲಾಖೆಗೆ ಆಗ್ರಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *