ಬಂಟ್ವಾಳ : ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಬಂಟ್ವಾಳ ವಲಯದ ವತಿಯಿಂದ “ಉಜ್ವಲ ಭವಿಷ್ಯಕ್ಕಾಗಿ ಒಂದಾಗೋಣ” ಎಂಬ ಶೀರ್ಷಿಕೆ ಅಡಿಯಲ್ಲಿ ಜರಗುವ “ಜನ ಸಂಗಮ 2015” ಈ ಅಭಿಯಾನದ ಅಂಗವಾಗಿ ಪುರುಷರಿಗಾಗಿ ಕ್ರೀಡಾಕೂಟವು ಬಸ್ತಿಪಡ್ಪು ಕ್ರೀಡಾಂಗಣದಲ್ಲಿ ನಡೆಯಿತು.
ಈ ಕ್ರೀಡಾಕೂಟವನ್ನು ವಲಯ ಪ್ರಧಾನ ಕಾರ್ಯದರ್ಶಿ ಉಮರುಲ್ ಪಾರೂಕ್ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಐ.ಎಮ್.ಆರ್ ಮುಖ್ಯ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಸಂಘಟನಾ ಪ್ರಮುಖರಾದ ಅಬ್ದುಲ್ ಖಾದರ್, ಮುಬಾರಕ್ ಗೂಡಿನಬಳಿ, ಇಸ್ಮಾಯಿಲ್ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಹೀಂ ಗೂಡಿನಬನಬಳಿ ಸ್ವಾಗತಿಸಿದರು. ಯಾಕೂಬ್ ಬಂಟ್ವಾಳ ವಂದಿಸಿದರು, ಇರ್ಶಾದ್ ಬಂಟ್ವಾಳ ನಿರೂಪಿಸಿದರು.