ಬಂಟ್ವಾಳ : ಧರ್ಮ ಜಾಗರಣಾ ಪ್ರತಿಷ್ಠಾನ ರಿ. ಮಂಚಿ ಇದರ ಆಡಳಿತ ಕ್ಕೊಳಪಟ್ಟ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಕುಕ್ಕಾಜೆಗೆ ಕಾಮಗಾರಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪೂಜ್ಯ ಡಾ.ಡಿ.ವಿರೇಂದ್ರ ಹೆಗಡೆಯವರು ರೂ.3ಲಕ್ಷವನ್ನು ಬಿಡುಗಡೆಮಾಡಿರುತ್ತಾರೆ. ಈ ಸಂಬಂಧ ಚೆಕ್ಕನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಾಲೆತ್ತೂರು ವಲಯದ ಮೇಲ್ವಿಚಾರಕ ಮೇಲ್ವಿಚಾರಕರಾದ ನವೀನ್ ಶೆಟ್ಟಿ ಯವರು ದೇವಸ್ಥಾನದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಮಕ್ಷಮ ಹಸ್ತಾಂತರಿಸಿದರು.

ಸದ್ರಿ ಮೊತ್ತವನ್ನು ದೇವಸ್ಥಾನದಲ್ಲಿ ಅಪೂರ್ಣವಾಗಿ ಬಾಕಿ ಇರುವ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುದು ಎಂದು ಅಧ್ಯಕ್ಷ ಕೈಯೂರು ನಾರಾಯಣ ಭಟ್ ತಿಳಿಸಿದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಸಂಜೀವ ಬೆಳ್ಚಾಡ ಮದನಾಜೆ , ಗಣೇಶ್ ಆಚಾರ್ಯ ಕುಕ್ಕಾಜೆ , ಸತೀಶ್ ಕುಕ್ಕಾಜೆಬೈಲು, ಜಗ ದೀಶ ಶೆಟ್ಟಿ , ಕಸ್ತೂರಿ ರೈ , ಪತ್ತುಮುಡಿ ವಿಠಲ ಪ್ರಭು, ಸಂಜೀವ ಸಾಲ್ಯಾನ್ , ಸಂಜಿತ್ ಉಪಸ್ಥಿತರಿದ್ದರು .