ಬಂಟ್ವಾಳ :ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪ ಮೂಡ ಇಲ್ಲಿಗೆ ಏರ್ಯ ಲಕ್ಷ್ಮೀ ನಾರಾಯಣ ಆಳ್ವ – ಹಿರಿಯ ಸಾಹಿತಿ, ಕುಲಪತಿಗಳು ಸಂಸ್ಕಾರ ಭಾರತಿ ವಿದ್ಯಾಲಯ ಬೆಂಗಳೂರು ಇವರು ಇತ್ತೀಚೆಗೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶಿಲಾಮಯ ಗರ್ಭಗುಡಿ , ತೀರ್ಥಮಂಟಪ ಕಾಮಗಾರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸದಾನಂದ ಪೂಂಜ , ದೇವಿಪ್ರಸಾದ್ ಪೂಂಜ , ಸುಬ್ರಹ್ಮಣ್ಯ ಭಟ್ , ಪರಮೇಶ್ವರ ಹೇರಳೆ ಉಪಸ್ಥಿರಿದ್ದರು.