ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ಕಡಿಮೆಯಿದ್ದರೂ ಅದನ್ನು ಸಂಪೂರ್ಣ ನಿವಾರಿಸುವಲ್ಲಿ ನಾವು ಕಟಿಬದ್ದರಾಗಬೇಕು . ಬಾಲಕಾರ್ಮಿಕರನ್ನು ಗುರುತಿಸಿ ಅವರಿಗೆ ಉತ್ತಮ ಶಿಕ್ಷಣ ನೀಡಿ ಸುಮದುರ ಭವಿಷ್ಯಕ್ಕಾಗಿ ಎಲ್ಲರೂ ಸಹಕಾರ ನೀಡಬೇಕೆಂದು ಗೌ/ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ಯು. ನುಡಿದರು.

KAR_5327

KAR_5323

ಅವರು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಮತ್ತು ಸರಕಾರಿ ಪ್ರೌಢಶಾಲೆ ಅಜ್ಜಿಬೆಟ್ಟು ಬಿ.ಮೂಡ ಇದರ ಜಂಟಿ ಆಶ್ರಯದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಕಾನೂನು ಮಾಹಿತಿ ಕಾರ್ಯಕ್ರಮ ವನ್ನು ಅಜ್ಜಿಬೆಟ್ಟು ಸರಕಾರಿ ಪ್ರೌಢಶಾಲೆ ಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಗೌ/ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ಯು. ಮಕ್ಕಳಿಗೆ ವಿಶ್ವ ಬಾಲಕಾರ್ಮಿಕ ದಿನಾಚರಣೆ ಬಗ್ಗೆ ಪ್ರಮಾಣ ವಚನ ಭೋಧಿಸಿದರು.
ಅನುಕೂಲರಸ್ಥರಲ್ಲದ ಮಕ್ಕಳು ಬಾಲಕಾರ್ಮಿಕತೆಗೆ ಒಳಗಾಗುತ್ತಾರೆ. ಕಾರಣಗಳು ಹೆತ್ತವರ ಅನಕ್ಷರತೆ, ಬಡತನ , ಹೆಣ್ಣುಮಕ್ಕಳೆಂಬ ತಾರತಮ್ಯ . ನಾವೆಲ್ಲರೂ ಬಾಲಕಾರ್ಮಿಕ ನಿಷೇಧ ಕಾರ್ಯಕ್ರಮಕ್ಕೆ ಕೈಜೋಡಿಸಬೇಕೆಂದು ಗೌ/ಪ್ರ/ಸಿವಿಲ್ ನ್ಯಾಯಾಧೀಶರಾದ ದೇವಾನಂದ ನುಡಿದರು.
ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ಸುರೇಶ್ ಕುಮಾರ್ ನಾವೂರು ಬಾಲಕಾರ್ಮಿಕ ನಿಷೇಧ , ನಿಯಂತ್ರಣ ಅಧಿನಿಯಮ , ಬಾಲಾಪರಾಧ ಮತ್ತು ಮಕ್ಕಳ ಶೋಷಣೆ ಬಗ್ಗೆ ಮಾಹಿತಿ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಹಶೀಲ್ದಾರ್ ಪುರಂದರ ಹೆಗಡೆ , ಸಂಚಾರಿ ಠಾಣಾ ಉಪನಿರೀಕ್ಷಕ ಚಂದ್ರಶೇಖರಯ್ಯ , ನ್ಯಾಯವಾದಿ ಸತೀಶ್ ಬಿ. ಉಪಸ್ಥಿತರಿದ್ದರು. ಶಿಕ್ಷಕಿ ಅನಿತಾ ಸ್ವಾಗತಿಸಿದರು. ಶಿಕ್ಷಕಿ ಗೀತಾ ಎನ್. ವಂದಿಸಿ ಶಿಕ್ಷಕ ಶಿವಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *