ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ಸ್ ಬಂಟ್ವಾಳ ವಲಯ ಹಾಗೂ ಮಾತೃಶ್ರೀ ಗೆಳೆಯರ ಬಳಗ ವೀರಕಂಭ ಇವುಗಳ ಸಹಯೋಗದಲ್ಲಿ ಜೂ.10ರಂದು ಬುಧವಾರ ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಮಜಿ ಇಲ್ಲಿನ ಶಾಲಾ ವಿದ್ಯಾರ್ಥಿಗಳಿಗೆ ಬರವಣಿಗೆಯ ಪುಸ್ತಕ ಹಾಗೂ ಲೇಖನ ಸಾಮಾಗ್ರಿಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಯುತ ಎಂ.ಎಸ್ ಮಹಮ್ಮದ್, ತಾಲೂಕು ಪಂಚಾಯತ್ ಸದಸ್ಯರಾದ ಮಾಧವ ಮಾವೆ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ಶೇಷಶಯನ ಕಾರಿಂಜ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ಸ್ನ ಬಂಟ್ವಾಳ ವಲಯದ ರಾಜೇಂದ್ರ ಶಿಕ್ಷಣ ಸಂಯೋಜಕಿ ಸುಜಾತ ಕುಮಾರಿ, ಮುಖ್ಯಶಿಕ್ಷಕರಾದ ನಾರಾಯಣ ಪೂಜಾರಿ, ಅಧ್ಯಕ್ಷರಾದ ಮೋನಪ್ಪರವರು ಭಾಗವಹಿಸಿದ್ದರು.
ಸಮಾಜದಿಂದ ಪಡೆದದ್ದು ಸಮಾಜಕ್ಕೆ ಕೊಡುವ ಮೂಲಕ ಛಾಯಾಗ್ರಾಹಕರ ಅಸೋಸಿಯೇಶನ್ಸ್ ಬಂಟ್ವಾಳ ವಲಯವು ನಿರಂತರವಾಗಿ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಪ್ರತಿವರ್ಷವೂ ಇಂತಹ ಸಮಾಜ ಮುಖೇನ ಕೆಲಸ ಮಾಡುವ ಉದ್ದೇಶವೆಂದು ಬಂಟ್ವಾಳ ವಲಯದ ಗೌರವಾಧ್ಯಕ್ಷರಾದ ದಯಾನಂದ ಬಿ.ರವರು ತಮ್ಮ ಪ್ರಾಸ್ತಾವಿಕ ಮಾತಿನಲ್ಲಿ ತಿಳಿಯ ಪಡಿಸಿದರು.
ಸಮುದಾಯದ ಸಹಾಯವು ಶಾಲೆಯು ಸಂಪೂರ್ಣ ಅಭಿವೃದ್ಧಿ ಹೊಂದುವಲ್ಲಿ ಸಹಕಾರಿಯಾಗಿದೆ. ಸರಕಾರದಿಂದ ಪಡೆಯುವ ಸವಲತ್ತುಗಳ ಜೊತೆಗೆ ತಮ್ಮ ಕೊಡುಗೆಯನ್ನು ನೀಡಿ ಸರಕಾರಿ ಶಾಲೆಯ ಅಭಿವೃದ್ಧಿಗೆ ಸಹಕರಿಸಿದ್ದು ಇದು ಇತರ ಸಂಘ ಸಂಸ್ಥೆಗಳಿಗೆ ಪ್ರೇರಣೆಯಾಗಲಿ ಎಂದು ಬಂಟ್ವಾಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ಶ್ರೀಯುತ ಶೇಷಶಯನ ಕಾರಿಂಜರವರು ಒಂದನೆಯ ತರಗತಿಯ ವಿದ್ಯಾರ್ಥಿನಿಗೆ ಸ್ಲೇಟಿನಲ್ಲಿ ಕೈ ಹಿಡಿದು ಅಕ್ಷರ ಬರೆಸುವ ಮೂಲಕ ವಿಶಿಷ್ಟವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
