ಮಕ್ಕಳ ಉತ್ತಮ ಭವಿಷ್ಯ ರೂಪಿಸಿಕೊಳ್ಳಿರಿ: ಶಾಸಕ ನಾರಾಯಣ ಗೌಡ

ಮುಂಬಯಿ (ಕೃಷ್ಣರಾಜಪೇಟೆ): ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ವಸತಿ ಶಾಲೆಗಳು ಬೇಡಿದ್ದನ್ನೆಲ್ಲಾ ನೀಡುವ ಕಾಮಧೇನು, ಕಲ್ಪವೃಕ್ಷದಂತಿವೆ ಎಂದು ಶಾಸಕ ನಾರಾಯಣ ಆರ್.ಗೌಡ ಅಭಿಪ್ರಾಯಪಟ್ಟರು. ಅವರು ಪಟ್ಟಣದ ಚನ್ನರಾಯಪಟ್ಟಣ ರಸ್ತೆಯಲ್ಲಿರುವ ಪಿವಿಆರ್ ಕಾಂಪ್ಲೆಕ್ಸ್‍ನಲ್ಲಿ ಆರಂಭವಾದ ಕೇಂದ್ರೀಯ ನವೋದಯ ಮಾದರಿಯ ಅಲ್ಪಸಂಖ್ಯಾತರ ವಸತಿ ಶಾಲೆಯ ಆರಂಭಕ್ಕೆ ಚಾಲನೆ ನೀಡಿ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿ ಮಾತನಾಡಿದರು.

Narayana Gowda MLA-2

Narayana Gowda MLA-1

ರಾಜ್ಯ ಸರ್ಕಾರ ಪ್ರಸಕ್ತ ಸಾಲಿಗೆ ಇಡೀ ಕರ್ನಾಟಕ ರಾಜ್ಯಕ್ಕೆ ಎರಡು ಅಲ್ಪ ಸಂಖ್ಯಾತರ ವಸತಿ ಶಾಲೆಗಳನ್ನು ಮಾತ್ರ ಮಂಜೂರು ಮಾಡಿತ್ತು. ತಾಲೂಕಿನ ಅಲ್ಪ ಸಂಖ್ಯಾತರ ಹಿತದೃಷ್ಟಿಯಿಂದ ವಸತಿ ಶಾಲೆಯನ್ನು ತರಲು ಸತತವಾಗಿ ಭಗೀರಥನಂತೆ ಪ್ರಯತ್ನ ಮಾಡಿದ್ದ ನಾನು ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್‍ಖಾನ್ ಅವರ ಸಹಾಯದಿಂದ ಮಾನ್ಯ ಸಮಾಜ ಕಲ್ಯಾಣ ಸಚಿವರು ಮತ್ತು ವಕ್ಫ್ ಸಚಿವರ ಮನವೊಲಿಸಿ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿಯ ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನ ವಿಶಾಲವಾದ ಪ್ರಶಾಂತ ಸ್ಥಳದಲ್ಲಿ 30ಕೋಟಿ ರೂಪಾಯಿ ವೆಚ್ಚದ ಮಹತ್ವಾಕಾಂಕ್ಷಿ ಯೋಜನೆಯನ್ನು ತಂದ್ದಿದ್ದೇನೆ. ತಾಲೂಕಿನ ಅಲ್ಪ ಸಂಖ್ಯಾತ ಬಂಧುಗಳು ತಮ್ಮ ಮಕ್ಕಳನ್ನು ವಸತಿ ಶಾಲೆಗೆ ಸೇರಿಸುವ ಮೂಲಕ ತಮ್ಮ ಮಕ್ಕಳ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಶಾಲೆಯ ಸುಸಜ್ಜಿತವಾದ ಕಟ್ಟಡವನ್ನು ಸಂತೇಬಾಚಹಳ್ಳಿ ಹೋಬಳಿಯ ಆದಿಹಳ್ಳಿ ಗ್ರಾಮದ ಬಳಿ 25 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದ್ದು ಇನ್ನೊಂದು ವರ್ಷದಲ್ಲಿ ಭವ್ಯವಾದ ಕಟ್ಟಡವು ತಲೆಯೆತ್ತಿ ನಿಂತು ಬಡಮಕ್ಕಳ ಶೈಕ್ಷಣಿಕ ವಿಕಾಸಕ್ಕೆ ಅನುಕೂಲ ಕಲ್ಪಿಸಲಿದೆ. ಈಗಾಗಲೇ ಶಾಲಾ ಕಟ್ಟಡ ಕಾಮಗಾರಿಯನ್ನು ಆರಂಭಿಸಲು 5 ಕೋಟಿ ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆಯು ಮುಗಿದ ಬಳಿಕ ಭೂಮಿ ಪೂಜೆ ನೆರವೇರಿಸಲಾಗುವುದು. 6ನೇ ತರಗತಿಯಿಂದ ಪದವಿ ಪೂರ್ವ ಶಿಕ್ಷಣದವರೆಗೆ ಮಕ್ಕಳು ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಶಾಲೆಯ ಸುಂದರವಾದ ಕ್ಯಾಂಪಸ್ ಹಾಗೂ ಭವ್ಯವಾದ ಕಟ್ಟಡಗಳ ಸಮುಚ್ಛಯವು ನಿರ್ಮಾಣವಾಗಲಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಅಲ್ಪ ಸಂಖ್ಯಾತ ಬಂಧುಗಳ ಮಕ್ಕಳ ವಿದ್ಯಾರ್ಜನೆಗಾಗಿ ಪದವಿ ಕಾಲೇಜನ್ನು ಮಂಜೂರಾತಿ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ನಾರಾಯಣಗೌಡರು ಪ್ರಕಟಿಸಿದರು.

ಕೆ.ಆರ್.ಪೇಟೆ ಪುರಸಭೆ ಅಧ್ಯಕ್ಷ ಕೆ.ಗೌಸ್‍ಖಾನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿüಯಾಗಿ ಮುಸ್ಲಿಂ ಸಮುಧಾಯದ ಹಿರಿಯ ಮುಖಂಡ ಕೆ.ಯೂನಸ್‍ಖಾನ್, ಗೌರವ ಅತಿಥಿüಗಳಾಗಿ ಪುರಸಭೆ ಅದಸ್ಯ ಡಿ.ಪ್ರೇಮಕುಮಾರ್, ಮಾಜಿ ಸದಸ್ಯ ಕೆ.ಆರ್.ನೀಲಕಂಠ, ತಾಲೂಕು ಬಿಸಿಎಂ ವಿಸ್ತರಣಾಧಿಕಾರಿ ನಂದಕುಮಾರ್, ಪ್ರಾಂಶುಪಾಲ ಟಿ.ಸುರೇಶ್, ನಿಲಯಪಾಲಕರಾದ ಜಗದೀಶ್, ಮುಖಂಡ ವಿಠಲಾಪುರ ಸುಬ್ಬೇಗೌಡ, ರಫೀಕ್‍ಅಹಮದ್, ಸೈಯ್ಯದ್‍ಖಲೀಲ್, ಶಿಕ್ಷಕ ಉಮೇಆಸ್ಮಾ ಖಾನಂ, ರವಿ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *