ಮುಂಬಯಿ : ಕರ್ನಾಟಕ ರಾಜ್ಯದ ರಾಜ್ಯಪಾಲರೂ, ವಿಶ್ವ ವಿದ್ಯಾಲಯದ ಕುಲಪತಿಗಳೂ ಆದ ವಜೂಭಾೈ ರೂಡಭಾೈ ವಾಲಾ ಅವರು ತಮ್ಮ ಘನಾಧ್ಯಕ್ಷತೆಯಲ್ಲಿ ಮಂಗಳೂರು ವಿಶ್ವ ವಿದ್ಯಾಲಯವು ಇಂದಿಲ್ಲಿ ಬುಧವಾರ ತನ್ನ 33 ಘಟಿಕೋತ್ಸವನ್ನು ಆಚರಿಸಿತು. ಮಂಗಳೂರುದೇರಳಕಟ್ಟೆಅಲ್ಲಿನಮಂಗಳಗಂಗೋತ್ರಿಯಮಂಗಳಾ ಆಡಿಟೋರಿಯಂನಲ್ಲಿ ನೇರವೇರಿಸಲ್ಪಟ್ಟ ಘಟಿಕೋತ್ಸವದಲ್ಲಿ ಬಂಟ್ವಾಳ ಮೂಲದ ಮುಂಬಯಿನ ಹೆಸರಾಂತ ಹಾಗೂ ಪ್ರತಿಷ್ಠಿತ ಉದ್ಯಮಿ,ಆಲ್‍ಕಾರ್ಗೋ ಲೋಜಿಸ್ಟಿಕ್ಸ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ, ಆಡಳಿತ ನಿರ್ದೇಶಕ ಶಶಿ ಕಿರಣ್ ಶೆಟ್ಟಿ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನಿಸಿ ಗೌರವಿಸಿದರು. ಬಸ್ ಕಂಡಕ್ಟರ್ ಕೂಡಾ ಪತ್ರಿಕೋದ್ಯಮದಲ್ಲಿ ಡಾಕ್ಟರೇಟ್ ಪ್ರಾಪ್ತಿಸಿದರು.
Dr. Shashi Kiran Shetty-3

Dr. Shashi Kiran Shetty-1

Dr. Shashi Kiran Shetty-2
ಪತ್ರಿಕೋದ್ಯಮದ ಹವ್ಯಾಸಿ ಬೆಂಗಳೂರುನ ಬಿಎಂಟಿಸಿ ಬಸ್ ಕಂಡಕ್ಟರ್ ನರಸಿಂಹ ಗುಂಜಳ್ಳಿ ಅವರು ಕರ್ನಾಟಕದಲ್ಲಿನ ಭೂಸಾಗುವಳಿಯ ವರ್ತಮಾನ ಆವರಣದ ಪುರವಾಣಿ ಮತ್ತು ನಿಯತಕಾಲಿಕ ಪತ್ರಿಕೆಗಳ ಪಾತ್ರದಕುರಿತು ಮಂಡಿಸಿದ `ಕರ್ನಾಟಕದಲ್ಲಿ ಕನ್ನಡ ಕೃಷಿ ಪತ್ರಿಕೋದ್ಯಮ ಒಂದು ಅಧ್ಯಾಯ’ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೂ ಪಿಹೆಚ್‍ಡಿ ಡಾಕ್ಟರೇಟ್ ಪ್ರಾಪ್ತಿಸಿ ಸರ್ವರ ಪ್ರಶಂಸೆಗೆ ಪಾತ್ರರಾದರು. ನರಸಿಂಹ ಗುಂಜಳ್ಳಿ ಅವರು ಮಾಸ್ ಕಮ್ಯುನಿಕೇಶನ್ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಫ್ರೊ| ಜಿ.ಪಿ ಶಿವರಾಮ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. ಭವ್ಯ ಸಮಾರಂಭದಲ್ಲಿ ಭಾರತೀಯ ವಿಜಾನ ಸಂಸ್ಥೆಯ ವಿಶ್ವಾಂತ ನಿರ್ದೇಶಕ ಹಾಗೂ ಹೈದರಾಬಾದ್ ವಿಶ್ವವಿದ್ಯಾಲಯದ ಸ್ಟಾರ್ ಆಫ್ ಕೆಮೆಸ್ಟ್ರಿ ರಾಷ್ಟ್ರೀಯ ಸಂಶೋಧನಾ ಪ್ರಾಧ್ಯಾಪಕ ಫ್ರೊ| ಗೋವರ್ಧನ ಮೆಹ್ತಾ ಮತ್ತು ಫ್ರೊ| ಬಿ.ವಿ ಆರ್ ಚೌಧರಿ ಅವರಿಗೂ ಗೌರವ ಡಾಕ್ಟರೇಟ್ ಪದವಿ ಪ್ರದಾನಿಸಲಾಗಿದ್ದು, ಫ್ರೊ| ಗೋವರ್ಧನ ಅವರು ಘಟಕೋತ್ಸವ ಭಾಷಣಗೈದರು. ಈ ವೇಳೆ ಮಂಗಳೂರು ವಿವಿ ಕುಲಸಚಿವ ಪಿ.ಎಸ್.ಯಡಪಡಿತ್ತಾಯ, ಪರೀಕ್ಷಾಂಗ ಕುಲ ಸಚಿವ ಬಿ.ನಾರಾಯಣ, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಫ್ರೊ| ಜಿ.ಪಿ. ಶಿವರಾಮ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *