ಮುಂಬಯಿ : ಅದು ಸುಮಾರು ಎರಡುವರೆ ದಶಕಗಳ ಹಿಂದಿನ ಕಾಲಮಾನ. ಕೊಂಕಣ ರೈಲು ಆರಂಭಕ್ಕೆ ಸನ್ನದ್ಧಗೊಳ್ಳುತ್ತಿದ್ದಸಮಯ. ಮುಂಬಯಿ-ಮಂಗಳೂರು-ಮುಂಬಯಿ ಪ್ರಯಾಣಿಕರು ಬಸ್ಸುಗಳಲ್ಲಿ ಡಬ್ಬಗಳನ್ನಿರಿಸಿ ಪ್ರಯಾಣಿಸುತ್ತಿದ್ದ ಕಾಲ. ಆ ವೇಳೆಗೆಮಂಗಳೂರು ಕಡೆ ಹೋಗುವ ಬಸ್ಸುಗಳು ಬೆಳಿಗ್ಗೆ ಸುಮಾರು 6:00 ಗಂಟೆಗೆ ಹೊರಡುತ್ತಿದ್ದವು. ಆ ವೇಳೆಗೆನೇ ಚಿತ್ರನಟ ಪ್ರಭುದೇವಹೋಲುವ ಸಪೂರ ದೇಹದ ಉದ್ದನೆಯ
ಗಡ್ಡಧಾರಿ ವ್ಯಕ್ತಿಯೋರ್ವರು ಸಯಾನ್‍ನಲ್ಲಿ ದೈನಂದಿನವಾಗಿ ತಪ್ಪದೇಪ್ರತ್ಯಕ್ಷರಾಗುತ್ತಿದ್ದರು.ಅವರನ್ನು ಹೆಚ್ಚಿನವರು ಕೆನರಾ ಪಿಂಟೋ ನಾರಾಯಣ……. ನಾರಾಯಣ……. ಎಂದೇ ಗುರುತಿಸಿ ಕೊಂಡಿದ್ದರು.
ಅದು ದೂರವಾಣಿಯ ಟ್ರಂಕ್‍ಕಾಲ್ (ಪಿಪಿ) ಮುಕ್ತಯಾವಸ್ಥೆಯ ಸಮಯ ಒಂದೆಡೆಯಾದರೆ ಪೇಜರ್ ಮೇಸಜ್ ಮೂಲಕ ಯಾವ ಬಸ್ಸು ಎಲ್ಲಿ ತಲುಪಿದವು ಎಂದು ತಿಳಿದು ಪಿಸಿಒ, ಎಸ್‍ಟಿಡಿ ಬೂತ್ ಕಡೆ ಓಡಾಡಬೇಕಾದ ಸಮಯವೂ ಹೌದು. ಬಹುಶಃ ಊರಿಗೆ ಹೋಗುವ ಬಸ್ಸುಗಳಲ್ಲಿನ ವ್ಯತ್ಯಾಯ, ಟಿಕೇಟು ದರ, ಸಮಸ್ಯೆ ಇತ್ಯಾದಿಗಳನ್ನು ಕೇಳಿ ತಿಳಿಯಬೇಕಾದರೆ, ಅಪತ್ಕಾಲಕ್ಕೆ ತತ್‍ಕ್ಷಣವೇ ಟಿಕೇಟು ಪಡೆಯುವಂತಿದ್ದರೆಅದಕ್ಕೆ
ಸೂಕ್ತವಾದ ವ್ಯಕ್ತಿಯೇ ಕೆನರಾ ಪಿಂಟೋ ನಾರಾಯಣ ಎಂದೆಣಿಸಿದ್ದರು. ಉಡುಪಿ ಜಿಲ್ಲೆಯ ಕೊಡವೂರು ಗ್ರಾಮದ ಜಬ್ಬ ಪೂಜಾರಿ ಮತ್ತು ಸುಂದರಿ ಪೂಜಾರಿ ಅವರ ಆರು ಮಕ್ಕಳ ಕುಟುಂಬದಲ್ಲಿ ಐದನೇಯವರಾಗಿ ಜನಿಸಿದ ನಾರಾಯಣ ಜೆ.ಕರ್ಕೇರ ಅಂದಿನ ದಿನಗಳಲ್ಲಿಯ ತುಂಬು ಬಡತನದಿಂದಾಗಿ ತನ್ನ ಹೆಚ್‍ಎಸ್‍ಸಿ ವಿದ್ಯಾಭ್ಯಾ¸ ಪೂರೈಸಿ ಹೊಟ್ಟೆಯ ಪಾಡಿಗಾಗಿ ಹಾಗೂ ತನ್ನ ಸಂಸಾರದ ಏಳಿಗೆಗಾಗಿ ಮುಂಬಯಿ ಹಾದಿಯನ್ನೀಡಿದಿದ್ದರು. ಪ್ರಾರಂಭದ ದಿನಗಳಲ್ಲಿ ಕಠಿಣ ದಿನಗಳನ್ನು ಕಂಡ ನಾರಾಯಣ ಅವರು 25 ವರ್ಷಗಳ ಹಿಂದೆ ಕೆನರಾ ಪಿಂಟೋ ಟ್ರಾವೆಲ್ಸ್‍ನ ಸಂಚಾಲಕರಾಗಿ ಸೇರಿಕೊಂಡರು. ಮುಂಬಯಿ- ಮಂಗಳೂರು ಪ್ರಯಾಣಕ್ಕೆ ಪ್ರಥಮ ಸಂಸ್ಥೆ ಎಂದೆಣಿಸಿದ್ದ ಕೆನರಾ ಪಿಂಟೋ ಟ್ರಾವೆಲ್ಸ್‍ನಲ್ಲಿ ಚಳಿ-ಮಳೆ-ಬಿಸಿಲ ತಾಪವನ್ನು ಲೆಕ್ಕಿಸದೆ ಕಠಿಣ ಕ್ರಮ, ನ್ಯಾಯ, ನಿಷ್ಠೆಯಿಂದ ಈ ಸಂಸ್ಥೆಯನ್ನು ಮುಂದುವರೆಸಿ ಕೊಂಡು ಮುನ್ನಡೆಯುತ್ತಾ ಸಿಬ್ಬಂದಿಗಳ ಅಚ್ಚು ಮೆಚ್ಚಿನವರಾದರು. ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ದೊರಕಿಸುವಲ್ಲಿವರು ಬಹಳಷ್ಟು ಶ್ರಮವನ್ನು ತೆಗೆದುಕೊಂಡಿದ್ದಾರೆ. ಆಥಿರ್sಕವಾಗಿ ತೊಂದರೆಯಿರುವರಿಗೆ ಟಿಕೇಟ್ ಇಲ್ಲದೆ ಪ್ರಯಾಣಿಸಲು ಅನುವು ಮಾಡಿಕೊಟ್ಟು ತನ್ನ ಕೈಯಿಂದ ಕಂಪೆನಿಯ ಮೊತ್ತವನ್ನು ಭರಿಸುತ್ತಾ ನ್ಯಾಯಯುತವಾಗಿ ಬದುಕುತ್ತಾ ಬಂದಿರುವ ನಾರಾಯಣ ಅವರದು ಬಲು ಮೃದು ವ್ಯಕ್ತಿತ್ವ ಬಹಳ ಸಂಕೋಚಶೀಲ ಸ್ವಭಾವ. ಸಹಾಯ ಕೇಳಿ ಬಂದವರಿಗೆ ಎಂದೂ ಬರಿಗೈಯಲ್ಲಿ ಕಳುಹಿಸದೆ ಆದರಿಸಿದ ಇವರು ಸಾವಿರಾರು ಪ್ರಯಾಣಿಕರ ಮೆಚ್ಚುಗೆ ಪ್ರಾತ್ರರಾಗಿದ್ದಾರೆ.

Narayana J.Karkera-1

ತನ್ನ ತಂದೆ ತಾಯಿಯರ ಧಾರ್ಮಿಕ ಪ್ರವೃತ್ತಿಯನ್ನು ಅಳವಡಿಸಿಕೊಂಡು ಬಂದು ಧಾರ್ಮಿಕ ಕಾರ್ಯಗಳಿಗೂ ನೆರವಾಗುತ್ತಾ ಬಂದ ನಾರಾಯಣ ಅವರು ಇದೀಗ ತನ್ನ 25 ವರ್ಷದ ಮುಂಬಯಿ ಬದುಕಿಗೆ ವಿದಾಯ ಹೇಳಿ ತವರೂರು ಸೇರುವ ಹೆಜ್ಜೆಯನ್ನಿರಿಸಿದ್ದಾರೆ. ಬಡ ಮತ್ತು ಮಾದ್ಯಮ ವರ್ಗದ ವಿಶೇಷವಾಗಿ ಕಾರ್ಮಿಕ, ಹೊಟೇಲು ನೌಕರ ವರ್ಗದ ಪ್ರಯಾಣಿಕರ ಬಗ್ಗೆ ಅತೀವ ಕಾಳಜಿಯನ್ನಿರಿಸಿದ್ದ ನಾರಾಯಣರು ನನ್ನಂತಹ ಪತ್ರಕರ್ತರಿಗೂ ವಿಶ್ವಾಸನೀಯ ಆಸರೆಯಾಗಿರುವುದನ್ನು ಮರೆಯಲಾಸಾಧ್ಯ.ಅದೆಷ್ಟೋ ಹೆಣ್ಣುಮಕ್ಕಳು, ಕೆಲಸವನ್ನುಡುಕಿ ಬರುವ ಯುವಕ-ಯುವತಿಯರು, ಮಹಿಳೆಯರು, ವಯೋವೃದ್ಧರಾಗಲಿ ಮುಂಬಯಿಗೆ ಅಪರಿಚಿತರಾಗಿದ್ದು ನಗರಕ್ಕಾಗಮಿಸುವಂತಿದ್ದರೆ ನಾರಾಯಣ ಅವರಲ್ಲಿ ತಿಳಿಸಿದರೆ ಸಾಕು…. ಅವರನ್ನು ಬ್ಯಾಂಕ್ ಟ್ರೆಝರಿ ಅಷ್ಟೇ ವಿಶ್ವಾಸನೀಯವಾಗಿ ಮುಂಬಯಿಗೆ ಯಾ ಊರಿಗೆ ತಲುಪಿಸುವ ಜವಾಬ್ದಾರಿ ಹೊತ್ತು ನಾರಾಯಣರು ತಮ್ಮ ಪ್ರಾಮಾಣಿಕತೆ ಮೆರೆಯುತ್ತಿದ್ದರು. ಅನೇಕ ಬಾರಿ ನಾನು ಪತ್ತೆಹಚ್ಚಿದಹತ್ತಾರು ಯುವಕರನ್ನು ಮತ್ತು 2-3 ಬಾರಿ ವೇಶ್ಯವಟಿಕೆಗೆ ತಳ್ಳಲ್ಪಟ್ಟ ನಮ್ಮೂರ ಯುವತಿಯರರಕ್ಷಣೆಗೈದು ಊರಿಗೆ ಕಳುಹಿಸುವಲ್ಲಿ ಕೆನರಾ ಪಿಂಟೋ ಮಾಲಕಿ ಶ್ರೀಮತಿ ಸಿಂತಿಯಾ ಸಿಕ್ವೇರಾ ಅವರ ಮತ್ತು ವ್ಯವಸ್ಥಾಪಕ ನಾರಾಯಣ ಅವರ ಸಹಾಯ ಕೇಳಿದಾಗ ಇವರಿಬ್ಬರೂ ಈ ಬಗ್ಗೆ ವಿಶೇಷ ಕಾಳಜಿ ವಹಿಸಿ, ಅದಕ್ಕೆಬೇಕಾದ ವ್ಯವಸ್ಥೆ ತಾವಾಗಿಯೇ ನೆರವೇರಿಸಿ, ಬಹುತೇಕರಿಗೆ ಚಾಲಕ-ನಿರ್ವಾಹರೊಂದಿಗೆನೇ ಚ್ಹಾತಿಂಡಿ-ಊಟದ ವ್ಯವಸ್ಥೆಯನ್ನೂ ಮಾಡಿಸಿ ಅವಿರತ ಶ್ರಮವಹಿಸಿ ಅನನ್ಯ ಸಹಯೋಗನೀಡಿ ಸದ್ದುಗದ್ದಲಿಲ್ಲದೆ ಊರಿಗೆ ತಲುಪಿಸುವಲ್ಲಿ ನೆರವಾಗಿದ್ದರು. ವಿದೇಶಕ್ಕೆ ಹೋಗಲು ಮುಂಬಯಿಗೆ ಆಗಮಿಸುತ್ತಿದ್ದ ನೂರಾರು ಹೊಸಬರಿಗೂ ಮುಂಬಯಿ ಸೇರಿಸುವ ಜವಾಬ್ದಾರಿಯನ್ನು ದಕ್ಷತೆಯಿಂದ ನಿರ್ವಹಿಸಿರುವುದು ಶ್ಲಾಘನೀಯ. ನಾರಾಯಣ ಅವರು ನಿರ್ಮಿಸಿದ ಉಡುಪಿ ಅಂಬಾಗಿಲು ಅಲ್ಲಿತಾವು ರೂಪಿಸಿದ ಸುಜನಾ ಕಟ್ಟಡವನ್ನೂ ಕರ್ನಾಟಕ ಸರಕಾರವು ಅಲ್ಪ ಸಂಖ್ಯಾತರ ವಿದ್ಯಾಭ್ಯಾಸಕ್ಕಾಗಿ ಹಮ್ಮಿಕೊಂಡಿರುವ ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜು ಆಗಿ ನಡೆಯಲು ಅನುವು ಮಾಡಿಕೊಟ್ಟು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ತನ್ನಿಂದಾಗುವ ಸಹಾಯಹಸ್ತ ಚಾಚಿರುವ ನಾರಾಯಣ್ ಸೇವಾ ಧ್ಯೇಯವನ್ನಿಟ್ಟುಕೊಂಡು ಅತ್ಯಂತ ರಿಯಾಯತಿ ದರದಲ್ಲಿ ಕಾಲೇಜು ಆಡಳಿತ ಮಂಡಳಿಗೆ ಬಾಡಿಗೆ ರೂಪದಲ್ಲಿ ಕೊಟ್ಟಿದ್ದಾರೆ. ನಾರಾಯಣ ಕರ್ಕೆರ ಅವರ ಮುಂದಿನ ಜೀವನ ಸುಗಮವಾಗಿರಲಿ. ಸದಾ ವೃತ್ತಿ ಧರ್ಮವನ್ನು ನ್ಯಾಯಯುತವಾಗಿ ಪಾಲಿಸಿ ನಡೆದು ಬಂದಿರುವ ಅವರ ಮುಂದಿನ ವ್ಯವಹಾರಗಳು ಫಲಪ್ರದಗೊಳ್ಳಲಿ. ಪತ್ನಿ ರಂಜನಿ ನಾರಾಯಣ್ ಮತ್ತು ಏಕೈಕ ಸುಪುತ್ರಿ ಸುಜನಾ ನಾರಾಯಣ್ ಅವರೊಂದಿಗೆ ಮತ್ತೆ ಸಂಸಾರಿಕ ವಿಶ್ರಾಂತ ಜೀವನಕ್ಕೆ ಹೆಜ್ಜೆಯನ್ನಿರಿಸಲು ತವರೂರನ್ನು ಸೇರುವ ಇವರ ಹೆಸರು ಇನ್ನಷ್ಟು ಬೆಳಗಲಿ ಅವರಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ಹಾರೈಕೆ.

By suddi9

Leave a Reply

Your email address will not be published. Required fields are marked *