ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ, ಜಿಲ್ಲೆ 317-ಡಿ, ಪ್ರಾಂತ್ಯ 7ರ ನಿಯೋಜಿತ ಪ್ರಾಂತೀಯ ಅಧ್ಯಕ್ಷರಾದ ಲಯನ್ ದಾಮೋದರ ಬಿ.ಎಂ. ಇವರ ನೇತೃತ್ವದಲ್ಲಿ ಪ್ರಾಂತ್ಯದ 2015-16ನೇ ಸಾಲಿನ ನಿಯೋಜಿತ ಲಯನ್ ಮುಖಂಡರಿಗೆ ತರಬೇತಿ ಕಾರ್ಯಕ್ರಮ ಹರ್ಷ 2015-16 ಸಿಂಹಗಳ ನಡುವೆ ಕನಸುಗಳ ಕಲರವ ತಾ. 14-6-2015ನೇ ಆದಿತ್ಯವಾರ ಬಿ.ಸಿ.ರೋಡು ಲಯನ್ಸ್ ಸೇವಾ ಮಂದಿರದಲ್ಲಿ ಜರಗಿತು.
ಈ ಔಚಿತ್ಯಪೂರ್ಣ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಗವರ್ನರ್ ಲಯನ್ ಎಂ. ಬಿ. ಸದಾಶಿವರವರು ನೆರವೇರಿಸಿ, ಲಯನಿಸಮ್ನ ಶತಮಾನದ ಸೇವಾ ಸವಾಲುಗಳು ಕಾರ್ಯಸೂಚಿಯನ್ವಯ ತರಬೇತಿಯನ್ನು ನೀಡಿದರು. ಅಧ್ಯಕ್ಷತೆಯನ್ನು ಲಯನ್ ದಾಮೋದರ ಬಿ.ಎಂ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತರಬೇತಿ ವಿಭಾಗದ ಸಂಚಾಲಕರುಗಳಾದ ಲಯನ್ ರೊನಾಲ್ಡ್ ಐಸಾಕ್ ಗೋಮ್ಸ್ ಮತ್ತು ಲಯನ್ ವಿಜಯವಿಷ್ಣು ಮಯ್ಯ ಉಪಸ್ಥಿತರಿದ್ದು, ಮಾಹಿತಿ ನೀಡಿದರು. ಸಮಾರಂಭದಲ್ಲಿ ಅತಿಥಿಗಳಾಗಿ ಲಯನ್ಸ್ ಕ್ಲಬ್ ಬಂಟ್ವಾಳದ ಸ್ಥಾಪಕಾಧ್ಯಕ್ಷರಾದ ಲಯನ್ ಡಾ| ಬಿ. ವಸಂತ ಬಾಳಿಗಾ, ನಿಯೋಜಿತ ಲಯನ್ಸ್ ರಾಯಭಾರಿ ಲಯನ್ ರಾಧಾಕೃಷ್ಣ ಮಣಿಬೆಟ್ಟು, ಲಯನ್ಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷರಾದ ಲಯನ್ ಬಿ. ಶಿವಾನಂದ ಬಾಳಿಗಾ, ಜಿಲ್ಲಾ ಕ್ಯಾಬಿನೇಟ್ ಕಾರ್ಯದಶರ್ಿ ಲಯನ್ ವಾಣಿ ಆಳ್ವ, ವಲಯಾಧ್ಯಕ್ಷರುಗಳಾದ ಲಯನ್ ಮೊಹಮ್ಮದ್ ಇಕ್ಬಾಲ್, ಲಯನ್ ಮಾಧವ ಗೌಡ ಜಾಕೆ, ಸಂಘಟಕ ಲಯನ್ ಎನ್. ಸತೀಶ್ ಕುಡ್ವ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಬಂಟ್ವಾಳದ ನಿಯೋಜಿತ ಅಧ್ಯಕ್ಷ ಲಯನ್ ಜಯಂತ್ ಶೆಟ್ಟಿ ಧನ್ಯವಾದ ನೀಡಿದರು. ಸಂಘಟಕರಾದ ಲಯನ್ ವಸಂತ ಕುಮಾರ್ ಶೆಟ್ಟಿ ನಿರೂಪಿಸಿದರು.
