ಬಂಟ್ವಾಳ : ಬೆಂಗಳೂರಿನ ವಕೀಲರ ಮೇಲೆ ನಡೆದ ಹಲ್ಲೆಗೆ ಸಂಬಂದಿಸಿ ಸಿಬಿಐ ತನಿಖೆಯನ್ನು ನಡೆಸುತ್ತಿದ್ದು ಪೋಲೀಸರು ವಕೀಲರ ಮೇಲೆ ನಡೆಸಿದ ಕೃತ್ಯವನ್ನು ತನಿಖೆಗೆ ಒಳಪಡಿಸಲು ತಿರಸ್ಕರಿಸಿದ ಸರಕಾರದ ತೀರ್ಮಾನವನ್ನು ಖಂಡಿಸಿ ಹಾಗೂ ಕರ್ನಾಟಕ ರಾಜ್ಯದ ವಕೀಲರ ಕಲ್ಯಾಣದ ನಿಧಿಯಿಂದ ನೀಡಲಾಗುತ್ತಿರುವ ವಕೀಲರ ಕಲ್ಯಾಣ ನಿಧಿ ಮೊತ್ತವನ್ನು ಗರಿಷ್ಠ 8ಲಕ್ಷಕ್ಕೆ ಏರಿಸಬೇಕೆಂದು ಮತ್ತು ವೃತ್ತಿ ನಿರತ ವಕೀಲರ ಮತ್ತು ಅವರ ಕುಟುಂಬ ವರ್ಗದವರಿಗೆ ಆರೋಗ್ಯ ವಿಮಾಯೋಜನೆಯನ್ನು ಸರಕಾರ ಜಾರಿಗೊಳಿಸಬೇಕೆಂದು ಸರಕಾರವನ್ನು ಒತ್ತಾಯಿಸಿ, ಬಂಟ್ವಾಳ ವಕೀಲರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು .
KAR_5681

KAR_5675

ಈ ಮೂರು ಬೇಡಿಕೆಗಳನ್ನು ಈಡೇರಿಸಲು ಮಾನ್ಯ ತಹಶೀಲ್ದಾರರ ಮುಖಾಂತರ ಮನವಿಯನ್ನು ಸಲ್ಲಿಸಲಾಯಿತು . ಈ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ತೀವ್ರವಾದ ಹೋರಾಟವನ್ನು ನಡೆಸಲಾಗುವುದು ಎಂದು ವಕೀಲರ ಸಂಘದ ಅಧ್ಯಕ್ಷ ಎಂ.ಚಂದ್ರಶೇಖರ ಪೂಜಾರಿ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು .
ನ್ಯಾಯವಾದಿಗಳಾದ ಪುಂಚಮೆ ಚಂದ್ರಶೇಖರ ರಾವ್, ರಿಚಾರ್ಡ್ ಡಿ ಕೋಸ್ತ , ರಮಾನಾಥ ಕಾರಂದೂರು , ಗಣೇಶಾನಂದ ಸೋಮಯಾಜಿ , ಎ.ಕೆ.ರಾವ್ , ರಮೇಶ್ ಉಪಾದ್ಯಾಯ, ಶ್ರೀ ಕೃಷ್ಣ , ಮೋಹನ್ ಪ್ರಭು , ಗಣೇಶ್ ಪೈ , ಯಶವಂತ ವಿಟ್ಲ , ಸತೀಶ್ ಬಿ. , ರಾಜೇಶ್ ಬೊಳ್ಳುಕಲ್ಲು , ರಾಜಾರಾಮ ನಾಯಕ್ , ಅಬ್ದುಲ್ ಸಲೀಂ , ಮಲಿಕ್ ಅನ್ಸಾರ್, ಸಂದೇಶ್ , ರತನ್ , ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು .

By suddi9

Leave a Reply

Your email address will not be published. Required fields are marked *