ಬಂಟ್ವಾಳ : ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆ ವಂಶಿ ಕಾಂಪ್ಲೆಕ್ಸ್‍ನಲ್ಲಿ ಜೂ. 21ರಂದು ಬಂಟ್ವಾಳ ವರ್ತಕರ ವಿವಿಧ್ದೋದ್ದೇಶ ಸಹಕಾರಿ ಸಂಘದ 5ನೇ ಶಾಖೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಟೇಪ್ ಕತ್ತರಿಸಿ ಉದ್ಘಾಟಿಸಿ, ಕಂಪ್ಯೂಟರ್ ಯಂತ್ರವನ್ನು ಚಾಲನೆಗೊಳಿಸಿ ಶುಭ ಹಾರೈಸಿದರು.
ಬಂಟ್ವಾಳ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ ಭದ್ರತಾ ಕೋಶದಲ್ಲಿ ಹಣವನ್ನು ತುಂಬಿಸುವ ಮೂಲಕ ಭದ್ರತಾ ಕೊಠಡಿ ಉದ್ಘಾಟಿಸಿದರು.
ಸಂಸದ ನಳಿನ್ ಕುಮಾರ್ ಕಟೀಲು ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
2106bteph7
ಸಹಕಾರಿ ಸಂಸ್ಥೆಗಳು ಜನರ ಅಪೇಕ್ಷೆಯಂತೆ ಕೆಲಸ ಮಾಡುತ್ತವೆ. ಒಬ್ಬ ಠೇವಣಿದಾರನಷ್ಟೆ ಪ್ರಾಮುಖ್ಯತೆ ಸಾಲಗಾರನಿಗೂ ಇದೆ. ಸಾಲಗಾರ ಮತ್ತು ಠೇವಣಿದಾರ ವ್ಯಕ್ತಿಯೊಬ್ಬನ ದೇಹದಲ್ಲಿ ಇರುವಂತಹ ಕಣ್ಣುಗಳಷ್ಟೆ ಮುಖ್ಯವಾಗುತ್ತದೆ. ಇಂದು ಗ್ರಾಮಾಂತರ ಮಟ್ಟದಲ್ಲಿ ಉತ್ತಮ ಸೇವೆಯನ್ನು ನಗರ ಪ್ರದೇಶದ ಆರ್ಥಿಕ ಸಂಸ್ಥೆಗಳಷ್ಟೆ ಸಮರ್ಥವಾಗಿ ಸಹಕಾರಿ ಸಂಸ್ಥೆ ನೀಡುತ್ತಿದೆ ಎಂದರು.
ಸಹಕಾರಿ ಸಂಸ್ಥೆಗಳು ಬೆಳೆಯಬೇಕು. ಸೇವೆಯಲ್ಲಿ ಅವುಗಳ ಪಾತ್ರ ಮಹತ್ವದ್ದಾಗಿದೆ. ಸಾಮಾಜಿಕವಾಗಿಯೂ ಮಹತ್ವದ ಕೆಲಸಗಳು ಸಹಕಾರಿ ಬೆಳವಣಿಗೆಯಿಂದ ಆಗಿದೆ ಎಂದು ಅಭಿಪ್ರಾಯಪಟ್ಟರು.
ಭೂ ಅಭಿವೃದ್ದಿ ಬ್ಯಾಂಕ್ ಬಂಟ್ವಾಳದ ಅಧ್ಯಕ್ಷ ಸುದರ್ಶನ್ ಜೈನ್ ಪ್ರಥಮ ಠೇವಣಿ ಪತ್ರ ಬಿಡುಗಡೆ ಮಾಡಿ ಮಾತನಾಡುತ್ತಾ ತಾಲೂಕು ಕೇಂದ್ರ ಬಿ.ಸಿ.ರೋಡಿನಲ್ಲಿ ಸುಮಾರು ಐವತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಸಮಾಜ, ಸಂಸ್ಥೆಗಳ ಸಹಕಾರಿ ಸಂಘಗಳು ಉತ್ತಮ ವ್ಯವಹಾರ ನಡೆಸುತ್ತಿವೆ.
ಸಹಕಾರಿ ಸಂಸ್ಥೆಗಳ ಬೆಳವಣಿಗೆಯಲ್ಲಿ ಸ್ಥಳೀಯ ವಿಚಾರಗಳು ಪ್ರಾಮುಖ್ಯತೆ ಪಡೆಯುತ್ತದೆ. ಬೆಳಿಗ್ಗೆ ಸಾಲಕ್ಕೆ ಅರ್ಜಿ ಸಲ್ಲಿಸಿದವರಿಗೆ ಸಂಜೆ ಸಾಲ ನೀಡುವ ವ್ಯವಸ್ಥೆ ಸಹಕಾರಿ ಸಂಸ್ಥೆಗಳಿಂದ ಮಾತ್ರ ಸಾಧ್ಯ. ಒಬ್ಬ ವ್ಯಕ್ತಿಯನ್ನು ನೋಡಿಕೊಂಡು ಸಾಲ ನೀಡುವುದು ಸಹಕಾರಿ ಕ್ಷೇತ್ರದಿಂದ ಆಗುವುದು ಎಂದು ವಿವರಿಸಿದರು.
ಬಂಟ್ವಾಳ ವ್ಯ. ಸೇ. ಸ. ಬ್ಯಾಂಕ್ ನಿ. ಇದರ ಅಧ್ಯಕ್ಷ ಜಿ. ಆನಂದ ನಿತ್ಯನಿ„ ಯಂತ್ರವನ್ನು ಪಿಗ್ಮಿ ಸಂಗ್ರಹಾರರೊಬ್ಬರಿಗೆ ನೀಡುವ ಮೂಲಕ ಚಾಲನೆ ನೀಡಿದರು.
ವೇದಿಕೆಯಿಂದ ಮಾವಿನಕಟ್ಟೆ ಶ್ರೀಕ್ಷೇತ್ರ ಬಾಚಕೆರೆಯ ಧರ್ಮದರ್ಶಿ ದೇಜಪ್ಪ, ಅಲ್ಲಿಪಾದೆ ಚರ್ಚ್ ಧರ್ಮಗುರು ವಂ| ರೆ|ಫಾ|ಗ್ರೇಗರಿ ಪಿರೇರಾ, ಜಿ.ಪಂ. ಸದಸ್ಯೆ ಗಿರಿಜಾ ಅಲ್ಲಿಪಾದೆ, ತಾ.ಪಂ. ಸದಸ್ಯ ಸಂಪತ್ ಕುಮಾರ್ ಶೆಟ್ಟಿ ಮುಂಡ್ರೇಲ್‍ಗುತ್ತು, ಯಕ್ಷಗಾನ ಕಲಾವಿದ ಅಶೋಕ ಶೆಟ್ಟಿ ಸರಪಾಡಿ, ಕಟ್ಟಡ ಮಾಲಕ ಕೆ. ರಾಧಾಕೃಷ್ಣ ರೈ ಕೊಟ್ಟುಂಜ ಸಭೆ ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಮಣಿನಾಲ್ಕೂರು ಸೇವಾ ಸಹಕಾರಿ ಬ್ಯಾಂಕ್ ಸರಪಾಡಿ ಅಧ್ಯಕ್ಷ ಯನ್. ಸುಬ್ಬಣ್ಣ ಶೆಟ್ಟಿ, ತಾ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ನಾರಾಯಣ ಶಾಂತಿ ಪಟ್ಲಕೆರೆ, ಸಂಘದ ಉಪಾಧ್ಯಕ್ಷ ಮಂಜುನಾಥ ರೈ ಅಗರಿ, ನಿರ್ದೇಶಕರಾದ ಬಿ. ಧರ್ಮೇಂದ್ರ, ಜೆ. ಗಜೇಂದ್ರ ಪ್ರಭು, ರಾಜೇಶ್ ಬಿ., ಬಿ.ಸುರೇಶ್ ಕುಮಾರ್, ಸ್ವಪ್ನಾರಾಜ್, ಅನಿತಾರವೀಂದ್ರ, ವಿಜಯ ಕುಮಾರಿ ಇಂದ್ರ, ಗ್ರಾ.ಪಂ. ಸದಸ್ಯೆ ಗೀತಾ, ಗಣ್ಯರಾದ ರತ್ನಾಕರ ಕೊಂಡೆ, ನಾರಾಯಣ ಪೂಜಾರಿ ಬೊಲ್ಲುಕಲ್ಲು, ಆದಂ ಕುಂಞ, ಆದಿರಾಜ ಜೈನ್, ವಿಶ್ವನಾಥ ನಾಯ್ಕ, ಶಿವಪ್ಪ ಪೂಜಾರಿ, ಗೋಪಾಲ ಶೆಟ್ಟಿ, ನಾರಾಯಣ ರೈ, ಸುಧಾಕರ ಶೆಟ್ಟಿ, ಪೂವಪ್ಪ ಪೂಜಾರಿ, ರಾಮ್‍ದಾಸ್ ಬಂಟ್ವಾಳ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಸಂಸ್ಥೆಯ ಸಂಸ್ಥಾಪಕರಿಗೆ ನಡೆದ ಗೌರವಾರ್ಪಣೆಯಲ್ಲಿ ದಿ| ಸದಾಶಿವ ಭಂಡಾರಿ ಅವರ ಪತ್ನಿ ಲೀಲಾವತಿ ಎಸ್. ಭಂಡಾರಿ, ದಿ| ಸಂಜೀವ ಭಂಡಾರಿ ಅವರ ಪರವಾಗಿ ಪುಷ್ಪಾ ಎಸ್.ಭಂಡಾರಿ, ಸ್ಥಾಪಕ ಕಾರ್ಯದರ್ಶಿ ದಿ| ಲತನ್ ಕುಮಾರ್ ಪರವಾಗಿ ಪತ್ನಿ ಶರ್ಮಿಳಾ ಎಲ್. ಕುಮಾರ್ ಪುರಸ್ಕಾರ ಸ್ವೀಕರಿಸಿದರು.
ಮನ್ಮಥ ರಾಜ್ ಜೈನ್, ವೆಂಕಪ್ಪ ಪೂಜಾರಿ ಮತ್ತಿತರ ಪ್ರವರ್ತಕರು ಗೌರವ ಸ್ವೀಕಾರ ಮಾಡಿದರು.
ಸಂಘದ ಅಧ್ಯಕ್ಷ ಎಂ. ಸುಭಾಶ್ಚಂದ್ರ ಜೈನ್ ಪ್ರಸ್ತಾವನೆ ನೀಡಿ, ಮುಂದಿನ ವರ್ಷಗಳಲ್ಲಿ ಒಟ್ಟು ಹತ್ತು ಶಾಖೆಗಳನ್ನು ತೆರೆಯುವುದು. ಗ್ರಾಮಾಂತರ ಪ್ರದೇಶಕ್ಕೆ ವಿಸ್ತರಿಸಿಕೊಳ್ಳುವ ಯೋಜನೆ ಹೊಂದಿರುವುದಾಗಿ ನುಡಿದರು.
ನಿರ್ದೇಶಕ ದಿವಾಕರ್ ದಾಸ್ ಸ್ವಾಗತಿಸಿದರು. ನಿರ್ದೇಶಕ ಮಚ್ಚೆಂದ್ರ ಸಾಲ್ಯಾನ್ ವಂದಿಸಿದರು. ಎಚ್ಕೆ ನಯನಾಡು ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *