ಬಂಟ್ವಾಳ : ಯೋಗ ಸಾಧನೆಯನ್ನು ಒಪೆÇ್ಪತ್ತು ಮಾಡುವವ ಯೋಗಿ, ಎರಡು ಹೊತ್ತು ಮಾಡುವವ ನಿರೋಗಿ, ಮೂರು ಹೊತ್ತು ಮಾಡುವವ ರಾಜಯೋಗಿ ಎಂದು ಪತ್ರಕರ್ತ ರಾಜಾ ಬಂಟ್ವಾಳ ವಿಶ್ಲೇಷಿಸಿದರು.
ಅವರು ಜೂ. 21 ಯೋಗ ದಿನಾಚರಣೆ ಅಂಗವಾಗಿ ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಬಂಟ್ವಾಳ ಹಾಗೂ ಯೋಗ ಸಂಜೀವಿನಿ ಕಲ್ಲಡ್ಕ ಆಶ್ರಯದಲ್ಲಿ ಯೋಗ ಇದು ಸುಯೋಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒಪೆÇ್ಪತ್ತು ಉಣ್ಣುವವ ಯೋಗಿ, ಎರಡು ಹೊತ್ತು ಉಣ್ಣುವವ ನಿರೋಗಿ, ಮೂರು ಹೊತ್ತು ಉಣ್ಣುವವನನ್ನು ಚಟ್ಟದಲ್ಲಿ ಹೊತ್ತು ಕೊಂಡು ಹೋಗಿ ಎಂಬ ಕನ್ನಡದ ನಾಣ್ಣುಡಿಯನ್ನು ಉಚ್ಚರಿಸಿ ಯೋಗಿ ಎಂದರೆ ಸಾಧಕ ಎಂದರು.
ಯೋಗ ಸಾಧನೆಯಿಂದ ಲೌಕಿಕ ಮಾತ್ರವಲ್ಲದೆ ಅಲೌಕಿಕ ಸಿದ್ದಿಗಳು ದೊರೆಯುವುದು. ಅನುಭವದಿಂದ, ಗುರಿಮುಟ್ಟುವ ತನಕ ಮುಂದುವರಿದರೆ ಯೋಗದ ಪ್ರಯೋಜನ ಏನೆಂದು ತಿಳಿಯುವುದು.
ದೇಹಕ್ಕೆ ರೋಗ ತಡೆಯುವ ಶಕ್ತಿ ಬರುವುದು. ಕುಂಡಲಿನೀ ಶಕ್ತಿ ಉದ್ದೀಪಿಸುವುದು ಎಂದು ವಿವರಿಸಿದರು.
ಯೋಗ ಸಂಜೀವಿನಿ ಗುರು ಸಂಜಯ್ ಸಿ.ವಿ. ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ ಆರೋಗ್ಯಪೂರಿತ ಜೀವನಕ್ಕೆ ಯೋಗದ ಉಪಯೋಗ ಮತ್ತು ಮಹತ್ವವನ್ನು ತಿಳಿಸಿ ಶಿಬಿರವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷ ಲ| ಬಿ. ಶಿವಾನಂದ ಬಾಳಿಗಾ ವಹಿಸಿದ್ದರು. ಯೋಗ ಕಾರ್ಯಕ್ರಮದಲ್ಲಿ ಸ್ಥಾಪಕಾಧ್ಯಕ್ಷರಾದ ಡಾ| ಬಿ. ವಸಂತ ಬಾಳಿಗಾ, ಡಾ| ಶ್ಯಾಮ್ ಭಟ್, ನಿಯೋಜಿತ ಪ್ರಾಂತೀಯ ಅಧ್ಯಕ್ಷ ಲ| ದಾಮೋದರ ಬಿ.ಎಂ., ಲಯನೆಸ್ ಕ್ಲಬ್ ಅಧ್ಯಕ್ಷೆ ಶೋಭಾ ಎಂ. ಮಾರ್ಲ, ನಿಯೋಜಿತ ಅಧ್ಯಕ್ಷ ಲ| ಜಯಂತ್ ಶೆಟ್ಟಿ ಹಾಗೂ ಲಯನ್ಸ್, ಲಯನೆಸ್ ಕ್ಲಬ್ ಪದಾ„ಕಾರಿಗಳು ಉಪಸ್ಥಿತರಿದ್ದರು. ಜಗದೀಶ ಯಡಪಡಿತ್ತಾಯ ನಿರೂಪಿಸಿದರು.