ಬಂಟ್ವಾಳ: ಹೊಂಡಗುಂಡಿಗಳಿಂದಲೇ ತುಂಬಿ, ವಾಹನ ಸಂಚಾರಕ್ಕೆ ಅಯೋಗ್ಯವಾಗಿದ್ದ ಬಿ.ಸಿ.ರೋಡಿನ ಸರ್ವೇಸ್ ರಸ್ತೆಗೆ ಕೊನೆಗೂ ಡಾಮಾರು ಭಾಗ್ಯ ಒದಗಿ ಬಂದಿದೆ. ಸಾರ್ವಜನಿಕರ ಪ್ರತಿಭಟನೆ ಹಾಗೂ ಮಾಧ್ಯಮಗಳ ವರದಿಯಿಂದ ಎಚ್ಚೆತ್ತುಕೊಂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೆಲ ದಿನಗಳ ಹಿಂದೆಯಷ್ಟೇ ಹೊಂಡಮಯ ರಸ್ತೆಗೆ ಜಲ್ಲಿ ಸಹಿತ ಕಾಂಕ್ರೀಟ್ ಮಿಶ್ರಣ ಹಾಕಿ ವಾಹನ ಸಂಚಾರಕ್ಕೆ ತಕ್ಕಮಟ್ಟಿನ ವ್ಯವಸ್ಥೆ ಕಲ್ಪಿಸಿತ್ತು. ಆದರೆ ಶುಕ್ರವಾರ ಮಳೆ ಕಡಿಮೆ ಇದ್ದ ಕಾರಣ ಸರ್ವೆಸ್ ರಸ್ತೆ ಮರು ಡಾಮಾರೀಕರಣ ನಡೆಸಲು ನಿರ್ಧರಿಸಿದ್ದ ಪ್ರಾಧಿಕಾರ ಒಂದೇ ದಿನದಲ್ಲಿ ಕೆಲಸ ಮಾಡಿ ಮುಗಿಸಿದೆ. ಇದರಿಂದಾಗಿ ಸರ್ವೆಸ್ ರಸ್ತೆಯಲ್ಲಿ ವಾಹನ ಸಂಚಾರ ಸುಗಮವಾಗಿದೆ.

DSC_7732

DSC_7733
ಪ್ರತಿಭಟನೆಯ ಬಿಸಿ:
ಸರ್ವೆಸ್ ರಸ್ತೆಯಲ್ಲಿ ಉಂಟಾಗಿರುವ ಹೊಂಡಗಳಿಂದ ವಾಹನ ಸಂಚಾರಕ್ಕೆ ತೊಂದರೆಯಾಗುವ ಬಗ್ಗೆ ಮಳೆಗಾಲ ಆರಂಭವಾಗುವ ಮೊದಲೇ ಮಾಧ್ಯಮಗಳು ವರದಿ ಪ್ರಕಟಿಸಿ ಸಂಭಂದಪಟ್ಟ ಇಲಾಖೆಯ ಗಮನ ಸೆಳೆಯುವ ಪ್ರಯತ್ನ ನಡೆಸಿತ್ತು. ಆ ಬಳಿಕ ರಸ್ತೆ ತೀರಾ ಹದಗೆಟ್ಟು ವಾಹನ ಸಂಚಾರವೇ ಅಸಾಧ್ಯ ಎನ್ನುವ ಹಂತಕ್ಕೆ ತಲುಪಿದಾಗ ತಾಲೂಕಿನ ಸಾಮಾಜಿಕ ನ್ಯಾಯಪರ ಹೋರಾಟ ಸಮಿತಿ ವಿವಿಧ ಸಮಾನ ಮನಸ್ಕ ಸಂಘಟನೆಗಳ ಜೊತೆಗೂಡಿ ಪ್ರತಿಭಟನೆ ನಡೆಸಿ ರಸ್ತೆ ದುರಸ್ತಿಗೆ ಎರಡು ದಿನಗಳ ಗಡುವು ನೀಡಿತ್ತು. ಆದರೆ ಇಲಾಖೆಯಿಂದ ಯಾವುದೇ ಸ್ಪಂದನೆ ದೊರೆಯದೇ ಇದ್ದಾಗ ಕಳೆದ ಮಂಗಳವಾರ ಮತ್ತೆ ಪ್ರತಿಭಟನೆ ನಡೆಸಿ ತುರ್ತು  ದುರಸ್ತಿ ಕೈಗೊಳ್ಳವಂತೆ ಹೋರಾಟ ಸಮಿತಿ ಆಗ್ರಹಿಸಿತ್ತು.

ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ್ದ ಮಂಗಳೂರು ಸಹಾಯಕ ಕಮೀಷನರ್ ಡಾ. ಅಶೋಕ್ ಸದ್ಯಕ್ಕೆ ರಸ್ತೆಯ ಹೊಂಡ ಮುಚ್ಚುವ ಕೆಲಸವನ್ನು ಗುತ್ತಿಗೆದಾರರು ಮಾಡುತ್ತಾರೆ. ಮಳೆ ಮುಗಿದ ತಕ್ಷಣವೇ ಮರು ಡಾಮಾರೀಕರಣ ಹಾಗೂ ರಸ್ತೆ ಅಗಲೀಕರಣ ಕಾಮಗಾರಿ ನಡೆಸುತ್ತಾರೆ ಎನ್ನುವ ಭರವಸೆಯನ್ನು ಪ್ರತಿಭಟನಕಾರರಿಗೆ ನೀಡಿದ್ದರು. ಹೊಂಡ ಮುಚ್ಚುವ ಕೆಲಸವಾದರೂ ನಡೆಯುತ್ತದೆಯಲ್ಲಾ ಎಂದು ಪ್ರತಿಭಟನೆಯನ್ನು ವಾಪಸ್ಸು ಪಡೆಯಲಾಗಿತ್ತು.

ಆದರೆ ಇದೀಗ ತಕ್ಷಣ ಸ್ಪಂದನೆ ನೀಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಳೆ ಬಿಡುವು ಪಡೆದಿರುವ ಅವಕಾಶವನ್ನು ಸುದಪಯೋಗ ಪಡಿಸಿಕೊಂಡು ಡಾಮಾರೀಕರಣ ನಡೆಸಿ ಇಷ್ಟು ಸಮಯಗಳ ಕಾಲ ಪ್ರಯಾಣಿಕರು ಹಾಗೂ ವಾಹನ ಚಾಲಕರು ಸರ್ವೆಸ್ ರಸ್ತೆಯಲ್ಲಿ ಅನುಭವಿಸುತ್ತಿದ್ದ ತೊಂದರೆಯಿಂದ ಪಾರು ಮಾಡಿದೆ.

 

By suddi9

Leave a Reply

Your email address will not be published. Required fields are marked *