ಸುದ್ದಿ9 ಪೊಳಲಿ: ಕರಿಯಂಗಳ ಗ್ರಾಮದ ಪೊಳಲಿ ದೇವಸ್ಥಾನಕ್ಕೆ ಹೋಗುವ ಮುಖ್ಯರಸ್ತೆಯ ಗ್ರಾಮ ಪಂಚಾಯತಿಗೆ ಸಮೀಪದಲ್ಲೆ  ಬಸ್ಸು ನಿಲ್ಧಾಣವನ್ನು ನಿರ್ಮಿಸಿ ಅದರ  ಉದ್ಘಾಟನೆಯು ಜೂ .5ರಂದು ಭಾನುವಾರ ನಡೆಯಿತು.  ಇದರ ಉದ್ಘಾಟನೆಯನ್ನು ಕರಿಯಂಗಳ ಗ್ರಾಮ ಪಂಚಾಯತ್ ಆದ್ಯಕ್ಷೆ ಚಂದ್ರಾವತಿ ಹಾಗೂ ಉಪಾಧ್ಯಕ್ಷ ಪುಂಚಮೆ ಚಂದ್ರಶೇಖರ ರಾವ್ ನೆರವೇರಿಸಿ ಶುಭ ಹಾರೈಸಿದರು.

ಮಂಗಳೂರಿನ ಪದ್ಮನಾಭ ಅಡ್ವ್ಯಸರ್ ರವರು ಇಲ್ಲಿಗೆ ಬರುವಂತಹ ಜನರಿಗೆ  ಅನುಕೂಲವಾಗಲು  ಸುಸಜ್ಜತವಾದ ಬಸ್ಸು ನಿಲ್ದಾಣವನ್ನು ನಿರ್ಮಿಸಿ ಕರಿಯಂಗಳ ಗ್ರಾಮ ಪಂಚಾಯತಿಗೆ ಹಸ್ತಾಂತರಿಸಿದ್ದಾರೆ.

 

IMG_5898

IMG_5905

5vp  bas u

2 bas

5 vp bas tangudana udgatane

 

IMG_5895

ಸರಕಾರದ ಸವಲತ್ತನ್ನು ಕಾಯದೇ ಆಯಾಯ ಊರಿನ ಸಂಘ ಸಂಸ್ಥೆಗಳು ಮುಂದೆ ಬಂದು ಇಂತಹ ಒಳ್ಳೆಯ ಕೆಲಸಗಳಲ್ಲಿ ಗ್ರಾಮ ಪಂಚಾಯತಿನೊಂದಿಗೆ ಕೈ ಜೋಡಿಸಿ ಗ್ರಾಮದ ಅಭಿವ್ರದ್ಧಿಯಲ್ಲಿ ಸಹಕರಿಸಲು ಮುಂದೆ ಬರಬೇಕು ಎಂದು ಪೊಳಲಿ ವೆಂಕಟೇಶ್ ನಾವಡ ಹೇಳಿ ಶುಭ ಹಾರೈಸಿದರು . ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಲೋಕೇಶ್ ಭರಣಿ ಕಿಶೋರ್ ಮತ್ತು ಯಶವಂತ ಪೊಳಲಿ, ಯಶೋಧರ ಕಾಂಟ್ರಕ್ಟರ್, ಕಮಾಲಾಕ್ಷ , ಸುನೀತ, ವಾಮನ, ಸುನೀಲ್., ಶಂಕರ, ಧಾಮೋದರ, ಸಂದೀಪ್, ರೋಷನ್ ಪಲ್ಲಿಪಾಡಿ,  ವಿಜಯ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *