ಕೈಕಂಬ: ರಾಜ್ಯ ಸಭಾ ಸದಸ್ಯ ಹಾಗೂ ಮಾಜಿ ಕೇಂದ್ರ ಸಚಿವರಾದ ಆಸ್ಕರ್ ಫೆರ್ನಾಂಡೀಸ್ ಅವರು ಇತ್ತೀಚೆಗೆ ಬಡಗ ಎಡಪದವು ಬಳಿಯಿರುವ ಲಾತ್ರೊಟ್ಟು ಎಂಬ್ಬಲಿನ `ಶಾಸ್ತಾವು ಮಾದರಿ ಗ್ರಾಮ ಅಭಿವೃದ್ಧಿ ಯೋಜನಾ’ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.
ಈ ಯೋಜನೆಯನ್ನು ಎಡಪದವು ಭೂತನಾಥೇಶವರ ದೇವಸ್ಥಾನದ ಆಡಳಿತ ಮೊಕ್ತೇಸರ ವೈದ್ಯನಾಥ ವಿಠಲ ಶೆಟ್ಟಿ ರೂಪಿಸಿದ್ದಾರೆ. ಬಡಗ ಎಡಪದವು ಹಳ್ಳಿಯನ್ನು ಮಾದರಿ ಗ್ರಾಮವನ್ನಾಗಿ ಮಾಡುವ ಸಲುವಾಗಿ ಇಲ್ಲಿಗೆ ಅತ್ಯಾಧುನಿಕ ಸೌಕರ್ಯ ನೀಡಿ ಪರಿವರ್ತಿಸು ಸುವುದು ವಿಠಲ ಅವರ ಗುರಿಯಾಗಿದೆ. ಉತ್ತಮ ದರ್ಜೆಯ ಶಿಕ್ಷಣ, ನಾಗರಿಕ ಮೂಲ ಸೌಕರ್ಯ, ವಸತಿ, ಆರೋಗ್ಯ, ಮಾಹಿತಿ ತಂತ್ರಜ್ಞಾನ ಬೆಳೆಸುವುದು ಇದರಲ್ಲಿ ಸೇರಿದೆ.
ಈ ವೇಳೆ ಆಸ್ಕರ್ ಫೆರ್ನಾಂಡಿಸ್ ಮಾತನಾಡಿ, ವಿಜಯನಾಥ್ ಅವರ ಮಾದರಿ ಗ್ರಾಮ ಪರಿಕಲ್ಪನೆ ಉದಾತ್ತ ಚಿಂತನೆಯನ್ನೊಳಗೊಂಡಿದೆ. ವಿಠಲ ಅವರು ಗ್ರಾಮೀಣ ಜನರು ಉತ್ತಮ ಗಣಮಟ್ಟದ ಜೀವನ ನಡೆಸಬೇಕೆನ್ನುವ ಸಾಮಾಜಿಕ ಕಳಕಳಿ ಹೊಂದಿರುವುದು ಹಳ್ಳಿಗರ ಸುಭಾಗ್ಯವಾಗಿದೆ. ಇಂಥಾ ಯೋಜನೆಗೆ ರಾಜ್ಯದಿಂದ ಹಾಗೂ ಕೇಂದ್ರದಿಂದ ಹಣಕಾಸಿನ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಮೊದಲು ಭೂತನಾಥನಿಗೆ ಪ್ರಾರ್ಥನೆ ಸಲ್ಲಿಸಿದ ಆಸ್ಕರ್ ಬಳಿಕ ಮಕ್ಕಳೊಂದಿಗೆ ಮುಕ್ತವಾಗಿ ಬೆರೆತಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಬ್ದುಲ್ ಅಜೀಜ್ ಗಫೂರ್, ಮಾಝಿ ತಾ.ಪಂ ಸದಸ್ಯ ನೊಬೆರ್ಟ್ ಮಥಾಯಿಸ್, ಶಾಸಕ ಮೊಯ್ದೀನ್ ಬಾವಾ, ಪ್ರಮುಖ್ ರೈ, ಪ್ರವೀಣ್ ಸರಂಗನ್, ಅರ್ಜುನ್ ರೈ ಮುಂತಾದವರು ಉಪಸ್ತಿತರಿದ್ದರು.






