ಕೈಕಂಬ: ಗುರುಪುರ ಸಮೀಪದ ಮೂಳೂರಿನಲ್ಲಿರುವ ಬಾಲಸಂರಕ್ಷಣಾ ಕೇಂದ್ರದಿಂದ ಬಾಲಕನೋರ್ವ ನಾಪತ್ತೆಯಾದ ಘಟನೆ ಜುಲೈ 5ರಂದು ನಡೆದಿದೆ. ನಾಪತ್ತೆಯಾದ ಬಾಲಕನನ್ನು ರಾಜೇಶ(14) ಎಂದು ಗುರುತಿಸಲಾಗಿದ್ದು, . ಈತ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ ಬೆಳಿಗ್ಗೆ ತಪ್ಪಿಸಿಕೊಂಡು ಹೋಗಿದ್ದಾಗಿ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಬಾರಿಯೂ ಇಲ್ಲಿನ ಬಾಲಕನೋರ್ವ ನಾಪತ್ತೆಯಾಗಿ ಸುದ್ದಿ ಮಾಡಿದ್ದ.