ಬಜ್ಪೆ: ಪ್ರಯಾಣಿಕರೋರ್ವರು ಬಸ್‍ನಿಂದ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ಘಟನೆ ಜೂ.7ರ ಸಂಜೆ ಪೆರ್ಮುದೆ ಸಮೀಪದ ಉದಯಚಂದ್ರ ಬಸ್‍ಸ್ಟ್ಯಾಂಡ್ ಸಮೀಪ ನಡೆದಿದೆ. ಪೆರ್ಮುದೆ ನಿವಾಸಿ ಈಶ್ವರ ಶೆಟ್ಟಿಗಾರ್(65) ಗಾಯಗೊಂಡ ವ್ಯಕ್ತಿಯಾಯಾಗಿದ್ದಾರೆ

ಈಶ್ವರ ಅವರು ಮಂಗಳೂರಿನಿಂದ ಪೆರ್ಮುದೆಗೆ ನವದುರ್ಗ ಎಂಬ ಬಸ್‍ನಲ್ಲಿ ಬರುತ್ತಿದ್ದರು. ಬಸ್ ಪೆರ್ಮುದೆ ಸಮೀಪದ ಉದಯಚಂದ್ರ ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ಬಸ್ಸನ್ನು ನಿಲ್ಲಿಸಲು ಸೂಚನೆ ನೀಡಿದಾಗಲೂ ಬಸ್ ಚಾಲಕ ಬಸ್ಸನ್ನು ನಿರ್ಲಕ್ಷ್ಯದಿಂದ ಹಾಗೂ ಅತಿವೇಗದಿಂದ ಚಲಾಯಿಸಿದಾಗ ಪ್ರಯಾಣಿಕ ಎಸೆಯಲ್ಪಟ್ಟು ಗಂಭೀರ ಸ್ಥಿತಿಗೆ ತಲುಪಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *