ಕಟೀಲು : ಶತಮಾನೋತ್ಸವ ವರ್ಷಾಚರಣೆಯ ಸಂಭ್ರಮದಲ್ಲಿರುವ ಕಟೀಲು ದೇಗುಲದ ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಆಚರಣೆ ಕಾರ‍್ಯಾಲಯವನ್ನು ಕಟೀಲು ದೇಗುಲದ ಕಟ್ಟಡದಲ್ಲಿ ಜು.12 ರಂದು ಭಾನುವಾರ ಉದ್ಘಾಟಿಸಲಾಯಿತು.
katil shatamanostvava
ಮೊಕ್ತೇಸರ ವಾಸುದೇವ ಆಸ್ರಣ್ಣ, ಸಮಿತಿಯ ಅಧ್ಯಕ್ಷ ಅನಂತ ಆಸ್ರಣ್ಣ, ಕಾರ‍್ಯದರ್ಶಿ ಈಶ್ವರ ಕಟೀಲ್, ಅರ್ಚಕರಾದ ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಉಮೇಶ್ ರಾವ್ ಎಕ್ಕಾರು, ಮಾಲತಿ, ಗೋಪಾಲ್, ಶೇಖರ ಕೋಟ್ಯಾನ್, ದೇವೀಪ್ರಸಾದ ಶೆಟ್ಟಿ, ವೆಂಕಟರಮಣ ಹೆಗಡೆ, ರಾಜೇಂದ್ರ ಪ್ರಸಾದ ಎಕ್ಕಾರು, ವೈ. ರತ್ನಾಕರ ಶೆಟ್ಟಿ ಭುವನಾಭಿರಾಮ ಉಡುಪ, ತಿಮ್ಮಪ್ಪ ಕೋಟ್ಯಾನ್, ಲೋಕೇಶ ಶೆಟ್ಟಿ, ದೊಡ್ಡಯ್ಯ ಮೂಲ್ಯ, ನೀಲಯ್ಯ ಕೋಟ್ಯಾನ್, ಕೇಶವ್ ಮುಂತಾದವರಿದ್ದರು.
ಕಟೀಲಿಗೆ ಆಗಮಿಸುವ ವಿದ್ಯಾಭಿಮಾನಿಗಳು, ಹಳೆ ವಿದ್ಯಾರ್ಥಿಗಳಿಗೆ ಶಾಲೆಯ ಮಾಹಿತಿ, ಶತಮಾನೋತ್ಸವ ಕುರಿತು ವಿಚಾರಗಳು, ದೇಣಿಗೆ ಸಂಗ್ರಹ ಇತ್ಯಾದಿ ಉದ್ದೇಶಗಳಿಗಾಗಿ ಈ ಕಚೇರಿಯನ್ನು ತೆರೆಯಲಾಗಿದ್ದು, ೨೦೧೬ರ ಜನವರಿ ೧ರಿಂದ ೩ರವರೆಗೆ ಶತಮಾನೋತ್ಸವ ಆಚರಣೆ ಕಾರ‍್ಯಕ್ರಮಗಳು ನಡೆಯಲಿವೆ. ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ಎಲ್ಲ ವಿದ್ಯಾರ್ಥಿಗಳಿಗಾಗಿ ಅಕ್ಷರ ದಾಸೋಹ ಕೊಠಡಿ, ಒಳಾಂಗಣ ಕ್ರೀಡಾಂಗಣ, ಸಭಾಂಗಣವನ್ನು ನಿರ್ಮಿಸಲಾಗುವುದು ಎಂದು ಅನಂತ ಆಸ್ರಣ್ಣ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *