ಕಿನ್ನಿಗೋಳಿ:ಯಲ್ಲಾಪುರದಿಂದ ಕಾಸರಗೋಡಿಗೆ ಆಕ್ರಮವಾಗಿ ಜಾನವಾರು ಸಾಗಿಸುತ್ತಿದ್ದನ್ನು ಮುಲ್ಕಿ ಪೋಲಿಸರು ಇಂದು ಬೆಳಿಗ್ಗೆ ಪತ್ತೆ ಹಚ್ಚಿದ್ದಾರೆ, ಯಲ್ಲಾಪುರದಿಂದ ಲಾರಿಯೊಂದರಲ್ಲಿ ೧೩ ಎಮ್ಮೆ ಮತ್ತು ೧೧ ಕೋಣಗಳನ್ನು ತುಂಬಿಸಿಕೊಂಡು ಕಾಸರಗೋಡಿಗೆ ಸಾಗಿಸುತ್ತಿದ್ದು ರಾಷ್ಟೀಯ ಹೆದ್ದಾರಿ ೬೬ ರ ಮುಲ್ಕಿ ಬಪ್ಪನಾಡು ಚಕ್ ಪೋಸ್ಟ ಬಳಿ ಇಂದು ಬೆಳಿಗ್ಗೆ ಮುಲ್ಕಿ ಪೋಲಿಸರು ತಪಾಸಣೆ ನಡೆಸುತ್ತಿದ್ದ ಸಂದರ್ಭ ಈ ಅಕ್ರಮ ಬಯಲಾಗಿದೆ, ಘಟನೆಯಲ್ಲಿ ಸಮೀರ್ ಮತ್ತು ಮೋಯ್ದಿನ್ ಕುನ್ನಿ ಎಂಬಿಬ್ಬರನ್ನು ಬಂದಿಸಿದ್ದಾರೆ.
ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ಮುಲ್ಕಿ ವ್ರತ್ತ ನಿರೀಕ್ಷಕ ರಾಮಚಂದ್ರ ನಾಯಕ್, ಎ.ಎಸ್.ಐ ವಾಮನ್, ಧರ್ಮೇಂದ್ರ,ಸುಧೀರ್ ಪ್ರಕಾಶ್ ತಾರನಾಥ, ಮೋಹನ್ ಮತ್ತಿತರರು ಬಾಗಿಯಾಗಿದ್ದರು


