ಬಂಟ್ವಾಳ: ಮಕ್ಕಳಿಗೆ ವಿದ್ಯಾರ್ಥಿ ದೆಸೆಯಿಂದಲೇ ಶೈಕ್ಷಣಿಕ ಚಟುವಟಿಕೆ ಜೊತೆಗೆ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಶಾಲೆಯ ಮಂತ್ರಿಮಂಡಲ ಮೂಲಕ ದೊರೆಯುತ್ತದೆ ಎಂದು ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ನೈನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ನೂತನ ಮಂತ್ರಿಮಂಡಲ ಪ್ರಮಾಣವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇನಾಸ್ ರೋಡ್ರಿಗಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ವೇಳೆ ಮಂತ್ರಿ ಮಂಡಲ ನಾಮಫಲಕ ಅನಾವರಣ ಮತ್ತು ಗ್ರಂಥಾಲಯ ಗುರುತು ಚೀಟಿ ಬಿಡುಗಡೆಗೊಳಿಸಿದರು.
ಶಿಕ್ಷಕ ಪ್ರಕಾಶ ನಾಯ್ಕ್ ಚುನಾವಣೆ ಮತ್ತು ಮಂತ್ರಿಮಂಡಲ ಬಗ್ಗೆ ಮಾಹಿತಿ ನೀಡಿದರು. ಗ್ರಾ.ಪಂ.ಸದಸ್ಯೆ ಸರೋಜಿನಿ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಪೂವಪ್ಪ, ಹರೀಶ ಶೆಟ್ಟಿ ಮತ್ತಿತರರು ಇದ್ದರು.
ಮುಖ್ಯಶಿಕ್ಷಕ ಅಶೋಕ್ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದ ಬಳಿಕ ನೂತನ ಮಂತ್ರಿಮಂಡಲಕ್ಕೆ ‘ಪ್ರತಿಜ್ಞಾವಿಧಿ’ ಬೋಧಿಸಿದರು. ದೈಹಿಕ ಶಿಕ್ಷಕ ಎಂ.ವಾಸು ವಂದಿಸಿದರು. ಶಿಕ್ಷಕ ಹೇಮಣ್ಣ ಟಿ.ಎನ್. ಕಾರ್ಯಕ್ರಮ ನಿರೂಪಿಸಿದರು.