ಸುದ್ದಿ9ಬಂಟ್ವಾಳ: ಹಾಸನ ಜಿಲ್ಲೆಯ ಜವಾಬ್ದಾರಿಯ ಹೊರತಾಗಿಯೂ ಕೆಪಿಸಿಸಿ ಕಾರ್ಯದಶರ್ಿ ಅಶ್ವನಿ ಕುಮಾರ್ ರೈ ಅವರು ಸೋಮವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ದ.ಕ.ಜಿಲ್ಲಾ ಕಾಂಗ್ರೇಸ್ ಅಭ್ಯಥರ್ಿ ಜನಾರ್ಧನ ಪೂಜಾರಿ ಅವರ ಪರವಾಗಿ ಬಂಟ್ವಾಳ ಪರಿಸರದ ವಿವಿದೆಡೆ ರೋಡ್ ಷೋ ಮೂಲಕ ಮತಯಾಚನೆಗೈದು ವಿಶೇಷ ಗಮನ ಸೆಳೆದರು. ಆದರೂ ಅಶ್ವನಿ ಅವರ ನಾಲ್ಕನೇ ಬಾರಿಯ ಈ ರೋಡ್ ಷೋನಲ್ಲೂ ಸಚಿವ ರಮಾನಾಥ ರೈ ಅವರ ಗುಂಪಿನ ಯಾರೊಬ್ಬರೂ ಜತೆಗೂಡದಿರುವುದು ಕಾಂಗ್ರೇಸ್ ವಲಯದಲ್ಲೇ ಚಚರ್ೆಗೆ ಕಾರಣವಾಗಿದೆ.


ಅಶ್ವನಿಯವರು ಬಂಟ್ವಾಳ ನಗರ, ಬಡ್ಡಕಟ್ಟೆ ಹಾಗೂ ಪಲ್ಲಮಜಲು ಪರಿಸರದಲ್ಲಿ ಅಂಗಡಿ-ಮುಗ್ಗಟ್ಟುಗಳು ಹಾಗೂ ಕೆಲವು ಮನೆಗಳಿಗೆ ಬೇಟಿ ನೀಡಿ ಪೂಜಾರಿಯವರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ತುಂಬೆ ಪಂಚಾಯತು ಅಧ್ಯಕ್ಷ ಮಹಮ್ಮದ್ ವಳವೂರು, ಯುವ ಕಾಂಗ್ರೇಸ್ ಪ್ರಮುಖರಾದ ಅರುಣ್ ರೋಶನ್ ಡಿಸೋಜ, ಸ್ಟೀವನ್ ಡಿಸೋಜ, ಅಬ್ದುಲ್ ಕರಿಂ ಸಹಿತ ನೂರಾರು ಮಂದಿ ಯುವ ಕಾರ್ಯಕರ್ತರು ಅಶ್ವನಿ ಜತೆಗಿದ್ದರು.
ಕೆಪಿಸಿಸಿ ಕಾರ್ಯದಶರ್ಿ ನೆಲೆಯಲ್ಲಿ ಇವರಿಗೆ ಹಾಸನ ಜಿಲ್ಲೆಯ ಹೊಣೆಯನ್ನು ನೀಡಿಲಾಗಿದೆ. ಅಲ್ಲಿನ ಕಾಂಗ್ರೇಸ್ ಅಭ್ಯಥರ್ಿ ಎ.ಮಂಜು ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಈ ಮಧ್ಯ ತನ್ನ ಸ್ವಕ್ಷೇತ್ರವಾದ ಬಂಟ್ವಾಳದಲ್ಲೂ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ಧಾರೆ.
ಬಂಟ್ವಾಳ ಕಾಂಗ್ರೇಸ್ನಲ್ಲಿ ಈಗಾಗಲೇ ಎರಡು ಗುಂಪುಗಳಿದ್ದು ಈ ಬಗ್ಗೆ ಅರಿವಿರುವ ಜನಾರ್ದನ ಪೂಜಾರಿ ಅವರೇ ಇತ್ತೀಚೆಗೆ ಖುದ್ದು ಅಶ್ವನಿ ಅವರನ್ನು ಬೇಟಿಯಾಗಿ ತಮ್ಮ ಪರ ಪ್ರಚಾರ ಕೈಗೊಳ್ಳುವಂತೆ ಕೋರಿದ್ದಾರೆನ್ನಲಾಗಿದ್ದು ಈ ಹಿನ್ನೆಲೆಯಲ್ಲಿ ಅಶ್ವನಿ ಅವರು ಕಳೆದ ಕೆಲವು ದಿನಗಳಿಂದ ಬಂಟ್ವಾಳ ಪರಿಸರದಲ್ಲಿ ಅಪಾರ ಬೆಂಬಲಿಗರೊಂದಿಗೆ ಪ್ರಚಾರ ಕಾರ್ಯ ನಡೆಸುತ್ತಿದ್ದರೂ ಸಚಿವ ರೈ ಗುಂಪಿನ ಯಾರೂ ಕೂಡ ಇವರೊಂದಿಗೆ ಕಾಣಿಸಿಕೊಳ್ಳಲಿಲ್ಲ.
ಈ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅಶ್ವನಿ, ಪೂಜಾರಿ ಅವರ ಪಕ್ಷನಿಷ್ಠೆ, ನಿಷ್ಕಳಂಕ ವ್ಯಕ್ತಿತ್ವ, ಈ ಹಿಂದೆ ನಡೆಸಿದ ಅಭಿವೃದ್ಧಿ ಕಾರ್ಯಗಳು ಮತ್ತು ಕೇಂದ್ರ, ರಾಜ್ಯ ಸರಕಾರದ ಜನಪರ ಯೋಜನೆಗಳೇ ಕಾಂಗ್ರೇಸ್ ಗೆಲುವಿಗೆ ಪೂರಕವಾಗಲಿದೆ. ಪೂಜಾರಿಯವರ ಗೆಲುವು ನಿಶ್ಚಿತ ಎಂದು ಅವರು ಹೇಳಿದರು



