ಕೈಕಂಬ:  ಬಿಲ್ಲವ ಸಮಾಜ(ರಿ) ಗುರುನಗರ, ಗುರುಪುರ ಇದರ ವತಿಯಿಂದ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ  ವೇತನವನ್ನು ವಿತರಿಸಲಾಯಿತು. 32 ಮಂದಿ ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ  ವೇತನವನ್ನು ವಿತರಿಸಲಾಯಿತು.ಮತ್ತು ಅಸೌಖ್ಯದಿಂದ ಅಶಕ್ತರಾದ ಹಿರಿಯರಿಗೆ ಸಹಾಯಧನ ನೀಡಲಾಯಿತು.

vidyarthivetana  billava gurupura

 

ಈ ಸಂದರ್ಭದಲ್ಲಿ ಗುರುಪುರ ಗ್ರಾಮ ಪಂಚಾಯತಿ ಮತ್ತು ಗುರುಪುರ ವ್ಯವಸಾಯ ಸಹಕಾರಿ ಸೇವಾ ಸಂಘಕ್ಕೆ ಚುನಾಯಿತರಾಗಿ ಆಯ್ಕೆಯಾದ ಸಮಾಜದ ಸದಸ್ಯರನ್ನು ಬಿಲ್ಲವ ಸಮಾಜ ವತಿಯಿಂದ ಜು.19 ಭಾನುವಾರದಂದು ಗುರುಪುರದ ಬಿಲ್ಲವ ಸಮಾಜದಲ್ಲಿ ಗೌರವಿಸಲಾಯಿತು.

ಸಭೆಯ ಅಧ್ಯಕ್ಷರಾದ ಮಾಜಿ ತಾಲೂಕು ಪಂಚಾಯತ್ನ ಅಧ್ಯಕ್ಷರಾದ ಹರೀಶ್ ಮೂಡುಶೆಡ್ಯೆ ಅವರು ದೀಪಬೆಳಗಿಸಿ ಉದ್ಘಾಟಿಸಿ ಮಾತಾಡಿ ಎಲ್ಲಾ ಕ್ಷೇತ್ರಗಳಲ್ಲಿ ಬಿಲ್ಲವ ಸಮಾಜದ ಬಂಧುಗಳು ಮೂಂಚೂಣಿಯಲ್ಲಿದ್ದಾರೆ. ವಿದ್ಯಾರ್ಥಿ  ವೇತನವನ್ನು ಪಡೆದ ಮಕ್ಕಳು ಚೆನ್ನಾಗಿ ಕಲಿತು ಮುಂದೊಂದು ದಿನ ನೀವೂ ಕೂಡಾ ಈ ಸಂಘದ ಮುಖಾಂತರ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತರಾಗಬೇಕು.ತಮ್ಮ ಜೀವನದಲ್ಲಿ ನಾರಯಣ ಗುರು ಸ್ವಾಮಿಯ ತತ್ವವನ್ನು ಪಾಲಿಸಿ ಸಮಾಜಕ್ಕೆ ಒಳ್ಳೆಯ ಕೀರ್ತಿ  ತರುವಂತೆ ಆಗಬೇಕು ಎಂದರು.
ಮುಖ್ಯಅತಿಥಿಗಳಾಗಿ ಅಖಿಲ ಭಾರತ ಏಕೀಕರಣ ಸಮಿತಿಯ ಪ್ರಧಾನ ಕಾರ್ಯದರ್ಶಿ  ದೀಪಕ್ ಕೋಟ್ಯಾನ್ ಮಾತಾಡಿ ಸಮಾಜದ ಪರಿವರ್ತನೆ ಮಾಡಿ ಸಮಾಜಕ್ಕೆ ಶಕ್ತಿ ನೀಡಿದ ನಾರಯಣ ಗುರುಸ್ವಾಮಿಯನ್ನುನಾವೂ ಯಾವಾಗಲೂ ಸ್ಮರಿಸಬೇಕು.

ಮಕ್ಕಳು ಚೆನ್ನಾಗಿ ಕಲಿತು ಬಡವಿದ್ಯಾರ್ಥಿಗಳಿಗೆ ತಮ್ಮಿಂದ ಆದ ಸಹಾಯವನ್ನು ಮಾಡಬೇಕು ಮತ್ತು ಗ್ರಾಮ ಪಂಚಾಯತಿ ಮತ್ತು ಇತರ ಸಂಸ್ಥೆಗಳಲ್ಲಿ ಚುನಾಯಿತರಾದ ಸಮಾಜದ ಬಂಧುಗಳು ತಮ್ಮ ಅವದಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿ ಬಡ ಜನಸಾಮನ್ಯರ ಕಷ್ಟಗಳಿಗೆ ಸ್ಪಂದಿಸಬೇಕು ಎಂದರು.
ಸಂಘದ ಅಧ್ಯಕ್ಷ ಸುಧಾಕರ್ ಅಮೀನ್, ಸ್ಪೂರ್ತಿ  ಮಹಿಳಾ ಮಂಡಲದ ಅಧ್ಯಕ್ಷರಾದ ವಿನೋದ ಡಿ.ಅಂಚನ್, ಉಪಾಧ್ಯಕ್ಷ ರಾಜೇಶ್ ಪೂಜಾರಿ,ಕಾರ್ಯದರ್ಶಿ  ಮಾಧವ ಸುವರ್ಣ, ಜೊತೆ ಕಾರ್ಯದರ್ಶಿ  ದೀಪಕ್ ಬಂಗೇರ, ಸಂಘಟನಾ ಕಾರ್ಯದರ್ಶಿ  ದೊಂಬಯ್ಯ ಪೊನ್ನೆಲ, ಕೋಶಾಧಿಕಾರಿ ಶೀನ ಕೋಟ್ಯಾನ್ ಸಲಹೆಗಾರರಾದ ಚಂದ್ರಶೇಖರ ಬಳ್ಳಿ , ದೇವದಾಸ್ ಅಂಚನ್ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಸ್ಪೂರ್ತಿ  ಮಹಿಳಾ ಮಂಡಲ ಸದಸ್ಯರು ಉಪಸ್ಥಿತರಿದ್ದರು.
ದೀಪಕ್ ಬಂಗೇರ ಸ್ವಾಗತಿಸಿದರು, ಚಂದ್ರಶೇಖರ ಬಳ್ಳಿ ಪ್ರಸ್ತಾವಿಕ ಭಾಷಣ ಮಾಡಿದರು, ಮಾಧವ ಸುವರ್ಣ ವಂದಿಸಿದರು.

 

By suddi9

Leave a Reply

Your email address will not be published. Required fields are marked *