ಕೈಕಂಬ: ನಮ್ಮ ವೀರ ಯೋದರು ನಮ್ಮನ್ನು ಮಲಗಳು ಬಿಟ್ಟು ನಮ್ಮ ದೇಶವನ್ನು ಕಾಯುವಾಗ ನಾವು ಮಾತ್ರ ನಿಶ್ಚಿಂತೆಯಿಂದ ಜೀವನವನ್ನು ಸಾಗಿಸುತ್ತೇವೆ. ನಮ್ಮ ಭಾರತ ಮಾತೆಯ ರಕ್ಷಣೆ ನಮ್ಮ ಸೈನಿಕರಿಗೆ ಮಾತ್ರ ಅಲ್ಲ. ಅದು ಎಲ್ಲರ ಜವಾಬ್ದಾರಿ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ದೇಶ ರಕ್ಷಣೆಯ ಪವಿತ್ರ ಕಾರ್ಯಕ್ಕಾಗಿ ಪ್ರತಿಯೊಂದು ಮನೆಯ ಮಕ್ಕಳನ್ನು ಸೈನಿಕನಾಗಲು ಪ್ರೋತ್ಸಾಹ ನೀಡಬೇಕು ಎಂದು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಹೇಳಿದರು.

26 vp kargil vijaya din 1

26 vp kargil vijaya dinacharane

27vp kargil vijayosthava
ಭಾರತ ಮಾತಾ ಸೇವಾ ಸಮಿತಿ ಗುರುಪುರ ಕೈಕಂಬ ವತಿಯಿಂದ ನಡೆದ ಕಾರ್ಗಿಲ್ ವಿಜಯೋತ್ಷವ ದಿನದಂದು ಕಿನ್ನಿಕಂಬಳ ರಾಧಕೃಷ್ಣ ಭಜನಾಮಂದಿರದಲ್ಲಿ ನಿವೃತ ಯೋಧರನ್ನು ಗೌರವಿಸಿ ಮಾತನಾಡಿದರು.
ನಮ್ಮ ಭಾರತ ಮಾತೆಯ ಫೋಟೋ ಇಟ್ಟು ದೀಪ ಹಚ್ಚಿ ಪೂಜೆ ಮಾಡಿದರೆ ಸಾಕಾಗದು. ದೇಶದ ರಕ್ಷಣೆಗೆ ಮನೆಯ ಒಬ್ಬೊಬ್ಬರನ್ನು ಸೈನಿಕನಾಗುವಂತೆ ಪ್ರೇರೆಪಿಸಬೇಕು. ಮಕ್ಕಳಿಗೆ ಬಾಲ್ಯದಿಂದಲೇ ದೇಶಭಕ್ತಿ ಜೊತೆಗೆ ಶುಚಿತ್ವ ಮತ್ತು ಪರಿಸರ ಸಂರಕ್ಷಣೆಯ ಅರಿವು ಹಾಗೂ ಉತ್ತಮ ಸಂಸ್ಕಾರ ನೀಡುವ ಜವಾಬ್ದಾರಿ ಮಕ್ಕಳ ಪೋಷಕರ ಮೇಲಿದೆ. ಸೈನಿಕರು ಮಾತ್ರ ಭೂಮಿಯ ರಕ್ಷಣೆಯನ್ನು ಮಾಡುವಂತಹ ವೀರ ಯೋಧರು.

ಯಾವುದೇ ಜಾತಿ ಮತ ಧರ್ಮ ರಾಜಕೀಯ ಎನ್ನದೇ ನಮ್ಮ ದೇಶದ ರಕ್ಷಣೆಗೆ ಹೋರಾಡಿ ವೀರ ಮರಣವನ್ನು ಹೊಂದಿದ ಯೋಧರೇ ನಮ್ಮ ದೇಶದ ನಿಜವಾದ ಹೀರೋಗಳು. ಚಿತ್ರ ನಾಯಕರನ್ನು, ಕ್ರಿಕೆಟ್ ಆಟಗಾರರನ್ನು ಹೀರೋಗಳಾಗಿ ಬಿಂಬಿಸುವ ನಾವು ನಮ್ಮನ್ನು ಹಾಗೂ ನಮ್ಮ ತಾಯಿ ಭಾರತಾ ಮಾತೆಯನ್ನು ಕಣ್ಣಲ್ಲಿ ಕಣ್ಣಿಟ್ಟು ರಕ್ಷಣೆ ಮಾಡುವಂತಹ ಯೋಧರನ್ನು ನಿತ್ಯ ನೆನೆಯದಿರುವುದು ದುರಂತ ಎಂದರು.

ಕಾರ್ಗಿಲ್ ಸಮರದಲ್ಲಿ ಹುತಾತ್ಮರಾದ ಮತ್ತು ಭಾಗವಹಿಸಿದ ವೀರ ಯೋಧರನ್ನು ಸ್ಮರಿಸಿ, ಗೌರವಿಸಿ ರಾಷ್ಟ್ರಭಕ್ತಿಯನ್ನು ಜಾಗೃತಿಗೋಲಿಸುವ ಬಗ್ಗೆ ಕಟೀಲು ಪದವಿಪೂರ್ವಕಾಲೇಜು ಉಪನ್ಯಾಸಕರಾದ ಸೋಂದಾ ಭಾಸ್ಕರ ಭಟ್ ಉಪನ್ಯಾಸ ನೀಡಿದರು.
ಈ ಸಂಧರ್ಭದಲ್ಲಿ ಎಂಟು ಮಂದಿ ಸೇನೆಯಲ್ಲಿ ಕಾರ್ಯನಿರ್ವಹಿಸಿದ ಯೋಧರನ್ನು ಗೌರವಿಸಲಾಯಿತು. ರೋಹಿತ್ ಸುವರ್ಣ, ಪ್ರಾನ್ಸಿಸ್ ಪಾಯಿಸ್, ಜೆ.ಮೋಹನ್ದಾಸ್, ಏಕನಾಥ ಶೆಣ್ಯೆ,ಹೆರಾಲ್ಡ್ ಫೆರ್ನಾಡಿಸ್, ಕೃಷ್ಣಾನಂದ ಕಿಶೋರ್ ಕುಕ್ಕಟ್ಟೆ, ನರಸಿಂಹ ರಾವ್, ಎಲ್ ಎಲ್ ರೇಗೋ , ಪೂವಪ್ಪ ವಾಲಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಲೋಕನಾಥ ಬಜ್ಪೆ ವಂದೇಮಾತರಂ ಹಾಡಿದರು. ರೂಪೇಸ್ ಅಧ್ಯಪಾಡಿ ಪ್ರಾಸ್ತವಿಕವಾಗಿ ಮಾತನಾಡಿದರು. ಹರೀಶ್ ಮಟ್ಟಿ ಸ್ವಾಗತಿಸಿದರು. ಗಣೇಶ್ ಪಾಕಾಜೆ ನಿರೂಪಿಸಿದರು. ಸುದೇಶ್ ವಂದಿಸಿದರು.

 

By suddi9

Leave a Reply

Your email address will not be published. Required fields are marked *