ಬಂಟ್ವಾಳ : ಬಿ.ಸಿ.ರೋಡ್ ಮುಖ್ಯ ವೃತ್ತದ ಬಳಿ ಬಂಟ್ವಾಳ ಪುರಸಭೆಯ ವ್ಯಾಪ್ತಿಯಲ್ಲಿ ರಾ. ಹೆದ್ದಾರಿಯಲ್ಲಿ ಜಿಲ್ಲೆಗೆ ಮಾದರಿ 1. 40 ಕೋಟಿ ರೂ. ಮೊತ್ತದ ಟ್ರೀ ಪಾರ್ಕ್ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಆ. 2 ಭಾನುವಾರರಂದು ಶಿಲಾನ್ಯಾಸ ಮಾಡಿದರು.

0208bteph3ಶಿಲಾನ್ಯಾಸ ಸಂದರ್ಭ ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ, ಉಪಾಧ್ಯಕ್ಷೆ ಯಾಸ್ಮಿನ್, ಬುಡಾ ಅಧ್ಯಕ್ಷ ಪಿಯೂಸ್ ಎಲ್. ರೊಡ್ರಿಗಸ್, ನಿಗಮ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ಲಡ್ಕ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಚ್. ಖಾದರ್, ಜಿ. ಪಂ. ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ತಾ.ಪಂ.ಸದಸ್ಯ ಬಿ. ಪದ್ಮಶೇಖರ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ, ಪುರಸಭಾ ಸದಸ್ಯರಾದ ಜಗದೀಶ ಕುಂದರ್,ವಾಸು ಪೂಜಾರಿ, ಪಿ.ರಾಮಕೃಷ್ಣ ಆಳ್ವ, ಸದಾಶಿವ ಬಂಗೇರ, ಜಸಿಂತಾ ಡಿ’ಸೋಜ, ಸಂಜೀವಿನಿ, ಪ್ರತಿಭಾ ಸಾಲ್ಯಾನ್, ಪ್ರವೀಣ್ ,ಗಂಗಾಧರ, ಮಹಮ್ಮದ್ ನಂದರಬೆಟ್ಟು, ಮಹಮ್ಮದ್ ಶರೀಫ್, ಚಂಚಲಾಕ್ಷಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್ ಉಪಸ್ಥಿತರಿದ್ದರು.
ಮುಖ್ಯಾ„ಕಾರಿ ಲೀನಾ ಬ್ರಿಟ್ಟೊ, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ, ಪ್ರಭಾ ಪಾಲ್ಗೊಂಡಿದ್ದರು.
ಈ ಟ್ರೀ ಪಾರ್ಕ್‍ನಲ್ಲಿ ಒಂದು ಕಾರಂಜಿ ಸಹಿತ ಕೊಳ, ಕ್ಯಾಂಟೀನ್, ಶೌಚಾಲಯ, ನೆಲಕ್ಕೆ ಹುಲ್ಲಿನ ಹಾಸು, ತೆರೆದ ರಂಗಮಂದಿರ, ಮಕ್ಕಳ ಆಟೋಟದ ಪಾರ್ಕ್, ವಾಹನ ನಿಲುಗಡೆ, ವಿಶ್ರಾಂತ ಪೀಠೋಪಕರಣ, ವಿವಿಧ ಹೂವಿನ ಗಿಡಗಳು ಪ್ರದರ್ಶನ, ವಿದ್ಯುದ್ದೀಪಾಲಂಕಾರ, ಮುಂದುಗಡೆ ಗೇಟ್‍ಮತ್ತು ವಾಚ್‍ಮೆನ್ ಶೆಡ್ ಇತ್ಯಾದಿಗಳ ನಿರ್ಮಾಣ ಉದ್ದೇಶಿಸಿದೆ.
ಸುತ್ತಲೂ ಕಂಪೌಂಡ್ ನಿರ್ಮಿಸಲಾಗುತ್ತದೆ.
ಮಂಗಳೂರಿನ ಪ್ರಮೋದ್ ಎಂಬವರಿಗೆ ಗುತ್ತಿಗೆ ನೀಡಲಾಗಿದ್ದು ಒಂದು ವರ್ಷದಲ್ಲಿ ಇದರ ಕಾಮಗಾರಿ ಪೂರ್ತಿ ಆಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *