ಗ್ರಾ.ಪಂ. ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿನಂದನಾ ಸಭೆ-ಪಕ್ಷದ ವರ್ಚಸ್ಸು ಹೆಚ್ಚಿಸುವಲ್ಲಿ ಚುನಾಯಿತ ಸದಸ್ಯರಿಗೆ ಮಹತ್ವದ ಹೊಣೆ ಇದೆ -ಬಿ.ರಮಾನಾಥ ರೈ
ಬಂಟ್ವಾಳ : ಜನರ ನೋವು ನಲಿವುಗಳಿಗೆ ಸ್ಪಂದಿಸುವ ಕೆಲಸವನ್ನು ಪಕ್ಷ ಕಾರ್ಯಕರ್ತರು ಮಾಡಬೇಕು. ಮಹಾತ್ಮಾ ಗಾಂ„, ಇಂದಿರಾ ಗಾಂ„, ರಾಜೀವ ಗಾಂ„ಯವರು ಕಾಂಗ್ರೆಸ್ ಪಕ್ಷ ಕಟ್ಟುವುದಕ್ಕೆ ಜೀವ ನೀಡಿದ್ದಾರೆ. ಸಮಾಜದಲ್ಲಿ ಮತೀಯ ಸಾಮರಸ್ಯ ಉಳಿಸುವ ಕೆಲಸ ಪಕ್ಷ ಕಾರ್ಯಕರ್ತರಿಂದ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ಆ. 2ರಂದು ಬಿ.ಸಿ.ರೋಡ್ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದ ಜನ ಪ್ರತಿನಿ„ ಕಾರ್ಯಕರ್ತರಿಗೆ ನಡೆದ ಅಭಿನಂದನಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

0208bteph4
ಪಕ್ಷದ ವರ್ಚಸ್ಸು ಹೆಚ್ಚಿಸುವಲ್ಲಿ ಚುನಾಯಿತ ಸದಸ್ಯರಿಗೆ ಮಹತ್ವದ ಹೊಣೆ ಇದೆ. ಮುಂದಿನ ಹಂತದಲ್ಲಿ ತಾ.ಪಂ. ಮತ್ತು ಜಿ.ಪಂ. ಚುನಾವಣೆ ಬರಲಿದ್ದು ಅದಕ್ಕಾಗಿ ನಾವು ಸಜ್ಜಾಗಬೇಕು. ಸೋಲು ಗೆಲುವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರುವುದಾಗಿದೆ.
ಕಳೆದ ಅವ„ಯಲ್ಲಿ ಕಾಂಗ್ರೆಸ್ ಲೋಕ ಸಭೆಯಲ್ಲಿ ಕಡಿಮೆ ಮತ್ತು ರಾಜ್ಯ ವಿಧಾನ ಸಭೆಯಲ್ಲಿ ಅತ್ಯಂತ ಹೆಚ್ಚು ಸ್ಥಾನಗಳನ್ನು ಪಡೆಯುವ ಮೂಲಕ ಉತ್ತಮ ಫಲಿತಾಂಶ ನೀಡಿದೆ. ಮುಂದಿನ ಹಂತಕ್ಕೆ ನಾವು ಸಕ್ರಿಯರಾಗಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಬಡವರಿಗೆ, ಎಲ್ಲಾ ವರ್ಗದ ಜನಕ್ಕೆ ಪ್ರಾತಿನಿದ್ಯ ನೀಡಿದ ಪಕ್ಷ. ಪಂಚಾಯತ್ ಮಸೂದೆ, ಉಳುವವನೆ ಹೊಲದೊಡೆಯ ಮಸೂದೆ, ಬಡವರಿಗೆ ನಿವೇಶನ, ಅಕ್ರಮ ಸಕ್ರಮ, ಮಧ್ಯಾಹ್ನದ ಬಿಸಿಯೂಟ, ಭಾಗ್ಯಜ್ಯೋತಿ ಇತ್ಯಾದಿ ಯೋಜನೆಗಳನ್ನು ಜನ ಸಾಮಾನ್ಯರಿಗಾಗಿ ತಂದಿರುವ ಪಕ್ಷ.
ಪಕ್ಷವು ಯಾವುದೇ ಜನ ಮರಳು, ನಿರ್ದಿಷ್ಟ ಗುರಿ ಇಲ್ಲದ ಕಾರ್ಯಕ್ರಮ ಹಾಕಿಕೊಳ್ಳುವುದಿಲ್ಲ. ಸಮಾಜದ ಸಾಮರಸ್ಯ ಉಳಿಸುವ ಕೆಲಸ ಮಾಡುತ್ತದೆ ಎಂದರು.
ರಾಜ್ಯದಲ್ಲಿ ನಡೆಯವ ರೈತನ ಆತ್ಮಹತ್ಯೆ ನೋವಿನ ವಿಚಾರ. ಸಮಸ್ಯೆಗೆ ಪರಿಹಾರ ಆತ್ಮಹತ್ಯೆಯಲ್ಲ. ರೈತರ ಬಗ್ಗೆ ಪಕ್ಷದ ಸ್ಪಂದನವಿದೆ. ಮೀಟರ್ ಬಡ್ಡಿ ಲೆಕ್ಕಹಾಕಿ ವಸೂಲಿ ಮಾಡುವ ವ್ಯವಸ್ಥೆಯ ಬಗ್ಗೆ ರಾಜ್ಯದಲ್ಲಿ ಕಾನೂನು ಕ್ರಮ ಆಗಿದೆ. ಜಿಲ್ಲೆಯಲ್ಲೂ ಜಿಲ್ಲಾಡಳಿತ ಮೂಲಕ ಎಚ್ಚರಿಕೆ ನೀಡಿದೆ.
ಜಿಲ್ಲೆಗಾಗಿ ಮಾಜಿ ಸಚಿವ ಜನಾರ್ಧನ ಪೂಜಾರಿ, ಆಸ್ಕರ್ ಫೆರ್ನಾಂಡಿಸ್ ದೊಡ್ಡ ಕೊಡುಗೆ ನೀಡಿದ್ದಾರೆ. ಹಲವು ಜನೋಪಯೋಗಿ ಕೆಲಸಗಳು ನಡೆದಿದೆ ಎಂದು ಸಭೆಯಲ್ಲಿ ಸ್ಮರಸಿ ಅವರ ಕೆಲಸ ಕಾರ್ಯಗಳು ಕಾರ್ಯಕರ್ತರಿಗೆ ಮಾದರಿ ಎಂದರು.
ರಾಜ್ಯದಲ್ಲಿ ಅತ್ಯಂತ ಹೆಚ್ಚು ಪಂಚಾಯತ್ ಸದಸ್ಯರು ಆಯ್ಕೆಯಾಗಿರುವ ಕ್ಷೇತ್ರ ಬಂಟ್ವಾಳ. ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಕಟ್ಟುವ ಕೆಲಸ ಪಂಚಾಯತ್ ಚುನಾಯಿತ ಸದಸ್ಯರಿಂದ ಆಗಲಿ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಗೋಳ್ತಮಜಲು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತರಾಗಿ ಗೆದ್ದಂತಹ ಸದಸ್ಯೆ ವಸಂತಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಅವರಿಗೆ ಶಾಲು ಹೊದಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಬಂಟ್ವಾಳ ಪುರಸಭಾ ಅಧ್ಯಕ್ಷ ವಸಂತಿ ಚಂದಪ್ಪ, ಉಪಾಧ್ಯಕ್ಷೆ ಯಾಸ್ಮಿನ್, ಪಕ್ಷದ ಹಿರಿಯ ನಾಯಕ ಕೆ. ಹರಿಕೃಷ್ಣ ಬಂಟ್ವಾಳ್, ಬುಡಾ ಅಧ್ಯಕ್ಷ ಪಿಯೂಸ್ ಎಲ್.ರೊಡ್ರಿಗಸ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಚ್.ಖಾದರ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ್, ಸದಸ್ಯ ಬಿ.ಪದ್ಮಶೇಖರ ಜೈನ್,ಜಿ.ಪಂ. ಸದಸ್ಯರಾ ಮಮತಾ ಡಿ.ಎಸ್.ಗಟ್ಟಿ, ಎಂ.ಎಸ್. ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಪಕ್ಷ ನಾಯಕರಾದ ದಿವ್ಯಪ್ರಭಾ ಚಿಲ್ತಡ್ಕ, ಜಿಲ್ಲಾ ಯುವ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಲುಕ್ಮಾನ್, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕುಲಾಲ್ ಉಪಸ್ಥಿತರಿದ್ದರು.
ಕಾಂಗ್ರೆಸ್ ಪಕ್ಷ ಬೆಂಬಲಿಸಿ ವಿಜೇತರಾದ ಎಲ್ಲಾ ಗ್ರಾ.ಪಂ. ಸದಸ್ಯರನ್ನು ವೇದಿಕೆಗೆ ಕರೆದು ಶಾಲು ಹೊದಿಸಿ, ಹೂ ನೀಡಿ ಗೌರವಿಸಲಾಯಿತು.
ಬಂಟ್ವಾಳ ಪುರಸಭಾ ಸದಸ್ಯ ಸದಾಶಿವ ಬಂಗೇರ ಸ್ವಾಗತಿಸಿ, ಜಗದೀಶ ಕೊೈಲ ವಂದಿಸಿದರು. ರಾಜೀವ ಕಕ್ಕೆಪದವು ಮತ್ತು ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.

 

By suddi9

Leave a Reply

Your email address will not be published. Required fields are marked *