ಬಂಟ್ವಾಳ: ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಪೆರಾಜೆ ಆಶ್ರಯದಲ್ಲಿ 8ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷೀ ವ್ರತ ಪೂಜೆ, ರಕ್ಷಾ ಬಂಧನ ಕಾರ್ಯಕ್ರಮ ಪೆರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಆ. 28 ಶುಕ್ರವಾರ ಬೆಳಿಗ್ಗೆ 9.30ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕಾರಿ ಸಮಿತಿ ಅಧ್ಯಕ್ಷೆ ಭಾರತಿ ಜಯಾನಂದ ಪೆರಾಜೆ ತಿಳಿಸಿದ್ದಾರೆ.
ಮಹಿಳಾ ಭಕ್ತಾ„ಗಳಿಗೆ ಮಾತ್ರ ವ್ರತ ಪೂಜೆಗೆ ಕುಳಿತುಕೊಳ್ಳಲು ಅವಕಾಶ. ಪೂರಕ ವಸ್ತುಗಳನ್ನು ಭಕ್ತಾದಿಗಳೇ ತರಬೇಕು. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯುವುದು. ಪೂಜಾ ಸಂಕಲ್ಪದ ಮೊದಲು ಬಂದು ಕುಳಿತುಕೊಳ್ಳಲು ಸೂಚನೆ. ಅನ್ನ ಸಂತರ್ಪಣೆಗಾಗಿ ಹಸಿರುವಾಣಿ ಹೊರೆ ಕಾಣಿಕೆ ಸ್ವೀಕರಿಸಲಾಗುತ್ತದೆ. ಬೆಳಿಗ್ಗೆ 9ಗಂಟೆ ಮೊದಲು ಸ್ಥಳದಲ್ಲಿ ಇರಲು ಸೂಚನೆ ನೀಡಿದೆ.
ಇದೇ ಸಂದರ್ಭ ಸುಧಾ ಸೂರ್ಯನಾರಾಯಣ ಭಟ್ ಕಶೆಕೋಡಿ ಧಾರ್ಮಿಕ ಉಪನ್ಯಾಸ ನೀಡುವರು.