ಮುಂಬಯಿ (ಮಂಗಳೂರು): ಬಹುನಿರೀಕ್ಷಿತ ಬೊಳ್ಳಿ ಮೂವೀಸ್ ಲಾಂಛನದಡಿಯಲ್ಲಿ ತಯಾರಾದ`ಚಂಡಿಕೋರಿ’ ಚಲನಚಿತ್ರದ ಆಡಿಯೋ ರೈಟ್ಸ್ ಅನ್ನು ಹೆಸರಾಂತ ಆನಂದ್ ಆಡಿಯೋ ಸಂಸ್ಥೆ ಪಡೆದುಕೊಂಡಿದ್ದು, ಗುರುವಾರ ನಗರದ ಓಶ್ಯನ್ ಪರ್ಲ್ ಹೋಟೆಲ್‍ನಲ್ಲಿ ನಡೆದ ಸಮಾರಂಭದಲ್ಲಿ ಗಣ್ಯರು ಸಿ.ಡಿ. ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಸಿದ್ಧ ವಾಸ್ತುತಜ್ಞ ಪೆರ್ಣಂಕಿಲ ಹರಿದಾಸ್ ಭಟ್ ಅವರು, ದೇವದಾಸ್ ಕಾಪಿಕಾಡ್ ಅವರ ಶ್ರಮದಿಂದ ಬಿಡುಗಡೆಯ ಹಾದಿಯಲ್ಲಿರುವ ಚಂಡಿಕೋರಿ ಚಿತ್ರ ಯಶಸ್ಸನ್ನು ಪಡೆಯಲಿ. ತುಳು ಚಿತ್ರರಂಗ ಇನ್ನಷ್ಟು ಬೆಳಗಲಿ ಎಂದು ಶುಭ ಹಾರೈಸಿದರು. ಚಿತ್ರಕ್ಕೆ ಸಂಗೀತ ನಿರ್ದೇಶನ ದೇವದಾಸ್ ಕಾಪಿಕಾಡ್ ಅವರೇ ನೀಡಿದ್ದು, ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರು ಒಂದು ಹಾಡನ್ನು ಹಾಡುವ ಜೊತೆಗೆ ಸಹಕಾರ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅವರು ಮಾತಾಡಿ, ನಾನು ಇಲ್ಲಿಯವರೆಗೆ ಕೇವಲ ಸಂಗೀತ ನಿರ್ದೇಶನ ಮಾತ್ರ ಮಾಡುತ್ತಿದ್ದೆ. ಆದರೆ ಇದೇ ಮೊದಲ ಬಾರಿಗೆ ಹಾಡಿರುವುದು ಖುಷಿ ತಂದಿದೆ.
DSC_0005

DSC_0016

DSC_0024ಅದೂ ಮಾತೃಭಾಷೆ ತುಳುವಿನಲ್ಲಿ ಹಾಡಿದ್ದು ನನ್ನ ಪುಣ್ಯ ಎಂದರು. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತದ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿರುವ ದೇವದಾಸ್ ಕಾಪಿಕಾಡ್ ಅವರು ಮಾತಾಡಿ, ಚಿತ್ರವು ಸೊಗಸಾಗಿ ಮೂಡಿಬಂದಿದ್ದು, ಹಾಡುಗಳೂ ಅಷ್ಟೇ ಸುಮಧುರವಾಗಿವೆ. ಚಿತ್ರದ ನಾಲ್ಕು ಹಾಡುಗಳನ್ನು ಬಿಗ್ ಎಫ್.ಎಂ.ನಲ್ಲಿ ಪ್ರೀ ಲಾಂಚ್ ಮಾಡಿದ್ದು ಜನರನ್ನು ಮೋಡಿ ಮಾಡುತ್ತಿದೆ. ಇದೇ ಮೊದಲ ಬಾರಿಗೆ ನಾನೂ ಚಿತ್ರದಲ್ಲಿ ಹಾಡಿದ್ದು ನಾಯಕ ಅರ್ಜುನ್ ಕಾಪಿಕಾಡ್ ಕೂಡಾ ಒಂದು ಹಾಡನ್ನು ಹಾಡಿದ್ದಾರೆ. ಇನ್ನುಳಿದಂತೆ ಜನಪ್ರಿಯ ಗಾಯಕರಾದ ಮಧು ಬಾಲಕೃಷ್ಣನ್, ಅಪೂರ್ವ ಶ್ರೀಧರ್ ಕೂಡಾ ಹಾಡಿರುವುದು ಹಾಡುಗಳು ಇಂಪಾಗಿದೆ ಎಂದರು. ಕಾರ್ಯಕ್ರಮದಲ್ಲಿ ಹಾಜರಿದ್ದ `ಚಾಲಿಪೋಲಿಲು’ ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಅವರು ಮಾತಾಡಿ, ಜನರು ಚಿತ್ರವನ್ನು ಪ್ರೀತಿಯಿಂದ ಸ್ವೀಕರಿಸಿ ಗೆಲ್ಲಿಸಬೇಕು ಎಂದು ಶುಭ ಹಾರೈಸಿದರು. ಚಿತ್ರದ ನಿರ್ಮಾಪಕರಾದ ಶರ್ಮಿಳಾ ಕಾಪಿಕಾಡ್ ಹಾಗೂ ಸಚಿನ್ ಎ.ಎಸ್.ಉಪ್ಪಿನಂಗಡಿ, ಬೆಹರಿನ್ ಕನ್ನಡ ಸಂಘದ ಅಧ್ಯಕ್ಷ ರಾಜ್‍ಕುಮಾರ್, ಆನಂದ್ ಆಡಿಯೋ ಸಂಸ್ಥೆಯ ಶ್ಯಾಮ್ ಛಾಬ್ರಿಯಾ, ಅರ್ಜುನ್ ಕಾಪಿಕಾಡ್, ನವೀನ್ ಡಿ.ಪಡೀಲ್, ಭೋಜರಾಜ ವಾಮಂಜೂರು ವೇದಿಕೆಯಲ್ಲಿದ್ದರು. ಚಿತ್ರದ ನಾಯಕಿ ಕರೀಷ್ಮಾ ಅಮೀನ್, ನಟಿ ಮನೀಷಾ, ದ.ಕ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಚಾಲಿಪೋಲಿಲು ಚಿತ್ರ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಮತ್ತಿತರರು ಉಪಸ್ಥಿತರಿದ್ದರು. ಪತ್ರಕರ್ತ ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಚಂಡಿಕೋರಿ ಚಿತ್ರದಲ್ಲಿ ಅರವಿಂದ್ ಬೋಳಾರ್, ಸತೀಶ್ ಬಂದಲೆ, ಗೋಪಿನಾಥ್ ಭಟ್, ಚೇತನ್ ರೈ ಮಾಣಿ, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಉಮೇಶ್ ಮಿಜಾರ್, ಪಾಂಡುರಂಗ, ರಿಚರ್ಡ್ ಪಿಂಟೋ, ರಾಘವೇಂದ್ರ ಕಾರಂತ, ಮಾಸ್ಟರ್ ಕೃತಿನ್, ಶರ್ಮಿಳಾ ಕಾಪಿಕಾಡ್, ಸರೋಜಿನಿ ಶೆಟ್ಟಿ, ಸುಜಾತಾ ಶಕ್ತಿನಗರ, ಸುಮಿತ್ರಾ ರೈ, ಲಾವಣ್ಯ ಬಂಗೇರ, ನರೇಶ್ ಸಸಿಹಿತ್ಲು, ಶಶಿಧರ ಬೆಳ್ಳಾಯರು, ಸುನೀಲ್ ಇತ್ಯಾದಿ ಕಲಾವಿದರು ನಟಿಸಿದ್ದಾರೆ. ಛಾಯಾಗ್ರಹಣ ಪಿ.ಎಲ್.ರವಿ ಅವರದ್ದಾಗಿದ್ದು, ಸಂಕಲನ ಸುಜೀತ್ ನಾಯಕ್ ಮಾಡಿದ್ದಾರೆ. ಅಕುಲ್ ನೃತ್ಯ ಸಂಯೋಜಿಸಿದ್ದು, ಮಾಸ್ ಮಾದ ಸಾಹಸ ನೀಡಿದ್ದಾರೆ. ಚಂಡಿಕೋರಿ ಚಿತ್ರ ಸೆಪ್ಟಂಬರ್ ತಿಂಗಳಲ್ಲಿ 14 ಥಿಯೇಟರ್‍ಗಳಲ್ಲಿ ಬಿಡುಗಡೆಯಾಗಲಿದೆ.

By suddi9

Leave a Reply

Your email address will not be published. Required fields are marked *