ಶಕ್ತಿನಗರ:  ಕೊಂಕಣಿ ಭಾಷಿಗರ ಮಕ್ಕಳು ಮಾತ್ರ ಮಾತೃ ಭಾಷೆ ಕೊಂಕಣಿಯಲ್ಲಿಯೇ ಮಾತಾಡುವ ಮೂಲಕ ಕೊಂಕಣಿಗರು ಎನ್ನುವುದನ್ನು ಹೆಮ್ಮೆಯಿಂದ ಹೆಳಿಕೋಳ್ಳಬೇಕು ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರೋಣ್ ಕ್ಯಾಸ್ತಲಿನೊ ಅವರು ಹೇಳೀದರು.ಅವರು ಕೊಂಕಣಿ ಮಾನ್ಯತಾ ದಿನಾಚರಣೆಯ ಅಂಗವಾಗಿ ಆ.21 ರಂದು ಶಕ್ತಿನಗರದ ಕಲಾಂಗಣ್‍ನಲ್ಲಿ ನಡೆದ ಕೊಂಕಣಿ ಯುವ ಮಹೋತ್ಸವವನ್ನು ಉದ್ಘಾಟಿಸಿ ಮಾತಾನಾಡಿದರು.

_DSC9356

_DSC9354

_DSC9351

_DSC9350

_DSC9348

_DSC9359

_DSC9346

_DSC9345

_DSC9342

_DSC9339

_DSC9337

_DSC9336ಕೊಂಕಣಿ ಬಗೆಗಿನ ಅಭಿಮಾನ ಕೊಂಕಣಿ ಮಾನ್ಯತಾ ದಿನಾಚರಣೆಗೆ ಮಾತ್ರ ಸೀಮಿತವಾಗಿರದೆ ನಿರಂತರವಾಗಿರಬೇಕು ಎಂದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ, ಮಾಂಡ್ ಸೋಭಾಣ್, ಕೊಂಕಣಿ ಸಾಂಸ್ಕ್ರತಿಕ ಸಂಘ, ಕೊಂಕಣಿ ಪ್ರಚಾರ ಸಂಚಾಲನ್, ಕೊಂಕಣಿ ಯುವ ಆವಾಜ್, ನಾಚ್ ಸೊಭಾಣ್ ಮತ್ತು ಕಲಾಕುಲ್ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪಿ.ಯು.ಸಿ. ತರಗತಿಯ 12 ಹಾಗೂ ಪದವಿ ತರಗತಿಗಳ 15 ಕಾಲೇಜುಗಳ ಸುಮಾರು 750 ಮಂದಿ ವಿಧ್ಯಾರ್ಥಿಗಳು ಭಾಗವಹಿಸಿದ್ದರು. ಮಾಂಡ್ ಸೊಭಾಣ್ ಸಂಸ್ಥೆಯ ಗುರ್ಕಾರ್ ಎರಿಕ್ ಒಝೆರಿಯೋ, ಅಧ್ಯಕ್ಷ ಲೂಯಿ ಜೆ.ಪಿಂಟೊ, ಅಕಾಡೆಮಿಯ ರಿಜಿಸ್ಟ್ರಾರ್ ಡಾ/ದೇವದಾಸ್ ಪೈ, ರೋಶನ್ ಕ್ಯಾಸ್ತಲಿನೊ, ವಿದ್ಯಾ ಕಾಮತ್, ಕ್ರಿಸ್ಟೋವರ್ ಡಿಸೋಜಾ, ನಂದಿತಾ, ಸ್ಟ್ಯಾನ್ಲಿ ಬಂಟ್ವಾಳ್ ಮುಂತಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *